ಐಗೂರು, ಡಿ. ೧೨: ಇಲ್ಲಿನ ಮಹಾತಾಯಿ ಹಾಗೂ ಪಾಷಾಣ ಮೂರ್ತಿ ದೇವಾಲಯದ ಮಧ್ಯಂತರ ಜಾತ್ರೋತ್ಸವ ಎರಡು ದಿನಗಳ ಕಾಲ ನಡೆಯಿತು. ಮೊದಲ ದಿನ ದೇವರ ಭಂಡಾರದ ಆಗಮನ ಪೂಜೆ ನಡೆಯಿತು. ನಂತರ ಪಾಷಾಣಮೂರ್ತಿ ದೈವದ ಕೋಲ ನೆರವೇರಿತು.
ಎರಡನೇ ದಿನ ಬೆಳಗ್ಗಿನ ಜಾವ ದೂಮಾವತಿ ದೈವದ ಕೋಲ, ಕೊರಗಜ್ಜ ದೈವದ ಕೋಲ, ಜಾಗದ ಗುಳಿಗ ದೈವದ ಕೋಲ ಮತ್ತು ಭಂಡಾರ ನಿರ್ಗಮನದ ಪೂಜೆಯೊಂದಿಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಈ ಪೂಜಾ ವಿಧಿವಿಧಾನಗಳಲ್ಲಿ ದೈವದರ್ಶಿಗಳಾದ ಎಸ್.ಪಿ. ಆನಂದ ಪೂಜಾರಿ ಮತ್ತು ದೈವ ನರ್ತಕರಾದ ಸುಳ್ಯದ ಬೊಳಿಮಜಲಿನ ಜಯರಾಮ ಭಾಗವಹಿಸಿದ್ದರು.