ಮಡಿಕೇರಿ, ಡಿ. ೯: ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ೨೦೨೩-೨೪ನೇ ಸಾಲಿಗೆ ಭಾರತೀಯ ಸೇನೆ, ಭದ್ರತಾ ಪಡೆ, ಪೊಲೀಸ್ ಸೇವೆ ಸೇರಿದಂತೆ ಇತರೆ ಸಮವಸ್ತçç ಸೇವೆಗಳಿಗೆ ಸೇರ ಬಯಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ಉಚಿತವಾಗಿ ೨ ತಿಂಗಳು ವಸತಿಯುತ ದೈಹಿಕ ಸಾಮರ್ಥ್ಯ ತರಬೇತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡುವ ಸಂಬAಧ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸಮವಸ್ತçç ಸೇವೆಗಳಿಗೆ ವಸತಿಯುತ ೬೦ ದಿನಗಳ ದೈಹಿಕ ಹಾಗೂ ಇತರೆ ತರಬೇತಿ ನೀಡಲಾಗುತ್ತದೆ. ೧೦ನೇ ತರಗತಿ ಉತ್ತೀರ್ಣರಾಗಿರಬೇಕು. ೧೭ ವರ್ಷ ೬ ತಿಂಗಳಿನಿAದ ೨೩ ವರ್ಷಗಳು. ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗದಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ. ೫ ಲಕ್ಷ ಮೀರಿರಬಾರದು.
ಎತ್ತರ ಪುರುಷ ಅಭ್ಯರ್ಥಿ ೧೬೨-೧೮೫ ಸೆಂ.ಮೀ., ಸಹಜ ಸ್ಥಿತಿಯಲ್ಲಿ ೭೫ ಸೆಂ.ಮೀ. ಹೊಂದಿದ್ದು ವಿಸ್ತರಿಸಿದಾಗ ಕನಿಷ್ಟ ೮೦ ಸೆ.ಮೀ. ಹೊಂದಿರಬೇಕು. ಕನಿಷ್ಟ ೪೭.೨ ರಿಂದ ಗರಿಷ್ಠ ೭೮.೭ ಕೆ.ಜಿ. ಯೊಳಗಿರಬೇಕು. ಮಹಿಳಾ ಅಭ್ಯರ್ಥಿ ಎತ್ತರ ೧೫೨ ಸೆಂ.ಮೀ. ತೂಕ ಕನಿಷ್ಟ ೪೪.೪ ಕೆ.ಜಿ. ಇರಬೇಕು.
ಹೆಚ್ಚಿನ ಮಾಹಿತಿಗೆ ಮತ್ತು ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ತಿತಿತಿ.sತಿ.ಞಚಿಡಿ.ಟಿiಛಿ.iಟಿ ವೆಬ್‌ಸೈಟ್‌ನ್ನು ವಿಕ್ಷೀಸುವುದು. ತಾಂತ್ರಿಕ ಸಮಸ್ಯೆಗಳು ಕಂಡು ಬಂದರೆ ದೂರವಾಣಿ ಸಂಖ್ಯೆ ೯೪೮೨೩೦೦೪೦೦, ೯೪೮೦೮೪೩೦೦೫, ೦೮೦-೨೨೨೦೭೭೮೪ನ್ನು ಸಂಪರ್ಕಿಸುವುದು. ೨೫೦ ಅಭ್ಯರ್ಥಿಗಳಂತೆ ೪ ಬ್ಯಾಚ್‌ಗಳಲ್ಲಿ ತರಬೇತಿ ಸಂಸ್ಥೆ ಮೂಲಕ ಆಯ್ಕೆ ಮಾಡಲಾಗುವುದು. ತರಬೇತಿ ನೀಡಲು ನಿಗದಿಪಡಿಸಿದ ತರಬೇತಿ ಸಂಸ್ಥೆಯ ನೇತೃತ್ವದಲ್ಲಿ ನಡೆಸಲಾಗುವ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಭ್ಯರ್ಥಿಗಳನ್ನು ಷರತ್ತಿಗೊಳಪಟ್ಟು ಆಯ್ಕೆ ನಡೆಸಲಾಗುವುದು. ಅಭ್ಯರ್ಥಿಗಳ ಅಂತಿಮ ಆಯ್ಕೆ ತರಬೇತಿ ನೀಡುವ ಸಂಸ್ಥೆಯದ್ದಾಗಿರುತ್ತದೆ. ಮೊದಲು ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಆದ್ಯತೆ ಮೇರೆಗೆ ಹಂತ ಹಂತವಾಗಿ ತರಬೇತಿಗೆ ನಿಯೋಜಿಸಲಾಗುವುದು.
ನಿಗದಿತ ದಿನಾಂಕ ಹಾಗೂ ಸ್ಥಳಕ್ಕೆ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು. ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ಸಂದರ್ಭದಲ್ಲಿ ಉಂಟಾಗಬಹುದಾದ ಯಾವುದೇ ನಷ್ಟ ದುರಂತ ದುರ್ಘಟನೆಗೆ ಇಲಾಖಾ ಅಥವಾ ತರಬೇತಿ ನೀಡಲು ಆಯ್ಕೆಯಾದ ತರಬೇತಿ ಸಂಸ್ಥೆ ಹೊಣೆಯಾಗುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್ ತಿಳಿಸಿದ್ದಾರೆ.
ಡಿಪ್ಲೊಮಾ ಸಹಕಾರ ತರಬೇತಿಗೆ
ರೆಗ್ಯೂಲರ್ ‘ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್’ ತರಬೇತಿ ಪ್ರವೇಶಕ್ಕೆ (೬ ತಿಂಗಳ ಅವಧಿ ಕೋರ್ಸ್ಗೆ) ಅರ್ಜಿ ಆಹ್ವಾನಿಸಲಾಗಿದೆ.
ಕೊಡಗು, ಹಾಸನ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವುದರಿಂದ ಅಭ್ಯರ್ಥಿಗಳು ಇದರ ಸದುಪಯೋಗ ಪಡೆಯಬಹುದು. ಪ್ರವೇಶ ಪಡೆದ ಎಲ್ಲಾ ಸಾಮಾನ್ಯ ಅಭ್ಯರ್ಥಿಗಳಿಗೆ ಪ್ರತಿ ಮಾಹೆಯಾನ ರೂ. ೫೦೦ ಶಿಷ್ಯವೇತನ ನೀಡಲಾಗುವುದು.
ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ ಪ್ರತಿ ಮಾಹೆಯಾನ ರೂ.೬೦೦ ಶಿಷ್ಯವೇತನ ನೀಡಲಾಗುವುದು. ಅಧ್ಯಯನ ಸಾಹಿತ್ಯ ನೀಡಲಾಗುವುದು, ಪ್ರತ್ಯೇಕ ತರಗತಿ ಹಾಗೂ ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆ, ಉಚಿತ ವಸತಿ ನಿಲಯದ ವ್ಯವಸ್ಥೆ, ತರಬೇತಿ ಪಡೆದವರಿಗೆ ವಿವಿಧ ರೀತಿಯ ಸಹಕಾರ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ, ಸಹಕಾರ ಬ್ಯಾಂಕುಗಳಲ್ಲಿ ಹಾಗೂ ಇತರ ಸಹಕಾರ ಸಂಸ್ಥೆಗಳ ನೇಮಕಾತಿಯಲ್ಲಿ ಆದ್ಯತೆ ಸಿಗುತ್ತದೆ. ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲಕರ, ೧೬ ವರ್ಷ ಮೇಲ್ಪಟ್ಟ ಎಲ್ಲಾ ಆಸಕ್ತ ಅಭ್ಯರ್ಥಿಗಳಿಗೆ ಪ್ರವೇಶ ಖಚಿತ. ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಹೆಚ್ಚಿನ ಮಾಹಿತಿಗೆ ದೂ.ಸಂ. ೮೭೯೨೬೨೮೪೩೭, ೯೮೪೫೩೧೮೩೬೪, ೯೬೬೩೧೫೩೯೨೨, ೭೨೫೯೭೨೯೧೦೪, ೮೭೬೨೧೧೦೯೫೨, ೮೭೬೨೯೨೫೮೬೨ ನ್ನು ಸಂಪರ್ಕಿಸಬಹುದು.