ಐಗೂರು, ಡಿ. ೧೨: ಸ್ಥಳೀಯ ವಾಲಿಬಾಲ್ ಫ್ರೆಂಡ್ಸ್ ಹೊಸ ತೋಟ ವತಿಯಿಂದ ದಿವಂಗತ ಪ್ರತಾಪ್ ಜಂಬೂರು ಅವರ ಜ್ಞಾಪಕಾರ್ಥವಾಗಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟಕ್ಕೆ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಚಾಲನೆ ನೀಡಿದರು.
ಸೋಮವಾರಪೇಟೆ ತಾಲೂಕಿನ ರೈತ ಮುಖಂಡರಾದ ಕೀಜನ ಲಕ್ಷö್ಮಣ ಅವರು ಜಿಲ್ಲಾಮಟ್ಟದ ಈ ಪಂದ್ಯಾಟವನ್ನು ಮುಂದೆ ರಾಜ್ಯಮಟ್ಟದವರೆಗೆ ನಡೆಸಲು ಈ ಭಾಗದ ಜನರ ಸಹಕಾರ ಎಂದಿಗೂ ಇದೆ ಎಂದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಪೂರ್ತಿ ಕ್ಲಬ್ಬಿನ ಗೌತಮ್ ಶಿವಪ್ಪ, ಲಯನ್ಸ್ನ ರಕ್ಷಿತ್, ಉಲ್ಲಾಸ್ ,ಪಂಚಾಯಿತಿ ಉಪಾಧ್ಯಕ್ಷ ಸಲೀಂ, ಮಧು, ಸಿದ್ದಿಕ್ ಮತ್ತು ಸೈಯದ್ ಬಶೀರ್ ಉಪಸ್ಥಿತರಿದ್ದರು.
ಮನೋರಂಜನೆಗಾಗಿ ನಡೆದ ಹಗ್ಗ ಜಗ್ಗಾಟದಲ್ಲಿ ಕುಂಬಾರ ಬಾಣೆ ತಂಡ ಪ್ರಥಮ ಸ್ಥಾನ ಗಳಿಸಿದ್ದು, ಈ ಪಂದ್ಯಾಟದಲ್ಲಿ ಜಿಲ್ಲೆಯ ಒಟ್ಟು ೨೦ ತಂಡಗಳು ಭಾಗವಹಿಸಿದ್ದವು. ರಾಜ್ಯ ಮತ್ತು ರಾಷ್ಟçಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಸ್ಥಳೀಯ ಪ್ರತಿಭೆ ಸಂತೋಷ್ ಮತ್ತು ಮಾಲ್ದಾರೆಯ ಸ್ಯಾಂಡಿಯವರ ಆಟ ಪ್ರೇಕ್ಷಕರ ಮನಸೂರೆಗೊಂಡಿತು.
ಈ ಪಂದ್ಯಾಟದಲ್ಲಿ ಭಗವತಿ ತಂಡ ಮಡಿಕೇರಿ, ರಿಫಾ ಫ್ರೆಂಡ್ಸ್ ಹೊಸ ತೋಟ, ವರದ ಫ್ರೆಂಡ್ಸ್ ಹೊಸಕೋಟೆ, ಮತ್ತು ರೋಹಿತ್ ಫ್ರೆಂಡ್ಸ್ ಕುಂಬಾರ ಬಾಣೆ, ತಂಡಗಳು ಸೆಮಿಫೈನಲ್ ಹಂತಕ್ಕೆ ತಲುಪಿದ್ದ ತಂಡಗಳಾಗಿದ್ದು, ಕೊನೆಗೆ ಈ ಗುಂಪಿನಿAದ ರೋಹಿತ್ ಫ್ರೆಂಡ್ಸ್ ಕುಂಬಾರ ಬಾಣೆ ಮತ್ತು ರಿಫಾ ಫ್ರೆಂಡ್ಸ್ ಹೊಸತೋಟ ಫೈನಲ್ ಪಂದ್ಯಾಟದ ಹಂತಕ್ಕೆ ತಲುಪಿದವು. ೧೫ ಅಂಕದ ಮೂರು ಸೆಟ್ಟಿನ ಪಂದ್ಯಾಟದಲ್ಲಿ ಎರಡು ಸೆಟ್ಟಿನ ಪಂದ್ಯಾಟವನ್ನು ರಿಫಾ ಫ್ರೆಂಡ್ಸ್ ಹೊಸ ತೋಟ ಗೆಲ್ಲುವ ಮೂಲಕ ಪ್ರಥಮ ಬಹುಮಾನದ ನಗದು ರೂ. ೧೫,೦೦೦ ಮತ್ತು ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ರೋಹಿತ್ ಫ್ರೆಂಡ್ಸ್ ಕುಂಬಾರಬಾಣೆ ದ್ವಿತೀಯ ಬಹುಮಾನದ ನಗದು ರೂ. ೮,೦೦೦ ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ವರದ ಫ್ರೆಂಡ್ಸ್ ಹೊಸಕೋಟೆ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಈ ಪಂದ್ಯಾಟದ ಬೆಸ್ಟ್ ಅಟ್ಯಾಕರ್ ಆಗಿ ರಿಫಾ ತಂಡದ ಹೊಸ ತೋಟದ ಸುಹೇಲ್, ಬೆಸ್ಟ್ ಡಿಫೆಂಡರ್ ಆಗಿ ರೋಹಿತ್ ಫ್ರೆಂಡ್ಸ್ನ ಬದ್ರು ಬಹುಮಾನ ಗಿಟ್ಟಿಸಿಕೊಂಡರು. ಅಮೃತರಾಜ್ ತಾಕೇರಿ ಮತ್ತು ರಾಜೇಶ್ ಸಿದ್ದಲಿಂಗಪುರ ಅವರು ತೀರ್ಪು ಗಾರರಾಗಿ, ವೀಕ್ಷಣೆ ವಿವರಣೆಗಾರರಾಗಿ ರಾಘವ ಕಾರ್ಯನಿರ್ವಹಿಸಿದರು. ಪೊಲೀಸ್ ಬಂದೋಬಸ್ತ್ ಇದ್ದು, ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಗೌತಮ್ ಶಿವಪ್ಪ, ಕೆ.ಕೆ. ರವೀಂದ್ರ, ಉಲ್ಲಾಸ್, ಮಧುಸೂದನ್, ಜಿಮ್ಮಿ ಸಮೀರ್, ಹುಸೇನ್, ಸಿದ್ದಿಕ್ ಮತ್ತು ಕಾರ್ತಿಕ್ ಉಪಸ್ಥಿತರಿದ್ದರು.