ಮಡಿಕೇರಿ, ಡಿ. ೧೨: ಮೂಡಬಿದ್ರೆಯಲ್ಲಿ ಇತ್ತೀಚೆಗೆ ನಡೆದ ರೋಟರಿ ಜಿಲ್ಲೆ ೩೧೮೧ ರ ಕ್ರೀಡಾಕೂಟದಲ್ಲಿ ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ನ ಸದಸ್ಯ ಕುಲ್ಲೇಟಿರ ಅಜಿತ್ ನಾಣಯ್ಯ ಅವರು ಐದು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
೫೦ ವರ್ಷ ಮೇಲ್ಪಟ್ಟವರಿಗಾಗಿ ನಡೆದ ಸ್ಪರ್ಧೆಯಲ್ಲಿ ೧೦೦, ೨೦೦, ೪೦೦ ಮೀಟರ್ ಓಟ, ಭಾರದ ಗುಂಡು ಎಸೆತ ಮತ್ತು ೪೦೦ ಮೀಟರ್ ನಡಿಗೆಯಲ್ಲಿ ಪ್ರಥಮ ಬಹುಮಾನ ಗಳಿಸಿ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು.