ಮಡಿಕೇರಿ, ಡಿ. ೮: ಚೆಸ್ಕಾಂ ಮಾಡಿದ ಲೋಪಕ್ಕೆ ಜಿಲ್ಲಾ ಗ್ರಾಹಕರ ನ್ಯಾಯಾಲಯ ಕ್ರಮ ತೆಗೆದುಕೊಂಡು ದೂರುದಾರನಿಗೆ ನ್ಯಾಯ ನೀಡಿದೆ.
ವೀರಾಜಪೇಟೆ ನಿವಾಸಿ ಕೆ.ಎಸ್. ಗಣೇಶ್ ಎಂಬವರು ನಿಸರ್ಗ ಬಡಾವಣೆಯಲ್ಲಿ ಮನೆ ನಿರ್ಮಿಸಿದ್ದು, ಚೆಸ್ಕಾಂನಿAದ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಆದರೆ, ಏಕಾಏಕಿ ವಿದ್ಯುತ್ ಬಿಲ್ ರೂ. ೨೫,೯೮೮ ಬಂದಿದೆ. ಈ ಬಗ್ಗೆ ಗಣೇಶ್ ಪರಿಶೀಲಿಸಿದ ಸಂದರ್ಭ ಕಟ್ಟಡವನ್ನು ವಾಣಿಜ್ಯ ಬಳಕೆ ಎಂದು ನಮೂದು ಮಾಡಿರುವುದು ಬೆಳಕಿಗೆ ಬಂದಿದೆ. ನಂತರ ಚೆಸ್ಕಾಂ ಕ್ರಮ ಪ್ರಶ್ನಿಸಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ವಾದ-ಪ್ರತಿವಾದ ಆಲಿಸಿದ ಗ್ರಾಹಕ ನ್ಯಾಯಾಲಯ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸದಂತೆ ಮತ್ತು ರೂ. ೫ ಸಾವಿರವನ್ನು ದೂರುದಾರರಿಗೆ ಖರ್ಚು ವೆಚ್ಚಗಾಗಿ ಪಾವತಿಸುವಂತೆ ಆದೇಶ ಮಾಡಿ ತೀರ್ಪು ನೀಡಿದೆ.