ವೀರಾಜಪೇಟೆ, ಡಿ. ೯: ಪೊಂಬೊಳ್ಚ ಕೂಟದ ವತಿಯಿಂದ ತಾ.೨೦ ರಂದು ಗೋಣಿಕೊಪ್ಪದ ಇಗ್ಗುತಪ್ಪ ಕೊಡವ ಸಂಘದಲ್ಲಿ ಕೊಡವ ಜನಾಂಗಕ್ಕೆ ಸೀಮಿತವಾಗಿ ಜಿಲ್ಲಾಮಟ್ಟದ ಕೊಡವ ಕವಿಗೋಷ್ಠಿ ಯನ್ನು ಆಯೋಜಿಸಲಾಗಿದೆ ಎಂದು ಕೂಟದ ಅಧ್ಯಕ್ಷ ಮಾಳೇಟಿರ ಶ್ರೀನಿವಾಸ್ ಹೇಳಿದರು.
ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕವಿಗೋಷ್ಠಿ ಯಲ್ಲಿ ಕವಿಗಳು ಯಾವುದೇ ವಯೋ ಮಿತಿಯ ನಿರ್ಬಂಧವಿಲ್ಲದೆ ಭಾಗವಹಿ ಸಬಹುದಾಗಿದೆ. ಹಿರಿಯ ಸಾಹಿತಿ ಮಂಡೇಪAಡ ಗೀತಾ ಮಂದಣ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಪೊಂಬೊಳ್ಚ ಕೂಟದ ಸ್ಥಾಪಕ ಅಧ್ಯಕ್ಷ ಕೋಟೇರ ಉದಯ್ ಪೂಣಚ್ಚ ಮಾತನಾಡಿ ಕಳೆದ ಬಾರಿ ಕಾಕೋಟುಪರಂಬು ಕಾಲಭೈರವ ದೇವಾಲಯದ ಸಭಾಂಗಣದಲ್ಲಿ ಕೇವಲ ಕೂಟದ ಸದಸ್ಯರಿಗೆ ಮಾತ್ರ ಕವಿಗೋಷ್ಠಿಯನ್ನು ಆಯೋಸಲಾ ಗಿತ್ತು. ಈ ಬಾರಿ ಜಿಲ್ಲಾಮಟ್ಟದಲ್ಲಿ ಕೊಡವ ಕವಿಗಳಿಗೆ ಅವಕಾಶ ನೀಡಲಾಗಿದೆ. ಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು ತಾ.೧೫
ರೊಳಗೆ ತಮ್ಮ ಹೆಸರನ್ನು ಕೊಟೇರ ಉದಯ್ ಪೂಣಚ್ಚ ೯೭೪೧೩೫೧೯೬೪, ಮಲ್ಚಿರ ಯಶೋಧ ೯೬೮೬೦೯೨೨೫೦ ಇವರುಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಕೂಟದ ಕಾರ್ಯದರ್ಶಿ ಚಂಗೇ ಟಿರ ಸೋಮಣ್ಣ ಮಾತನಾಡಿ, ಜನವರಿ ೧ರಿಂದ ೩೧ ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರ ನಾಪೋಕ್ಲು ಕೊಡವ ಸಮಾಜದಲ್ಲಿ ಬಾಳೋಪಾಟ್ ಹಾಗೂ ಬೊಳಕಾಟ್ ಪಡಿಪು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ವೀರಾಜಪೇಟೆ, ಪೊನ್ನಂಪೇಟೆ, ಅಮ್ಮತ್ತಿ, ಶ್ರೀಮಂಗಲ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಪಡಿಪು ಕಾರ್ಯಕ್ರಮಗಳನ್ನು ನಡೆಸ ಲಾಗುವುದು. ಪಡಿಪು ಕಾರ್ಯಕ್ರಮ ದಲ್ಲಿ ಭಾಗವಹಿಸಲು ಇಚ್ಚಿಸುವವರು ತಾ. ೨೫ ರೊಳಗೆ ಕೂಟದ ಕಾರ್ಯ ದರ್ಶಿ ಚಂಗೇಟಿರ ಸೋಮಣ್ಣ ಅವರ ಬಳಿ ತಮ್ಮ ಹೆಸರನ್ನು ನೊಂದಾ ಯಿಸಿಕೊಳ್ಳುವಂತೆ ಕೋರಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷೆ ಕಿಕ್ಕೇರಿಯಂಡ ಲೀಲಾ ಅಯ್ಯಪ್ಪ, ಖಜಾಂಚಿ ಮುಂಡ್ಯೋಳAಡ ಧರಣಿ ಜಗದೀಶ್ ಉಪಸ್ಥಿತರಿದ್ದರು.