ಚೆಟ್ಟಳ್ಳಿ, ಡಿ. ೧೨: ಚೆಟ್ಟಳ್ಳಿ ಸುತ್ತಲು ಗುಡುಗು ಸಿಡಿಲು ಸಹಿತ ಸುರಿದ ಮಳೆಯಿಂದಾಗಿ ಅರೆಬಿಕಾ ಫಸಲು ಹಾಗೂ ಭತ್ತದ ಕುಯ್ಲಿಗೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಅರೆಬಿಕಾ ಕಾಫಿಯ ಕುಯ್ಲಿನ ಸಮಯವಾಗಿದ್ದು ಕಳೆದ ರಾತ್ರಿ ೨.೫೦ ಇಂಚು ಮಳೆ ಎಡೆಬಿಡದೆ ಸುರಿದ ಪರಿಣಾಮ ಹಲವೆಡೆ ಒಣ ಹಾಕಿದ್ದ ಅರೆಬಿಕಾ ಹಣ್ಣು ಹಾಗೂ ಪಾರ್ಚ್ಮೆಂಟ್ ಮಳೆಯ ರಭಸಕ್ಕೆ ನೀರಿನಲ್ಲಿ ತೇಲ ತೊಡಗಿ ಹಾಳಾಗಿದೆ. ಕೊಚ್ಚಿ ಹೋದ ಕಾಫಿಯನ್ನು ತೋಟದೊಳಗೆ ಹಾಗೂ ರಸ್ತೆಯುದ್ದಕ್ಕೂ ಹೆಕ್ಕುತ್ತಿರುವ ದೃಶ್ಯ ಕಂಡುಬAದವು. ಕುಯ್ಲಿಗೆ ಬಾಕಿ ಇರುವ ಅರೆಬಿಕಾ ಹಣ್ಣುಗಳು ನೆಲಕಚ್ಚುತಿವೆ. ಮುಂದಿನ ದಿನಗಳಲ್ಲೂ ಮಳೆಯಾಗ ಬಹುದೆಂಬ ಆತಂಕದಲ್ಲಿ ಬೆಳೆಗಾರರಿದ್ದಾರೆ. -ಕರುಣ್ ಕಾಳಯ್ಯ