ಎಂ.ಎಲ್.ಸಿ. ತೇಜಸ್ವಿನಿಗೌಡ ಪ್ರಸ್ತಾಪ

ಮಡಿಕೇರಿ, ಡಿ. ೧೨: ವಿಧಾನ ಪರಿಷತ್ತು ಸದಸ್ಯೆ ಡಾ. ತೇಜಸ್ವಿನಿ ಗೌಡ ಜಿಲ್ಲೆಯ - ವಿವಿಧ ವಿಚಾರದ ಕುರಿತು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ.

ಭಾರತೀಯ ಸೇನೆಯ ಮೊದಲ ಮಹಾದಂಡ ನಾಯಕ ಫೀ.ಮಾ. ಕಾರ್ಯಪ್ಪ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡಲು ರಾಜ್ಯ ಸರಕಾರ ನಿರ್ಣಯ ಮಾಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು, ಕಾವೇರಿ ಸಂಕ್ರಮಣದAದು ರಾಜ್ಯಾದ್ಯಂತ ಸಾರ್ವತ್ರಿಕ ರಜೆ ಘೋಷಿಸುವ ಜೊತೆಗೆ ಕಾವೇರಿ ಹರಿಯುವ ಎಲ್ಲೆಡೆ ‘ಕಾವೇರಿ ಆರತಿ’ ಕಾರ್ಯಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮೈಸೂರಿನಿಂದ ವೀರಾಜಪೇಟೆಗೆ ಹೋಗುವ ಮಾರ್ಗಮಧ್ಯೆಯ ಆನೆಚೌಕೂರಿನಲ್ಲಿ ನಿರÀಂತರವಾಗಿ ವನ್ಯಜೀವಿಗಳ ಸಂಚಾರ ಇರುವ ಹಿನ್ನೆಲೆ ಅನೆಚೌಕೂರು ಗೇಟ್‌ನಿಂದ ಅಲ್ಲೂರು ತನಕದ ೮ ಕಿ.ಮೀ ಮೇಲ್ಸೇತುವೆ ನಿರ್ಮಿಸಬೇಕು, ಇದರಿಂದ ವನ್ಯಜೀವಿ ಹಾಗೂ ಜನರ ರಕ್ಷಣೆ ಸಾಧ್ಯ ಎಂದು ಗಮನ ಸೆಳೆದರು. ತಿತಿಮತಿಯಲ್ಲಿ ‘ವನ್ಯಜೀವಿ ಆನೆ ಮ್ಯೂಸಿಯಂ’ ನಿರ್ಮಾಣಕ್ಕೆ ಕೋರಿರುವ ತೇಜಸ್ವಿನಿ, ಇತ್ತೀಚಿಗೆ ಸಾವನ್ನಪ್ಪಿದ ಅರ್ಜುನ ಅನೆ ಸೇರಿದಂತೆ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ವಿವಿಧ ಆನೆಗಳ ಕುರಿತ ಮಾಹಿತಿ ಅನಾವರಣ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.