ಗೋಣಿಕೊಪ್ಪಲು, ಡಿ. ೧೨: ಸಡನ್‌ಡೆತ್‌ನಲ್ಲಿ ಕೋಣನಕಟ್ಟೆ ರೈರ‍್ಸ್ ತಂಡವನ್ನು ಸೋಲಿಸಿ ಆತಿಥೇಯ ಗೋಣಿಕೊಪ್ಪ ಕೈಕೇರಿಯ ಪ್ಲಾಂರ‍್ಸ್ ಕ್ಲಬ್ ೨ ದಿನಗಳ ಕಾಲ ನಡೆದ ಹೊನಲು ಬೆಳಕಿನ ೫ ಎ ಸೈಡ್ ರಿಂಕ್ ಹಾಕಿ ಚಾಂಪಿಯನ್‌ಶಿಪ್ ಅನ್ನು ತನ್ನದಾಗಿಸಿಕೊಂಡಿದೆ. ಕೋಣನಕಟ್ಟೆ ರೈರ‍್ಸ್ ರನ್ನರ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಇದೇ ಮೊದಲ ಬಾರಿಗೆ ಗೋಣಿಕೊಪ್ಪಲುವಿನ ಪ್ಲಾಂರ‍್ಸ್ ಕ್ಲಬ್ ವತಿಯಿಂದ ಹೊನಲು ಬೆಳಕಿನ ೫ ಎ ಸೈಡ್ ರಿಂಕ್ ಹಾಕಿಯನ್ನು ಏರ್ಪಡಿಸಲಾಗಿತ್ತು. ಜಿಲ್ಲೆಯ ೧೬ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಿತು. ಸೆಮಿಫೈನಲ್‌ಗೆ ಕೋಣನಕಟ್ಟೆ ರೈರ‍್ಸ್, ಪ್ಲಾಂರ‍್ಸ್ ಕ್ಲಬ್, ವೈಟ್ಸ್ ಹಾಗೂ ಫಾಲ್ಕನ್ ತಂಡಗಳು ಪ್ರವೇಶ ಪಡೆದವು. ಫೈನಲ್ ಪಂದ್ಯದಲ್ಲಿ ಕೋಣಕಟ್ಟೆ ರೈರ‍್ಸ್ ಹಾಗೂ ಗೋಣಿಕೊಪ್ಪ ಪ್ಲಾಂರ‍್ಸ್ ಕ್ಲಬ್ ನಡುವೆ ನಡೆಯಿತು.

ಅಂತಿಮ ಪಂದ್ಯವನ್ನು ಒಲಂಪಿಯನ್ ವಿ.ಆರ್. ರಘುನಾಥ್ ಉದ್ಘಾಟಿಸಿದರು. ೧೬ ತಂಡಗಳಲ್ಲಿ ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ ಕ್ರೀಡಾಪಟುಗಳು ಭಾಗವಹಿಸಿ ತಮ್ಮ ಪ್ರದರ್ಶನ ತೋರಿದರು. ಪ್ರದರ್ಶನ ಪಂದ್ಯವು ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ಹಾಗೂ ಮಡಿಕೇರಿಯ ಸಾಯಿ ನಡುವೆ ನಡೆಯಿತು. ಟೈ ಬ್ರೇಕರ್‌ನಲ್ಲಿ ಮಡಿಕೇರಿಯ ಸಾಯಿ ಮಹಿಳಾ ತಂಡ ಗೆಲವು ಸಾಧಿಸಿತ್ತು.

ಗೋಣಿಕೊಪ್ಪ ಪ್ಲಾಂರ‍್ಸ್ ಕ್ಲಬ್‌ನ ವತಿಯಿಂದ ನಡೆದ ೫ ಎ ಸೈಡ್ ರಿಂಕ್ ಹಾಕಿ ಪಂದ್ಯಾವಳಿಯ ಅಧ್ಯಕ್ಷತೆಯನ್ನು ಕ್ಲಬ್‌ನ ಅಧ್ಯಕ್ಷ ಸಣ್ಣುವಂಡ ಸುದೇಶ್ ವಹಿಸಿ ಮಾತನಾಡಿದರು.

ಚೆಪ್ಪುಡೀರ ಕಾರ್ಯಪ್ಪ ವೀಕ್ಷಕ ವಿವರಣೆ ನೀಡಿದರು. ಹಾಕಿ ಕ್ರೀಡಾಕೂಟದ ಸಂಚಾಲಕರುಗಳಾಗಿ ಸುಳ್ಳಿಮಾಡ ದೀಪಕ್, ಕಳ್ಳಿಚಂಡ ಗೌತಮ್ ಕಾರ್ಯನಿರ್ವಹಿಸಿದರು. ಕೊಡಗು ಪ್ಲಾಂರ‍್ಸ್ ಕ್ಲಬ್‌ನ ಕಾರ್ಯದರ್ಶಿಗಳಾದ ದೊಡ್ಡಮನೆ ಕೀರ್ತಿ ಕಿರಣ್, ಕ್ರೀಡೆಯ ಉಸ್ತುವಾರಿ ವಹಿಸಿದ್ದರು. ಸಮಾರಂಭದಲ್ಲಿ ನಿರ್ದೇಶಕರುಗಳಾದ ಹೊಟ್ಟೆಂಗಡ ಬೋಪಯ್ಯ, ತೀತಿರ ಧರ್ಮಜ, ಹೊಟ್ಟೆಂಗಡ ಹೇಮಂತ್ ಅಚ್ಚಪ್ಪ, ಆದೇಂಗಡ ಪ್ರದೀಪ್, ದೊಡ್ಡಮನೆ ಭವಿನ್, ಕೋದಂಡ ದೇವಯ್ಯ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.-ಹೆಚ್.ಕೆ.ಜಗದೀಶ್