ನಾಪೋಕ್ಲು, ಡಿ. ೧೧: ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಮನು ಪೆರುಮುಂಡ ನೇಮಕಗೊಂಡಿದ್ದಾರೆ. ಪೆರಾಜೆ ವಲಯದ ಪುತ್ಯ ಪೆರಾಜೆ ಬೂತ್ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್ ಕೆ.ಎ., ಮುಖಂಡರಾದ ಟಿ. ರಮೇಶ ಮಡಿಕೇರಿ, ಬೇಕಲ್ ರಮಾನಾಥ್ ಕರಿಕೆ, ಶೌಕತ್ ಅಲಿ ಕುಂಜಿಲ, ರಾಜೇಶ್ವರಿ ಕೊಯಿನಾಡು, ಚುನಾವಣಾ ಉಸ್ತುವಾರಿ ರಮೇಶ್ ಎ.ಪಿ. ಬಾಳಲೆ, ವಾರ್ಡ್ ಸದಸ್ಯ ಸುರೇಶ್ ಪೆರುಮುಂಡ, ಬ್ಲಾಕ್ ಕಾರ್ಯದರ್ಶಿ ಬಶೀರ್ ಚೇರಂಬಾಣೆ ಸಭೆಯಲ್ಲಿದ್ದರು.