ಸುಂಟಿಕೊಪ್ಪ, ಡಿ. ೧೨: ಸುಂಟಿಕೊಪ್ಪ ಜೆಸಿಐ ಘಟಕದ ೨೦೨೩-೨೪ನೇ ಸಾಲಿನ ಅಧ್ಯಕ್ಷರಾಗಿ ಸಂಪತ್ ಕುಮಾರ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಸುಂಟಿಕೊಪ್ಪ ಧ್ವಾರಕ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸುಂಟಿಕೊಪ್ಪ ಘಟಕದ ಜೆಸಿಐ ಅಧ್ಯಕ್ಷರಾಗಿ ಉದ್ಯಮಿ ಸಂಪತ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ಆಯ್ಕೆಯಾದರು. ಜನವರಿ ೪ ರಂದು ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.