ಗೋಣಿಕೊಪ್ಪಲು, ಡಿ. ೧೧: ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ ತಿತಿಮತಿಯ ಪ್ರದೀಪ್ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ. ೫ ಲಕ್ಷ ಬಿಡುಗಡೆ ಆಗಿ ಖಾತೆಗೆ ಜಮೆ ಆಗಿದೆ.
ಅಕ್ಟೋಬರ್ ೧೦ ರಂದು ಪ್ರದೀಪ್ ಆತ್ಮಹತ್ಯೆಗೆ ಶರಣಾಗಿದ್ದರು. ಬಳಿಕ ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ಅವರ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿ ಪರಿಹಾರದ ಭರವಸೆ ನೀಡಿದ್ದರು. ಅದರನ್ವಯ ಇದೀಗ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಅವರ ಪತ್ನಿಯ ಪಂಚವಳ್ಳಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಖಾತೆಗೆ ರೂ.೫ ಲಕ್ಷ ಜಮಾ ಆಗಿದೆ.