ಪೊನ್ನಂಪೇಟೆ, ಡಿ. ೧೨: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಆರನೇ ವಾರ್ಡ್ ಸಭೆ ತಾ. ೧೩ ರಂದು ಸಂಜೆ ೫ ಗಂಟೆಗೆ ಕೃಷ್ಣ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ರಮೇಶ್ ಪಿ.ಟಿ. ಅಧ್ಯಕ್ಷತೆಯಲ್ಲಿ, ಐದನೇ ವಿಭಾಗದ ವಾರ್ಡ್ ಸಭೆ ತಾ. ೧೪ ರಂದು ಸಂಜೆ ೪ ಗಂಟೆಗೆ ಕೊಡವ ಸಮಾಜ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಅಬ್ದುಲ್ ಅಜೀಜ್ ಎ.ಎ. ಅಧ್ಯಕ್ಷತೆಯಲ್ಲಿ, ಒಂದನೇ ವಾರ್ಡ್ ಸಭೆ ತಾ. ೧೪ ರಂದು ಸಂಜೆ ೫ ಗಂಟೆಗೆ ಎಂ.ಜಿ. ನಗರದ ಸಮುದಾಯ ಭವನದಲ್ಲಿ ರಾಮಕೃಷ್ಣ ಕೆ.ವಿ. ಅಧ್ಯಕ್ಷತೆಯಲ್ಲಿ ನಡೆಯಲಿದೆ. ತಾ. ೧೬ ರಂದು ಬೆಳಿಗ್ಗೆ ೧೦.೩೦ಕ್ಕೆ ಮಕ್ಕಳ ಗ್ರಾಮ ಸಭೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ. ಎರಡನೇ ವಾರ್ಡ್ ಸಭೆ ತಾ. ೧೬ ರಂದು ಮಧ್ಯಾಹ್ನ ೩ ಗಂಟೆಗೆ ಗಣಪತಿ ನಗರ ಕಾವೇರಿ ಕೊಡವ ಕೂಟ ಸಭಾಂಗಣದಲ್ಲಿ ಮಧುಕುಮಾರ್ ಎಂ.ಕೆ. ಅಧ್ಯಕ್ಷತೆಯಲ್ಲಿ, ಮೂರನೇ ವಿಭಾಗದ ವಾರ್ಡ್ ಸಭೆ ಸಂಜೆ ೫ ಗಂಟೆಗೆ, ಜನತಾ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ಯಮುನಾ ಪಿ.ಜಿ. ಅಧ್ಯಕ್ಷತೆಯಲ್ಲಿ, ನಾಲ್ಕನೇ ವಾರ್ಡ್ ಸಭೆ ಸಂಜೆ ೪ ಗಂಟೆಗೆ ಟಿ.ಆರ್. ರಸ್ತೆಯ ಅಂಗನವಾಡಿ ಕೇಂದ್ರದಲ್ಲಿ ರಸಿಕ ಕೆ.ಎ. ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯು ತಾ. ೨೮ ರಂದು ಬೆಳಿಗ್ಗೆ ೧೦.೩೦ಕ್ಕೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.