ಸಿದ್ದಾಪುರ ಡಿ, ೧೨: ಜಿಲ್ಲೆಯಲ್ಲಿ ತಲೆದೋರಿರುವ ವನ್ಯಜೀವಿ ಹಾವಳಿ ತಡೆಗೆ ಯೋಜನೆ ರೂಪಿಸಿ ತಾರ್ಕಿಕ ಅಂತ್ಯ ಕಾಣಿಸುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಕೊಡಗು ಜಿಲ್ಲಾ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದ್ದು, ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದೆ.
ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕ ವತಿಯಿಂದ ಪೊನ್ನಂಪೇಟೆ ಮತ್ತು ವೀರಾಜಪೇಟೆ ತಾಲೂಕು ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪಟ್ಟಣದ ಅರಣ್ಯ ಭವನದಲ್ಲಿ ಉಪಅರಣ್ಯ ಸಂರಕ್ಷಣಾಧಿಕಾರಿ ಬಿ.ಎಂ ಶರಣ ಬಸಪ್ಪ ಅವರ ಸಮ್ಮುಖದಲ್ಲಿ ರೈತರ ಸಂವಾದ ಏರ್ಪಡಿಸಲಾಗಿತ್ತು.
ತಿತಿಮತಿ ಘಟಕ ರೈತ ಪ್ರಮುಖÀ ಚೆಪ್ಪುಡಿರ ಕಾರ್ಯಪ್ಪ ಮಾತನಾಡಿ, ತಿತಿಮತಿ, ಮತ್ತಿಗೋಡು ಜಂಗಲಾಡಿಯಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ಆನೆ ಸಫಾರಿ ಮತ್ತು ಕಾಡಾನೆಗಳ ವೀಕ್ಷಣಾ ನಿಲಯ ವ್ಯೂ ಪಾಯಿಂಟ್ನಿAದ ಸನಿಹದ ಕಾಫಿ ತೋಟಗಳಿಗೆ ಮಾರಕವಾಗಿದೆ. ಕಾಡಾನೆಗಳನ್ನು ಪಳಗಿಸುವ ನೆಪದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಇದಾಗಲಿದೆ. ಪರಿಣಾಮ ಕಾಡಾನೆಗಳು ಸೇರಿದಂತೆ ಪಳಗಿದ ಆನೆಗಳು ಸಲೀಸಾಗಿ ತೋಟಗಳಿಗೆ ಲಗ್ಗೆಹಾಕಲಿದೆ.
(ಮೊದಲ ಪುಟದಿಂದ) ಇದರಿಂದ ತೋಟದ ಮಾಲೀಕರು, ರೈತರು ಸಮಸ್ಯೆಗಳಿಗೆ ಎದುರಾಗುವುದು ನಿಶ್ಚಿತ ಎಂದರು.
ನಾಂಗಾಲ ಗ್ರಾಮದ ನಿವಾಸಿ ಸುಂದರ ಅವರು ನಾಂಗಾಲ, ತೋತೇರಿ, ಕೊಕ್ಕ ವಿ.ಬಾಡಗ ಭಾಗಗಳಲ್ಲಿ ಸೋಲಾರ್ ಬೇಲಿ ಅಳವಡಿಸಿರುವುದು ನಿಷ್ಕಿçಯಗೊಂಡಿದೆ. ಇದರಿಂದ ಯಾವುದೇ ಉಪಯೋಗವಿಲ್ಲದಂತಾಗಿದೆ. ಸೋಲಾರ್ ಬೇಲಿಯಲ್ಲಿ ಅಳವಡಿಸಿರುವ ಬ್ಯಾಟರಿ ಎರಡು ವರ್ಷಗಳಿಂದ ಸ್ಥಗಿತವಾಗಿದ್ದು. ದುರಸ್ತಿಪಡಿಸಲು ಇಲಾಖೆಯು ಮುಂದಾಗಿಲ್ಲ ಎಂದು ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಡಿ.ಸಿ.ಎಫ್, ಸೋಲಾರ್ ಬ್ಯಾಟರಿ ದುರಸ್ತಿಗಾಗಿ ಕ್ರಮವಹಿಸಲಾಗುತ್ತದೆ ಎಂದು ಹೇಳಿದರು.
ವನ್ಯಜೀವಿ ದಾಳಿಗೊಳಗಾದವರಿಗೆ ಪರಿಹಾರ ಹಣದ ಬಗ್ಗೆ ಮನು ಸೋಮಯ್ಯ ಅವರು ಮಾಹಿತಿ ಬಯಸಿದರು. ಎ.ಸಿ.ಎಫ್ ಗೋಪಾಲ್ ಇದಕ್ಕೆ ಉತ್ತರಿಸಿ ತಿತಿಮತಿ ಭಾಗದಲ್ಲಿ ನವೆಂಬರ್ ತಿಂಗಳವರೆಗೆ ಯಾವುದೇ ಪರಿಹಾರ ಹಣವು ವಿತರಣೆಯಾಗಲು ಬಾಕಿ ಇಲ್ಲ. ಇಂದಿನವರೆಗೆ ರೂ. ೧.೩೦ ಕೋಟಿ ಹಣ ಫಲಾನುಭವಿಗಳಿಗೆ ವಿತರಣೆಯಾಗಿದೆ ಎಂದರು.
ಪೊನ್ನಂಪೇಟೆ ಭಾಗದಲ್ಲಿ ಪರಿಹಾರ ಹಣ ವಿತರಣೆಯಾಗಲು ಬಾಕಿಯಿದೆ ಎಂದು ಇಲಾಖೆಯ ಅಧಿಕಾರಿ ಶಂಕರಪ್ಪ ಅವರು ಮಾಹಿತಿ ನೀಡಿದರು.
ಸಂಚಾಲಕÀ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಮಾತನಾಡಿ, ಇಲಾಖೆಯ ಅಧಿಕಾರಿಗಳು ರೈತ ಸಂಘದ ಪದಾಧಿಕಾರಿಗಳು ಸೇರಿದಂತೆ ಇತರ ಸದಸ್ಯರ ಮೇಲೆ ವೃತಾರೋಪ ಹೊರಿಸಿ ಪ್ರಕರಣ ದಾಖಲು ಮಾಡಲಾಗುತ್ತಿದೆ. ರೈತ ಸಂಘದ ಸದಸ್ಯರ ಮೇಲಿನ ಪ್ರಕರಣವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಅರಣ್ಯ ಇಲಾಖೆಯು ಅಧಿಕಾರಿಗಳು ಮೂಲಭೂತ ಸಮಸ್ಯೆಗಳನ್ನು ಅರಿತು ಶಾಶ್ವತ ಯೋಜನೆಗಳನ್ನು ರೂಪಿಸಬೇಕು. ಅಲ್ಲದೆ ಕೃಷಿಯನ್ನು ನಂಬಿಕೊAಡು ಜೀವನ ಸಾಗಿಸುವ ರೈತರೊಂದಿಗೆ ಸೌಜನ್ಯದೊಂದಿಗೆ ವರ್ತಿಸಬೇಕು, ರೈತರು ಹೊತ್ತು ತರುವ ಅರ್ಜಿಗಳನ್ನು ವಿಳಂಬ ಮಾಡದೆ ಶೀಘ್ರ ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿದರು.
ಸಂವಾದದಲ್ಲ್ಲಿ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಕಾರ್ಯದರ್ಶಿ ಅಜ್ಜಮಾಡ ಚೆಂಗಪ್ಪ, ಕೋಶಾಧೀಕಾರಿ ಇಟ್ಟೀರ ಸಬಿತ ಭೀಮಯ್ಯ, ವಕೀಲರಾದ ಹೇಮಚಂದ್ರ, ಸಿದ್ದಾಪುರ ವಲಯದ ಬೋಪಣ್ಣ, ವೀರಾಜಪೇಟೆ ತಾಲೂಕು ಅಧ್ಯಕ್ಷ ಭವಿ ಕುಮಾರ್, ಅಮ್ಮತ್ತಿ ವಲಯದ ಅಧ್ಯಕ್ಷ ಪ್ರವೀಣ್ ಬೋಪಯ್ಯ, ಪ್ರಮುಖರಾದ ರಾಯ್ ಮಾದಪ್ಪ, ಚೊಟ್ಟೆಕಾಳಪಂಡ ಮನು, ಕಂಬ ಕಾರ್ಯಪ್ಪ, ಎ.ಸಿ.ಎಫ್. ಶಂಕರಪ್ಪ, ದೇವಯ್ಯ, ಪೊನ್ನಂಪೇಟೆ ಮತ್ತು ವೀರಾಜಪೇಟೆ ತಾಲೂಕು ವಿವಿಧ ಹೋಬಳಿಗಳ ರೈತ ಪ್ರಮುಖರು ಹಾಗೂ ಅರಣ್ಯ ಇಲಾಖೆಯ ವಿವಿಧ ಘಟಕಗಳ ಅಧಿಕಾರಿಗಳು ್ಲ ಹಾಜರಿದ್ದರು,
- ವಾಸು ಎ.ಎನ್