ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ ೬೭ನೇ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.
ಗ್ರಾಮಸ್ಥರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮೇಣದ ಬತ್ತಿ ಬೆಳಗಿಸಿ ನಮನ ಸಲ್ಲಿಸಿದರು. ಮುಖಂಡರಾದ ಡಿಎನ್. ವಸಂತ್, ಜಗದೀಶ್, ಕೇಶವ್, ಪುನೀತ್ ಮಾತನಾಡಿ, ಅಂಬೇಡ್ಕರ್ ವಿಚಾರಧಾರೆ ಗಳನ್ನು ತಿಳಿಸಿದರು. ಮುಖಂಡರಾದ ಕಾಳಯ್ಯ, ನಾಗೇಶ್, ಹೇಮಂತ್, ಮನೋಜ್, ವೆಂಕಿ, ಗೌತಮ್, ಧ್ಯಾನ್, ಗ್ರಾಮಸ್ಥರು ಇದ್ದರು.ಶನಿವಾರಸಂತೆ: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಪ್ಲವ ಯುವ ಬಳಗ ಹಾಗೂ ಎಲ್ಲಾ ಹಳ್ಳಿಗಳ ಸಂಘಟನೆ ವತಿಯಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಅವರ ೬೭ನೇ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.
ಬೆಸೂರು ಅಂಬೇಡ್ಕರ್ ಭವನದಿಂದ ಬೆಸೂರು ವೃತ್ತದವರೆಗೆ ಮೇಣದ ಬತ್ತಿ ಹಿಡಿದು ಮೆರವಣಿಗೆ ಸಾಗಿತು. ಅಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಕ್ಯಾಪ್ಟನ್ ಯಶವಂತ್ ಮಾತನಾಡಿ, ಡಾ. ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ಓದಿ, ಅವರ ತತ್ವ ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಘ್ನೇಶ್ವರ ಬಾಲಿಕಾ ಪ್ರೌಢಶಾಲಾ ಶಿಕ್ಷಕ ಜಯಕುಮಾರ್ ಮಾತನಾಡಿ, ಇಂದು ಮಹಿಳೆಯರು ಸ್ವತಂತ್ರವಾಗಿ ಜೀವನ ನಡೆಸುತ್ತಿರುವುದಕ್ಕೆ ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ. ಭಾರತದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನವಾಗಬೇಕಾದರೆ ಅಂಬೇಡ್ಕರ್ ರಚಿಸಿರುವ ಸಂವಿಧಾನ ಸರಿಯಾಗಿ ಜಾರಿಯಾಗಬೇಕು. ಆವಾಗ ಪ್ರಬುದ್ಧ ಭಾರತ ನಿರ್ಮಾಣವಾಗುತ್ತದೆ ಎಂದರು.
ದಲಿತ ಮುಖಂಡ ಜೆ.ಎಲ್. ಜನಾರ್ಧನ್ ಕಾರ್ಯಕ್ರಮದ ಆಚರಣೆಯ ಮಹತ್ವದ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ವಿಪ್ಲವ ಯುವ ಬಳಗದ ಅಧ್ಯಕ್ಷ ರಂಗಸ್ವಾಮಿ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯ ಕಿಶನ್ ಕುಮಾರ್, ಜಯರಾಜ್, ಮುಖಂಡರಾದ ದೇವರಾಜ್, ವೀರಭದ್ರ, ಬಳಗದ ಉಪಾಧ್ಯಕ್ಷ ಮಂಜು, ಕಾರ್ಯದರ್ಶಿ ಸುಂದ್ರೇಶ್, ಸದಸ್ಯರು ಹಾಜರಿದ್ದರು.ವೀರಾಜಪೇಟೆ : ಸಂವಿಧಾನ ಉಳಿಸುವುದು ಮತ್ತು ಅದನ್ನು ಬದುಕಿನಲ್ಲಿ ಸಮರ್ಪಿಸುವುದು ಆಡಳಿತ ಯಂತ್ರದAತೆಯೇ ಜನತೆಯ ಕರ್ತವ್ಯವೂ ಆಗಿದೆ ಎಂದು ಹೆಚ್. ಡಿ. ಕೋಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥ ಸಿ.ಪುಟ್ಟರಾಜು ಹೇಳಿದ್ದಾರೆ. ಇಂದು ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ (ಐ.ಕ್ಯೂ.ಎ.ಸಿ) ಮತ್ತು ಎಸ್-ಎಸ್ಟಿ ಸೆಲ್ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಮತ್ತು ಡಾ||. ಬಿ. ಆರ್. ಅಂಬೇಡ್ಕರ್ರವರ ಪರಿನಿರ್ವಾಣ ದಿವಸದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಆಗಮಿಸಿ ಮಾತನಾಡಿದರು. ಅವರು ಮುಂದುವರಿಯುತ್ತಾ-“ನಮ್ಮ ಸಂವಿಧಾನಕ್ಕೆ ಅರ್ಥ ಬರಬೇಕಾದಲ್ಲಿ ದೇಶದ ರಾಜಕೀಯ ಪಕ್ಷಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸ್ಪಷ್ಟ ಬದ್ಧತೆ ಇರಬೇಕಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಧ್ಯೇಯಗಳನ್ನು ಈಡೇರಿಸಿಕೊಳ್ಳಲು ಸಾಂವಿಧಾನಿಕ ಮಾರ್ಗಗಳಲ್ಲದೆ ಬೇರೆ ದಾರಿಯಿಲ್ಲ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವೀರಾಜಪೇಟೆ ಪುರಸಭಾ ಸದಸ್ಯ ಕೆ. ಹೆಚ್. ಮುಹಮ್ಮದ್ ರಾಫಿ ಮಾತನಾಡಿ-ಅತ್ಯಂತ ಮೌಲ್ಯಯುತ ಮತ್ತು ವಿಶಿಷ್ಟ ಸಂವಿಧಾನ ಹೊಂದಿದ ನಾವು ಹೆಮ್ಮೆಪಡಬೇಕಾಗಿದೆ. ಡಾ|| ಬಿ. ಆರ್. ಅಂಬೇಡ್ಕರ್ ಅವರು ಜಗತ್ತಿಗೆ ಮಾದರಿಯುತವಾದ ಸಂವಿಧಾನವನ್ನು ಸಮರ್ಪಿಸಿದ ಮಹಾನ್ ವ್ಯಕ್ತಿಯಾಗಿದ್ದರು ಎಂದರು.
ಕಾರ್ಯಕ್ರಮದ ಅತಿಥಿಯಾಗಿದ್ದ ವೀರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹೆಚ್. ಆರ್. ಅರ್ಜುನ್ ಮಾತನಾಡಿ “ರಾಜಕೀಯ ಪ್ರಜಾಪ್ರಭುತ್ವಕ್ಕೆ ಆಧಾರವಾಗಿ ಆರ್ಥಿಕ ಪ್ರಜಾಪ್ರಭುತ್ವವನ್ನು ನಾವು ಹೊಂದಿಕೊಳ್ಳಬೇಕು. ಸಾಮಾಜಿಕ ಪ್ರಜಾಪ್ರಭುತ್ವವೆಂದರೆ ಸ್ವಾತಂತ್ರö್ಯ ಸಮಾನತೆಯನ್ನು ಒಳಗೊಂಡ ಜೀವನ ಪದ್ಧತಿ. ಸಮಾನತೆಯ ಸ್ವಾತಂತ್ರö್ಯ ಎಂಬುದು ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ನಡೆಸುವ ಸರ್ವಾಧಿಕಾರ ಆಗಬಾರದು” ಎಂದರು. ಪ್ರಾಂಶುಪಾಲ ಡಾ||.ಕೆ.ಸಿ.ದಯಾನಂದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳ ಸಂವಿಧಾನ ಗೀತೆಯೊಂದಿಗೆ ಪ್ರಾರಂಭಗೊAಡ ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ ಸಂಚಾಲಕ ಪಿ.ಎನ್. ನಾಗರಾಜ ಮೂರ್ತಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯ ನಡೆಯಿತು. ಎಸ್.ಸಿ.ಎಸ್.ಟಿ. ಘಟಕದ ಸಂಚಾಲಕ ರುದ್ರ ಅವರು ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ|| ಕೆ. ಬಸವರಾಜ್ ವೇದಿಕೆಯಲ್ಲಿದ್ದರು. ನಿರ್ವಹಣಾಶಾಸ್ತç ವಿಭಾಗದ ಮುಖ್ಯಸ್ಥ ಆರ್. ಮಂಜುನಾಥ್ ಧನ್ಯವಾದವಿತ್ತರು ಅಜಿತ್ಕುಮಾರ್ ನಿರೂಪಿಸಿದರು.