ಮಡಿಕೇರಿ, ಡಿ. ೯: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ U-೧೭ ಬಾಲಕರ ವಿಭಾಗದ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ ಅಮ್ಮತ್ತಿಯ ಗುಡ್ ಶಫರ್ಡ್ ಶಾಲೆಯ ಐದು ವಿದ್ಯಾರ್ಥಿಗಳನ್ನೊಳಗೊಂಡ ತಂಡ ಉತ್ತಮ ಪ್ರದರ್ಶನ ತೋರಿ ರನ್ನರ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿದೆ. ಈ ತಂಡವನ್ನು ಶಾಲೆಯ ವಿದ್ಯಾರ್ಥಿಗಳಾದ ಕೆ. ಡಿ. ದಿತೀಶ್, ಶ್ರೇಯಸ್ ವಿ. ಎನ್, ವಿವೇಕ್ ಎಂ. ಎಂ, ಸಿನಾನ್ ಕೆ.ಇ. ಮತ್ತು ಟಿ.ಎಸ್. ಮೋನಿಶ್ ಪ್ರತಿನಿಧಿಸಿದ್ದರು.
ಡಿಸೆಂಬರ್ ಕೊನೆಯವಾರ ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ನಡೆಯುವ ರಾಷ್ಟçಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಶಾಲೆಯ ಕೆ.ಡಿ. ದಿತೀಶ್ ಮತ್ತು ಶ್ರೇಯಸ್ ವಿ.ಎನ್. ಇವರಿಬ್ಬರೂ ಆಯ್ಕೆಯಾಗಿದ್ದಾರೆ. ಹಾಗೆಯೇ U-೧೪ ವಿಭಾಗದಲ್ಲಿ ಇದೇ ಶಾಲೆಯ ಜೋಶುವ ಆಂಟೋಣಿ .ಪಿ. ಪಿ, ಮೊಹಮ್ಮದ್ ಯಾಸಿನ್ ಕೆ.ಇ. ಹಾಗೂ ಮೊಹಮ್ಮದ್ ಶಿಫಾನ್ .ಸಿ. ಎನ್. ಪ್ರತಿನಿಧಿಸಿದ ಮೈಸೂರು ವಿಭಾಗದ ತಂಡ ಉತ್ತಮ ಪ್ರದರ್ಶನ ತೋರಿ ರನ್ನರ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಶಾಲೆಯ ದೈಹಿಕ ಶಿಕ್ಷಕರಾದ ಗಣೇಶ್ ಅವರು ಇವರಿಗೆ ತರಬೇತಿಯನ್ನು ನೀಡಿದ್ದಾರೆ.