ಮಡಿಕೇರಿ, ಡಿ. ೧೨: ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಮಡಿಕೇರಿ ಶಾಖೆ ವತಿಯಿಂದ ಸಿಎಸ್‌ಆರ್ ಚಟುವಟಿಕೆಯ ಭಾಗವಾಗಿ ರಕ್ತದಾನ ಶಿಬಿರ ನಡೆಯಿತು.

ಬ್ಯಾಂಕ್‌ನ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆಸ್ಪತ್ರೆಯ ಶಸ್ತç ಚಿಕಿತ್ಸಕ ಡಾ.ನಂಜುAಡಯ್ಯ, ಜೀವದ ಪ್ರಾಮುಖ್ಯತೆ ಮತ್ತು ರಕ್ತದ ಅವಶ್ಯಕತೆ ಬಗ್ಗೆ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿರುವ ವ್ಯಕ್ತಿಗೆ ತಿಳಿದಿರುತ್ತದೆ. ಒಬ್ಬ ವ್ಯಕ್ತಿಯ ಜೀವವನ್ನು ಉಳಿಸಲು ರಕ್ತದಾನ ಅತ್ಯಂತ ಅವಶ್ಯಕವಾಗಿದ್ದು, ಅದನ್ನು ಅರ್ಥಮಾಡಿಕೊಂಡು ದಾನಿಗಳು ರಕ್ತದಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು.

ಶಾಖಾ ವ್ಯವಸ್ಥಾಪಕ ಚಂಗAಡ ಪಿ.ದೇವಪ್ಪ ಮಾತನಾಡಿ, ಸಿಎಸ್‌ಆರ್ ಚಟುವಟಿಕೆಯ ಭಾಗವಾಗಿ ಕಳೆದ ೧೫ ವರ್ಷಗಳಿಂದ ರಕ್ತದಾನ ಕಾರ್ಯಕ್ರಮವನ್ನು ಆಯೋಜಿಸಿ ಕೊಂಡು ಬರಲಾಗುತ್ತಿದ್ದು, ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ವಿವಿಧ ಶಾಖೆಗಳಲ್ಲಿಯೂ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ರಕ್ತನಿಧಿ ವಿಭಾಗದ ಮುಖ್ಯಸ್ಥ ಡಾ.ಕೆ.ಪಿ.ಕರುಂಬಯ್ಯ, ಬ್ಯಾಂಕ್ ಶಾಖೆಯ ಕಾರ್ಯನಿರ್ವಾಹಕ ನಾರಾಯಣ ರಾಜೇಂದ್ರ, ಪ್ರಮುಖರಾದ ಅನಿಲ್ ಪಟುವರಿ ಉಪಸ್ಥಿತÀರಿದ್ದರು. ಶಿಬಿರದಲ್ಲಿ ೩೫ಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.