ಮಡಿಕೇರಿ, ಡಿ.೧೧: ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜ ಹಾಗೂ ಮೊಗೇರ ಫುಟ್ಬಾಲ್ ಕ್ಲಬ್ ವತಿಯಿಂದ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್‌ನ ಚಾಂಪಿಯನ್ ಆಗಿ ಸೋಮವಾರ ಪೇಟೆಯ ಫಿಯೋನಿಕ್ಸ್ ಎಫ್‌ಸಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಾಲಿಬೆಟ್ಟ ಎಫ್‌ಸಿ ತಂಡ ದ್ವಿತೀಯ ಹಾಗೂ ಇಶಾನಿ ಎಫ್‌ಸಿ ತಂಡ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ.

ನಗರದ ಮ್ಯಾನ್ಸ್ ಕಾಂಪೌAಡ್ ಬಳಿಯ ಫುಟ್ಬಾಲ್ ಮೈದಾನದಲ್ಲಿ ನಡೆದ ಲೀಗ್ ಪಂದ್ಯಾವಳಿಯಲ್ಲಿ ಒಟ್ಟು ಎಂಟು ತಂಡಗಳು ಪಾಲ್ಗೊಂಡಿದ್ದವು. ಈ ಪೈಕಿ ಅಂತಿಮ ಹಂತಕ್ಕೆ ಬಂದಿದ್ದ ಫಿಯೋನಿಕ್ಸ್ ಎಫ್‌ಸಿ ತಂಡ ಪಾಲಿಬೆಟ್ಟ ಎಫ್‌ಸಿ ತಂಡವನ್ನು ೨-೦ ಗೋಲುಗಳ ಅಂತರದಿAದ ಮಣಿಸಿ ಚಾಂಪಿಯನ್ ಪಟ್ಟ ಗಳಿಸಿತು. ರೋಚಕತೆಯಿಂದ ಕೂಡಿದ್ದ ಪಂದ್ಯಾವಳಿಯ ಪೂರ್ಣಾವಧಿಯಲ್ಲಿ ಯಾವದೇ ಗೋಲು ದಾಖಲಾಗದ್ದರಿಂದ ಪೆನಾಲ್ಟಿ ಶೂಟೌಟ್ ಅವಕಾಶ ನೀಡಲಾಯಿತು. ಇದರಲ್ಲಿ ಫಿಯೋನಿಕ್ಸ್ ತಂಡ ೨ ಗೋಲು ದಾಖಲಿಸುವ ಮೂಲಕ ಗೆಲುವಿನ ನಗು ಬೀರಿತು.

ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಫಿಯೋನಿಕ್ಸ್ ತಂಡ ಮಾನ್ವಿಕ್ ಎಫ್‌ಸಿ ತಂಡದ ವಿರುದ್ಧ ೩-೦ಗೋಲುಗಳ ಅಂತರದಿAದ ಗೆಲುವು ಸಾಧಿಸಿತು. ಫಿಯೋನಿಕ್ಸ್ ಪರ ಪ್ರಶಾಂತ್ ಹ್ಯಾಟ್ರಿಕ್ ಗೋಲು ದಾಖಲಿಸುವದರ ಮೂಲಕ ಗೆಲುವು ತಂದು ಕೊಟ್ಟರು. ಎರಡನೇ ಸೆಮಿಫೈನಲ್‌ನಲ್ಲಿ ಮೊಗೇರ ಎಫ್‌ಸಿ ಪಾಲಿಬೆಟ್ಟ ತಂಡ ಇಶಾನಿ ಎಫ್‌ಸಿ ಗೋಣಿಕೊಪ್ಪ ತಂಡವನ್ನು ಮಣಿಸಿತು.

(ಮೊದಲ ಪುಟದಿಂದ) ಪೂರ್ಣಾವದಿಯಲ್ಲಿ ಯಾವದೇ ಗೋಲು ದಾಖಲಾಗದ ಹಿನ್ನೆಲೆಯಲ್ಲಿ ಪೆನಾಲ್ಟಿ ಶೂಟೌಟ್ ಅವಕಾಶ ನೀಡಲಾಯಿತು. ಅದರಲ್ಲೂ ೨-೨ ಗೋಲುಗಳಿಂದ ಮತ್ತೆ ಸಮಾನಾದ ಹಿನ್ನೆಲೆಯಲ್ಲಿ ಸಡನ್ ಡೆತ್ ಅವಕಾಶ ನೀಡಲಾಗಿ ಅದರಲ್ಲಿ ಪಾಲಿಬೆಟ್ಟ ತಂಡ ೧-೦ ಗೋಲಿನಿಂದ ಜಯಗಳಿಸಿ ಫೈನಲ್‌ಗೆ ಪ್ರವೇಶಿಸಿತು.

ತೃತೀಯ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಇಶಾನಿ ಎಫ್‌ಸಿ ತಂಡ ಮಾನ್ವಿಕ್ ಎಫ್‌ಸಿ ತಂಡವನ್ನು ೬-೫ ಗೋಲುಗಳಿಂದ ಸೊಲಿಸಿತು. ಪೂರ್ಣಾವಧಿಯಲ್ಲಿ ಯಾವದೇ ಗೋಲು ದಾಖಲಾಗದ ಹಿನ್ನೆಲೆಯಲ್ಲಿ ಪೆನಾಲ್ಟಿ ಶೂಟೌಟ್ ನೀಡಲಾಯಿತು. ಅದರಲ್ಲೂ ೫-೫ ಗೋಲುಗಳ ಸಮಬಲ ಸಾಧಿಸಿದ್ದರಿಂದ ಸಡನ್ ಡೆತ್ ಅವಕಾಶ ನೀಡಲಾಗಿ ಗೋಣಿಕೊಪ್ಪ ತಂಡ ೧-೦ ಗೋಲಿನಿಂದ ಜಯಗಳಿಸಿತು.

ಮೊಗೇರ ಬಾಲಕಿಯರಿಗಾಗಿ ನಡೆದ ಪಂದ್ಯಾವಳಿಯಲ್ಲಿ ಸುಂಟಿಕೊಪ್ಪ ಎಫ್‌ಸಿ ತಂಡ ಮಡಿಕೇರಿ ಎಫ್‌ಸಿ ತಂಡವನ್ನು ೧-೦ ಗೋಲುಗಳ ಅಂತರದಿAದ ಸೋಲಿಸಿ ಪ್ರಥಮ ವರ್ಷದ ಮೊಗೇರ ಚಾಂಪಿಯನ್ ಆಗಿ ಹೊರಹೊಮ್ಮಿತು. ಪಂದ್ಯಾವಳಿಯ ತೀರ್ಪುಗಾರರಾಗಿ ಲೋಹಿತ್ (ಪಿಕ), ದಿವಾಕರ ಹಾಗೂ ಬಿಬ್ಲ ಕಾರ್ಯನಿರ್ವಹಿಸಿದರು.

ಬಹುಮಾನ ವಿತರಣೆ

ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಸಂಜೆ ನಡೆಯಿತು. ಅತಿಥಿಗಳಾಗಿ ಪಾಲ್ಗೊಂಡಿದ್ದ ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಸದಸ್ಯ ಜಾನ್ಸನ್ ಪಿಂಟೋ ಮಾತನಾಡಿ, ಇಂತಹ ಕ್ರೀಡಾಕೂಟಗಳಿಂದ ಸಮಾಜದ ಸಂಘಟನೆಯಾಗುತ್ತದೆ. ಪ್ರತಿಭೆಗಳಿಗೆ ಅವಕಾಶ ನೀಡಿದಂತಾಗುತ್ತದೆ. ಕ್ರಿಕೆಟ್, ಇನ್ನಿತರ ಕ್ರೀಡೆಯೊಂದಿಗೆ ಫುಟ್ಬಾಲ್ ಆಟಕ್ಕೂ ಅವಕಾಶ ನೀಡಿರುವದು ಉತ್ತಮ ಕಾರ್ಯವಾಗಿದೆ. ಅದರಲ್ಲೂ ಬಾಲಕಿಯರು ಆಟವಾಡಿರುವದು ಹೆಮ್ಮೆಯ ವಿಚಾರ. ಇದನ್ನು ಹೀಗೇ ಮುಂದುವರಿಸಿಕೊAಡು ಹೋಗುವಂತೆ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೊಡಗು ಮೊಗೇರ ಫುಟ್ಬಾಲ್ ಕ್ಲಬ್‌ನ ಕಾರ್ಯದರ್ಶಿ ವಿವೇಕ್ ಕಡಗದಾಳು ಮಾತನಾಡಿ; ಮೊಗೇರ ಸಮಾಜದಲ್ಲಿ ಸಾಕಷ್ಟು ಮಂದಿ ಫುಟ್ಬಾಲ್ ಆಟಗಾರರಿದ್ದಾರೆ. ಅವರುಗಳಿಗೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಆಸಕ್ತರನ್ನು ಸೇರಿಸಿಕೊಂಡು ಕ್ಲಬ್ ರಚನೆ ಮಾಡಿ ದಾನಿಗಳ ನೆರವಿನಿಂದ ಪ್ರಥಮ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಮುಂದುವರಿಸಿಕೊAಡು ಹೋಗುವ ಇರಾದೆಯಿದ್ದು, ಎಲ್ಲರೂ ಸಹಕಾರ ನೀಡುವಂತೆ ಕೋರಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ಮೊಗೇರ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಜನಾರ್ಧನ ಮರಗೋಡು, ಶಕ್ತಿ ಪತ್ರಿಕೆ ಉಪ ಸಂಪಾದಕ ಕುಡೆಕಲ್ ಸಂತೋಷ್, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಕ್ರಿಸ್ಟೋಫರ್, ದಾನಿ ಗಣೇಶ್ ಹೊಸೂರು, ಸಮಾಜದ ಹಿರಿಯರಾದ ಪೊಡಿಯ ಹಾಗೂ ಸೋಮ, ಮೊಗೇರ ಫುಟ್ಬಾಲ್ ಕ್ಲಬ್ ಅಧ್ಯಕ್ಷ ಎಂ.ಎA.ಅಶೋಕ, ಆಯೋಜಕರಾದ ರಮೇಶ್ ಪಿ.ಸಿ. ಹೆಬ್ಬೆಟ್ಟಗೇರಿ, ದಿನೇಶ್ ಮಡಿಕೇರಿ, ದರ್ಶಿತ್ ಹೆಬ್ಬೆಟ್ಟಗೇರಿ, ದಿನೇಶ್ ಹೆಬ್ಬೆಟ್ಟಗೇರಿ, ಸುರೇಶ್ ಹಾಗೂ ರಕ್ಷಿತಾ ಪಿ.ಕೆ. ಕಡಗದಾಳು ಇದ್ದರು. ವಿಜೇತ ತಂಡಕ್ಕೆ ರೂ ೨೫ಸಾವಿರ, ದ್ವಿತೀಯ ಸ್ಥಾನಿಗೆ ರೂ.೧೫ಸಾವಿರ ನಗದು ಹಾಗೂ ಟ್ರೋಫಿ ಬಹುಮಾನವಾಗಿ ನೀಡಲಾಯಿತು.

ವೈಯಕ್ತಿಕ ಬಹುಮಾನಗಳು

ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಫಿಯೋನಿಕ್ಸ್ ತಂಡದ ಪ್ರಶಾಂತ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದುಕೊಂಡರು. ಉತ್ತಮ ಗೋಲ್ ಕೀಪರ್ ಆಗಿ ಟೀಂ ಹಂರ‍್ಸ್ ತಂಡದ ರಮೇಶ್, ಉತ್ತಮ ಡಿಫೆಂಡರ್ ಆಗಿ ಇಶಾನಿ ಎಫ್‌ಸಿ ತಂಡದ ದಿನೇಶ್, ಉದಯೋನ್ಮುಖ ಆಟಗಾರನಾಗಿ ಹಂರ‍್ಸ್ ತಂಡದ ಚಂಪಕ್, ಅತ್ಯಧಿಕ ಸ್ಕೋರರ್ ಆಗಿ ಮೊಗೇರ ಎಫ್‌ಸಿ ತಂಡದ ಪಿಟ್ಟಿ ಪ್ರವೀಣ್ ಬಹುಮಾನ ಪಡೆದುಕೊಂಡರೆ, ಉತ್ತಮ ತಂಡ ಪ್ರಶಸ್ತಿಯನ್ನು ಮಾನ್ವಿಕ್ ಎಫ್‌ಸಿ ತಂಡ ಪಡೆದುಕೊಂಡಿತು.