ಶನಿವಾರಸಂತೆ, ಡಿ. ೯: ವಾರ್ಷಿಕ ಸಾಧನೆಯ ಸಂಕೇತವೇ ವಾರ್ಷಿಕೋತ್ಸವವಾಗಿದ್ದು ವರ್ಷವಿಡಿ ವಿದ್ಯಾರ್ಥಿಗಳು ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ತೋರಿದ ಸಾಧನೆಗೆ ಬಹುಮಾನ ಪಡೆಯುವ ಸಂತಸದ ಸಂದರ್ಭವಾಗಿದೆ ಎಂದು ನಿಡ್ತ ಸರ್ಕಾರಿ ಪ್ರೌಢಶಾಲೆಯ ಹಿರಿಯ ಶಿಕ್ಷಕ ಮಾರುತಿ ಅರೇರ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಿಡ್ತ ಗ್ರಾಮದ ಶಾಲೆಯ ಆವರಣದ ಸಭಾಂಗಣದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಾಲಾಭಿವೃದ್ಧಿ ಸಮಿತಿ ಸ್ಥಾಪನಾ ಸದಸ್ಯ ಸುಬ್ಬಪ್ಪ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು. ಮುಖ್ಯ ಶಿಕ್ಷಕಿ ರೂಪಾ ಪ್ರಾಸ್ತಾವಿಕ ನುಡಿಯಾಡಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯಂತ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕವಿತಾ, ಸದಸ್ಯರಾದ ದಯಾಕರ್, ರಾಧಾ, ಸುಮಿತ್ರಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಬಿ. ಧರ್ಮಪ್ಪ, ಹಂಡ್ಲಿ ಪ್ರೌಢಶಾಲಾ ಶಿಕ್ಷಕ ವಿಕ್ರಾಂತ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ರತ್ನಾ, ಪ್ರೌಢಶಾಲಾ ಸಹಶಿಕ್ಷಕರಾದ ಡಿ.ಎಸ್. ಮಧುಕುಮಾರ್, ಮಹಾದೇವಿ, ಪ್ರಿಯಾಂಕಾ, ಗೀತಾ ಉಪಸ್ಥಿತರಿದ್ದರು. ಶಿಕ್ಷಕರಾದ ಪ್ರಿಯಾಂಕಾ ಸ್ವಾಗತಿಸಿ, ಮಹಾದೇವಿ ನಿರೂಪಿಸಿ, ಮಧುಕುಮಾರ್ ವಂದಿಸಿದರು.