ಮಡಿಕೇರಿ, ಡಿ. ೯: ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜ ಹಾಗೂ ಕೊಡಗು ಮೊಗೇರ ಫುಟ್ಬಾಲ್ ಕ್ಲಬ್ ವತಿಯಿಂದ ಏರ್ಪಡಿಸಿರುವ ಪ್ರಥಮ ವರ್ಷದ ಮೊಗೇರ ಫುಟ್ಬಾಲ್ ಪ್ರಿಮಿಯರ್ ಲೀಗ್ ಪಂದ್ಯಾವಳಿಯ ಪ್ರದರ್ಶನ ಪಂದ್ಯಾಟದಲ್ಲಿ ಕೊಡಗು ಪ್ರೆಸ್ ಕ್ಲಬ್ ತಂಡ ಗೆಲುವು ಸಾಧಿಸಿತು.

ಆತಿಥೇಯ ಮೊಗೇರ ಫುಟ್ಬಾಲ್ ಕ್ಲಬ್ ತಂಡದ ವಿರುದ್ಧ ೩-೦ ಗೋಲುಗಳ ಅಂತರದಿAದ ಪ್ರೆಸ್ ಕ್ಲಬ್ ತಂಡ ವಿಜಯ ಸಾಧಿಸಿತು. ತಂಡದ ಪರ ಟಿವಿ೯ ವರದಿಗಾರ ಗೋಪಾಲ್ ಸೋಮಯ್ಯ ಹಾಗೂ ಬಿ ಟಿವಿ ವರದಿಗಾರ ಸುರ್ಜಿತ್ ತಲಾ ಒಂದು ಗೋಲು ಬಾರಿಸಿದರೆ, ಮೊಗೇರ ಕ್ಲಬ್ ತಂಡದ ಆಟಗಾರ ಸ್ವ ಗೋಲು ಹಾಕಿಕೊಳ್ಳುವದರ ಮೂಲಕ ಅಂತರವನ್ನು ೩-೦ಗೆ ಏರಿಸಿದರು. ಪ್ರೆಸ್ ಕ್ಲಬ್ ತಂಡದಲ್ಲಿ ಶಕ್ತಿ ಪತ್ರಿಕೆ ಉಪ ಸಂಪಾದಕ ಕುಡೆಕಲ್ ಸಂತೋಷ್, ವಾರ್ತಾಭಾರತಿಯ ಇಸ್ಮಾಯಿಲ್ ಕಂಡಕೆರೆ, ವಿಜಯವಾಣಿಯ ಆದರ್ಶ್ ಅದ್ಕಲೆಗಾರ್, ವಿಜಯವಾಣಿ ಲೋಕೇಶ್ ಕಾಟಕೇರಿ, ಪ್ರಜಾಸತ್ಯ ಪತ್ರಿಕೆಯ ಕೆ.ಎಂ. ವಿನೋದ್ ಆಟವಾಡಿದರು. ಮೊಗೇರ ಕ್ಲಬ್ ಪರವಾಗಿ ಅಶೋಕ, ವಿವೇಕ್, ರಮೇಶ್, ದಿನೇಶ್, ಸುರೇಶ್, ಅಣ್ಣಪ್ಪ ಅವರುಗಳೊಂದಿಗೆ ಬಾಲಕಿ ರಕ್ಷಿತಾ ಆಟವಾಡಿ ಗಮನ ಸೆಳೆದಳು.

ತಂಡಗಳ ಮುನ್ನಡೆ

ನಂತರ ನಡೆದ ಲೀಗ್ ಹಂತದ ಪಂದ್ಯಾವಳಿಯಲ್ಲಿ ತಂಡಗಳು ಮುನ್ನಡೆ ಸಾಧಿಸಿವೆ. ಜನನಿ ವಿರುದ್ಧ ಟೀಂ ಹಂರ‍್ಸ್ ಮರಗೋಡು ೧-೦ ಅಂತರದಲ್ಲಿ ಗೆಲವು ಸಾಧಿಸಿತು. ಎ.ಎಂ.ಎಫ್. ಸಿದ್ದಾಪುರ ವಿರುದ್ಧ ಇಶಾನಿ ಎಫ್‌ಸಿ ೨-೧, ಮೊಗೇರ ಎಫ್.ಸಿ. ಪಾಲಿಬೆಟ್ಟ ವಿರುದ್ಧ ಫಿಯೋನೆಕ್ಸ್ ಸೋಮವಾರಪೇಟೆ ೧-೦, ಮಾನ್ವಿಕ್ ಎಫ್‌ಸಿ ವಿರುದ್ಧ ಟೀಂ ಭಗವತಿ ಹಾಲುಗುಂದ ೩-೧, ಟೀಂ ಹಂರ‍್ಸ್ ವಿರುದ್ಧ ಮೊಗೇರ ಎಫ್‌ಸಿ ೩-೨, ಇಶಾನಿ ವಿರುದ್ಧ ಮಾನ್ವಿಕ್ ಎಫ್‌ಸಿ ೨-೦, ಟೀಂ ಜನನಿ ವಿರುದ್ಧ ಫಿಯೋನೆಕ್ಸ್ ೩-೧ ಅಂತರದಲ್ಲಿ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯುತ್ತಿದ್ದು, ತಾ.೧೦ರಂದು (ಇಂದು) ಸಂಜೆ ಅಂತಿಮ ಪಂದ್ಯಾವಳಿ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.