ಮಡಿಕೇರಿ, ಡಿ. ೧೧: ವ್ಯವಸಾಯಕ್ಕೆ ಒಳಪಟ್ಟ ಜಮೀನುಗಳ ಮಾರಾಟ ಹಾಗೂ ವರ್ಗಾವಣೆಗೆ ತಲೆದೋರಿರುವ ಸಮಸ್ಯೆ ಪರಿಹಾರಕ್ಕೆ ಪಹಣಿಗಳನ್ನು ಮೂಲ ಸರ್ವೆ ನಂಬರ್‌ಗಳಲ್ಲಿ ಒಗ್ಗೂಡಿಸಿ ಪೋಡಿ ಪ್ರಕ್ರಿಯೆ ಮೂಲಕ ಪ್ರತ್ಯೇಕ ಪಹಣಿ ದಾಖಲಿಸಲು ಕ್ರಮವಹಿಸಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನ ಪರಿಷತ್ತು ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಈ ಕುರಿತು ಸುಜಾ ಕುಶಾಲಪ್ಪ ಪ್ರಸ್ತಾಪಿಸಿ, ವ್ಯವಸಾಯಕ್ಕೆ ಒಳಪಟ್ಟ ಜಮೀನುಗಳ ಸರ್ವೆ ನಂಬರ್‌ಗಳನ್ನು ಸರಿಯಾಗಿ ಗುರುತು ಮಾಡಿ ನಮೂದಿಸಿ ವಿನಾಕಾರಣ ಹಿಸಾ ನಂಬರ್ ನೀಡುವಾಗ ಪಿ೧, ಪಿ೨ ಹಾಗೂ ಪಿ೩ ಇತ್ಯಾದಿ ಪಹಣಿಯಲ್ಲಿ ನಮೂದಿಸಿ ಆ ಸರ್ವೆ ನಂಬರ್‌ನ ಜಮೀನು ಮಾರಾಟ ಹಾಗೂ ವರ್ಗಾವಣೆ ಮಾಡಲು ಸಬ್ ರಿಜಿಸ್ಟಾçರ್ ಕಚೇರಿಯಲ್ಲಿ ನೋಂದಾವಣಿಗೆ ಅವಕಾಶವಿಲ್ಲದೆ ಭೂಹಿಡುವಳಿದಾರರು ತೊಂದರೆ ಅನುಭವಿಸುವುದರ ಕುರಿತು ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಸಚಿವರು, ಪ್ರತ್ಯೇಕ ಪಹಣಿ ದಾಖಲಿಸುವುದರ ಜೊತೆಗೆ ನಮೂನೆ ೧ ಹಾಗೂ ೫ ದಾಖಲಿಸಿ ನೀಡಿರುವ ಮಂಜೂರು ಜಮೀನುಗಳನ್ನು ದುರಸ್ತಿಪಡಿಸಲು ಕ್ರಮವಹಿಸಲಾಗುತ್ತಿದೆ ಎಂದು ಭರವಸೆ ನೀಡಿದರು.

೨೨,೧೮೩ ಎಕರೆ ಕಂದಾಯ ನಿಗದಿಗೆ ಬಾಕಿ

ಕಂದಾಯ ನಿಗದಿಪಡಿಸಿದ ಹಾಗೂ ಬಾಕಿ ಇರುವ ಜಮೀನುಗಳ ಕುರಿತು ಮಾಹಿತಿ ಬಯಸಿದ ಸುಜಾ ಅವರಿಗೆ ಉತ್ತರಿಸಿರುವ ಸಚಿವರು, ೫ ತಾಲೂಕು ಪೈಕಿ ೧೧,೧೮೩ ಎಕರೆ ಜಮೀನು ಕಂದಾಯ ನಿಗದಿಗೆ ಬಾಕಿ ಇದ್ದು, ೧,೪೪,೬೩೧.೮೫ ಎಕರೆ ಜಮೀನಿಗೆ ಕಂದಾಯ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಇದರೊಂದಿಗೆ ಖಾಲಿ ಬಾಣೆ ಜಾಗಗಳಿಗೆ ಕಂದಾಯ ನಿಗದಿಗೆ ಕ್ರಮವಹಿಸಲಾಗಿದ್ದು, ಕೊಡಗು ಜಿಲ್ಲೆಯ ೫ ತಾಲೂಕಿನಲ್ಲಿ ಒಟ್ಟು ೧೧,೧೮೩ ಎಕರೆ

ಖಾಲಿ ಬಾಣೆ ಜಮೀನು ಇದೆ ಎಂದು ವಿವರಿಸಿದರು.

(ಮೊದಲ ಪುಟದಿಂದ)

ಪೌತಿ ಖಾತೆ ತ್ವರಿತ ವಿಲೇವಾರಿ

ವಿಲೇವಾರಿಯಾಗದೆ ಬಾಕಿ ಇರುವ ಪೌತಿಖಾತೆಗಳಿಂದ ಸಮಸ್ಯೆ ಉಂಟಾಗುತ್ತಿದ್ದು, ವಿಲೇವಾರಿ ತಡವಾಗುತ್ತಿರುವ ಕುರಿತು ಸುಜಾ ಕುಶಾಲಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಕಂದಾಯ ಸಚಿವರು, ಸ್ವೀಕೃತವಾದ ಪೌತಿಖಾತೆ ಬದಲಾವಣೆ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಲಾಗಿದ್ದು, ಬಾಕಿ ಇರುವುದಿಲ್ಲ. ನೋಂದಾಯಿತ ದಸ್ತ್ತಾವೇಜುಗಳ ಮ್ಯುಟೇಷನ್‌ಗೆ ಸಂಬAಧಿಸಿದ ನೋಟೀಸ್ ಅವಧಿಯಲ್ಲಿ ಈ ಹಿಂದೆ ಇದ್ದ ೩೦ ದಿನಗಳಿಂದ ೭ ದಿನಗಳಿಗೆ ಹಾಗೂ ನೋಂದಾಯಿತವಲ್ಲದ ದಸ್ತಾವೇಜುಗಳ ಖಾತಾ ಬದಲಾವಣೆ ಮ್ಯುಟೇಷನ್ ಅವಧಿಯನ್ನು ೧೫ ದಿನಗಳಿಗೆ ಪರಿಷ್ಕರಿಸಲಾಗಿದೆ. ಅದರನ್ವಯ ಪೌತಿ ಖಾತೆ ವರ್ಗಾವಣೆಯನ್ನು ೧೫ ದಿನಗಳ ನೋಟೀಸ್ ಅವಧಿ ಮುಕ್ತಾಯಗೊಂಡ ಕೂಡಲೇ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಕಳೆದ ೩ ವರ್ಷಗಳಲ್ಲಿ ಕೊಡಗಿನಲ್ಲಿ ೮೫೪೯ ಅರ್ಜಿಗಳು ಸಲ್ಲಿಕೆಯಾಗಿವೆ. ಪೌತಿ ಖಾತೆ ಆಂದೋಲನದಲ್ಲಿ ಮಾತ್ರ ೩೭೯ ಅರ್ಜಿಗಳ ರೈತರಿಗೆ ಪೌತಿ ಖಾತೆ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯ ೮೩ ಅಂಗನವಾಡಿಗಳು ದುಸ್ಥಿತಿಯಲ್ಲಿದ್ದು, ಈ ಪೈಕಿ ೩ ಅಂಗನ ವಾಡಿಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷಿö್ಮ ಹೆಬ್ಬಾಳ್ಕರ್ ತಿಳಿಸಿದರು.

ಹದಗೆಟ್ಟ ಅಂಗನವಾಡಿಗಳ ಬಗ್ಗೆ ಗಮನ ಸೆಳೆದ ಸುಜಾ ಕುಶಾಲಪ್ಪ ಅವರು, ಸೂಕ್ತ ಕ್ರಮಕ್ಕೆ ಆಗ್ರಹಿಸಿದರು. ಸಚಿವೆ ಲಕ್ಷಿö್ಮ ಈ ಬಗ್ಗೆ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು ೮೮೩ ಅಂಗನವಾಡಿಗಳಿದ್ದು, ೭೫೯ ಅಂಗನವಾಡಿಗಳು ಸ್ವಂತ ಕಟ್ಟಡವನ್ನು ಹೊಂದಿವೆ. ೫೪ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆೆ.

ತೀರ ದುಸ್ಥಿತಿಯಲ್ಲಿರುವ ೭೪ ಅಂಗನವಾಡಿ ಕೇಂದ್ರಗಳನ್ನು

ಅನಿರ್ಬಂಧಿತ ಅನುದಾನದಡಿ ದುರಸ್ತಿಪಡಿಸಲಾಗುವುದು. ಉಳಿದ ಕೇಂದ್ರಗಳನ್ನು ಅನುದಾನದ ಲಭ್ಯತೆ ಅನುಗುಣವಾಗಿ ದುರಸ್ತಿಪಡಿಸಲಾಗುವುದು ಎಂದರು. ಜಿಲ್ಲೆಯಲ್ಲಿ ೩೭ ಪಿಡಿಓ ಹುದ್ದೆಗಳು ಖಾಲಿ ಇದ್ದು, ೬೬ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸುಜಾ ಪ್ರಶ್ನೆಗೆ ಮಾಹಿತಿ ನೀಡಿದರು.

ಪ್ರಬಾರದ ಮೇಲೆ ೩೮ ಪಿಡಿಓಗಳು ಕಾರ್ಯನಿರ್ವಹಿಸುತ್ತಿದ್ದಾರೆ. ನೇರನೇಮಕಾತಿಗೆ ಲೋಕ ಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಿಡಿಓ ವೃಂದಕ್ಕೆ ಗ್ರಾ.ಪಂ. ಕಾರ್ಯದರ್ಶಿ ಗ್ರೇಡ್-೧ ಅರ್ಹ ಸಿಬ್ಬಂದಿಗಳನ್ನು ಜೇಷ್ಠತೆ ಮತ್ತು ಅರ್ಹತೆ ಆಧಾರದಲ್ಲಿ ಮುಂಬಡ್ತಿ ನೀಡಲು ಕ್ರಮವಹಿಸಲಾಗುತ್ತಿದೆ ಎಂದು ವಿವರ ನೀಡಿದರು.