ಕರಿಕೆ, ಡಿ. ೯: ಇಲ್ಲಿಗೆ ಸಮೀಪದ ಎಳ್ಳುಕೊಚ್ಚಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕೃಷಿ ಇಲಾಖೆ ಮಡಿಕೇರಿ ಹಾಗೂ ಗ್ರಾ.ಪಂ. ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಮಣ್ಣಿನ ಮಹತ್ವದ ಕುರಿತು ಸಹಾಯಕ ನಿರ್ದೇಶಕ ಗಿರೀಶ್ ಕೃಷಿಕರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ಎನ್. ಬಾಲಚಂದ್ರ ನಾಯರ್, ಉಪಾಧ್ಯಕ್ಷೆ ಕುದುಪಜೆ ಕಲ್ಪನಾ ಜಗದೀಶ್, ಸದಸ್ಯ ಕೆ.ಎ. ನಾರಾಯಣ, ಮಾಜಿ ಅಧ್ಯಕ್ಷ ಹೊಸಮನೆ ಹರೀಶ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡು ಮಾಹಿತಿ ಪಡೆದುಕೊಂಡರು.