ಕುಶಾಲನಗರ, ಡಿ. ೧೨ : ಉಡುಪಿ ಶ್ರೀ ಪುತ್ತಿಗೆ ಮಠ ಇವರ ಮಾರ್ಗದರ್ಶನದಲ್ಲಿ ಕುಶಾಲನಗರ ಕೋಟಿ ಗೀತಾ ಲೇಖನ ಯಜ್ಞ ಪ್ರಚಾರ ಸಮಿತಿ ಸಹಯೋಗ ದೊಂದಿಗೆ ತಾ. ೨೬ ರಿಂದ ಎರಡು ದಿನಗಳ ಕಾಲ ಕೋಟಿ ಗೀತಾ ಲೇಖನ ಯಜ್ಞ ಅಭಿ ಯಾನ ಕಾರ್ಯಕ್ರಮ ನಡೆಯಲಿದೆ.
ಕುಶಾಲನಗರ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಡಿಸೆಂಬರ್ ೨೬ರಂದು ನಡೆಯಲಿರುವ ಧಾರ್ಮಿಕ ಸಂಕಲ್ಪ ಕಾರ್ಯಕ್ರಮದಲ್ಲಿ ಉಡುಪಿಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಅವರ ಶಿಷ್ಯ ಶ್ರೀ ಸುಶ್ರೇಂದ್ರ ತೀರ್ಥ ಶ್ರೀಪಾದರ ಪಾದಪೂಜೆ, ಬೆಳ್ಳಿಯ ತೊಟ್ಟಿಲಿನಲ್ಲಿ ದೇವರಿಗೆ ಪೂಜೆ, ಸೇವೆ, ಶಯನೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ದಿನಾಂಕ ೨೭ರಂದು ಸಂಸ್ಥಾನ ಪೂಜೆ ಧಾರ್ಮಿಕ ಕಾರ್ಯಕ್ರಮ ನಡೆಯುವುದು. ಈ ಸಂಬAಧ ಕನ್ನಿಕಾ ಪರಮೇಶ್ವರಿ ದೇವಾಲಯ ಸಭಾಂಗಣದಲ್ಲಿ ನಿನ್ನೆ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಕೋಟಿಗೀತಾ ಲೇಖನ ಯಜ್ಞ ಪರಿವಾರದ ಕುಶಾಲನಗರ ಪ್ರಮುಖರಾದ ಎಸ್.ಕೆ. ಸತೀಶ್, ಲಕ್ಷಿö್ಮ ಮಂಜುನಾಥ್, ಬಿ.ಆರ್. ನಾಗೇಂದ್ರ ಪ್ರಸಾದ್, ರಮಾ ವಿಜಯೇಂದ್ರ, ಜನಾರ್ದನ ಭಟ್, ಆರ್.ಕೆ. ನಾಗೇಂದ್ರ ಬಾಬು, ಲೀಲಾ ವತಿ, ರಾಮದಾಸ್, ಬೋಸ್ ಮೊಣ್ಣಪ್ಪ, ಪದ್ಮಾ ಪುರುಷೋತ್ತಮ್, ದೇವರಾಜ್, ಹೆಚ್.ಎಂ. ಚಂದ್ರು, ಚಿ ನಾ ಸೋಮೇಶ್, ಉದಯಕುಮಾರ್ , ವೇಣು, ವನಿತಾ ಚಂದ್ರಮೋಹನ್, ಜಿ. ಚಿದ್ವಿಲಾಸ್ ಮತ್ತಿತರ ಪ್ರಮು ಖರು ಪಾಲ್ಗೊಂಡಿದ್ದರು.