ಮಡಿಕೇರಿ, ಡಿ. ೧೦: ಮೈಸೂರಿನ ಸನ್ವಿತಿ ಪ್ರಕಾಶನ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಕೊಡಮಾಡುವ ರಾಜ್ಯಮಟ್ಟದ ಸನ್ವಿತಿ ಪ್ರಶಸ್ತಿ ಡಾ. ಲಾವಣ್ಯ ಸಿ.ಪಿ. ಕೊಟ್ಟಕೇರಿಯನ ಅವರಿಗೆ ಲಭಿಸಿದೆ.
ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಈ ಪ್ರಶಸ್ತಿ ಲಭ್ಯವಾಗಿದ್ದು, ಲಾವಣ್ಯ ಅವರು ಮೈಸೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ಜಿಲ್ಲೆಯ ಬಲಮುರಿ ಗ್ರಾಮದ ನಿವಾಸಿ, ಮಾಜಿ ಯೋಧ ಕೊಟ್ಟಕೇರಿಯನ ಅರುಣ್ ಅವರ ಪತ್ನಿ.