ಕುಶಾಲನಗರ, ಡಿ. ೧೨: ಶಿವಮೊಗ್ಗದ ನೆಹರು ಒಳಾಂಗಣ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕುಶಾಲನಗರದ ನ್ಯಾಷನಲ್ ಇನ್ಸಿ÷್ಟಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕುಶಾಲನಗರದ ಇಂಪನ ೧೪ ವರ್ಷದ ವಯೋಮಿತಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬ್ರಿಜೇಶ್ ಹಾಗೂ ತೆವೀನ್ ದ್ವಿತೀಯ ಸ್ಥಾನ ಪಡೆದರೆ. ಹಿತೇಶ್ ಹಾಗೂ ಮುಕುಂದ್ ತೃತೀಯ ಬಹುಮಾನ ಪಡೆದುಕೊಂಡರು.

ರಾಜ್ಯಮಟ್ಟದ ಕರಾಟೆ ಪಂದ್ಯಾ ವಳಿಯಲ್ಲಿ ಜಿಲ್ಲೆಯಿಂದ ಪ್ರತಿನಿಧಿಸಿದ ಕುಶಾಲನಗರದ ನ್ಯಾಷನಲ್ ಇನ್ಸಿ÷್ಟಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಶಾಲೆಯ ೧೧ ವಿದ್ಯಾರ್ಥಿಗಳ ಪೈಕಿ ಸಂಸ್ಥೆಯ ವಿದ್ಯಾರ್ಥಿಗಳು ಒಂದು ಚಿನ್ನದ ಪದಕ, ಎರಡು ಬೆಳ್ಳಿ ಪದಕ, ಎರಡು ಕಂಚಿನ ಪದಕಗಳನ್ನು ತಮ್ಮ ದಾಗಿಸಿ ಕೊಂಡಿದ್ದಾರೆ. ಇವರುಗಳಿಗೆ ಕರಾಟೆ ತರಬೇತುದಾರ ಸಂಕೇತ್ ತರಬೇತಿ ನೀಡಿದ್ದರು.

ಕುಶಾಲನಗರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ನ್ಯಾಷನಲ್ ಇನ್ಸಿ÷್ಟಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಶಾಲೆಯ ತರಬೇತುದಾರ ಸಂಕೇತ್, ಕರಾಟೆ ಕಲೆ ಸ್ವ ರಕ್ಷಣೆಯ ತಂತ್ರವನ್ನು ಕಲಿಸುವುದರ ಜೊತೆಗೆ, ದೇಶಪ್ರೇಮ, ನಾಯಕತ್ವದ ಗುಣಗಳನ್ನೂ ಸಹ ಬೆಳಸುತ್ತದೆ. ಇಂತಹ ಕಲೆಗಳನ್ನು ಕಲಿಸಲು ಪೋಷಕರು ಮಕ್ಕಳಿಗೆ ಸಹಕಾರ ನೀಡಬೇಕು ಎಂದರು.

ಈ ಸಂದರ್ಭ ತರಬೇತುದಾರ ಸಂಕೇತ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಪೋಷಕರಾದ ಪಿ.ಆರ್. ಬಿದ್ದಪ್ಪ, ಮಹೇಶ್, ರಮೇಶ್, ವಿ. ಕೃಷ್ಣ, ಪಿ.ಬಿ. ಸರಸ್ವತಿ, ಮಮತಾ, ಸುಮಲತಾ, ಅನಿತಾ ಸಂತೋಷ್, ನಳಿನಿ, ಮತ್ತಿತರರು ಇದ್ದರು.