ಕಡಂಗ, ಡಿ. ೯: ಕರಡ ಫ್ರೆಂಡ್ಸ್ ವತಿಯಿಂದ ಆಯೋಜಿಸಿದ್ದ ಕಾಲು ಚೆಂಡು ಪಂದ್ಯವಳಿ ಯನ್ನು ಕರಡ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡಸಲಾಯಿತು.
ಪಂದ್ಯಾವಳಿಗೆ ಪ್ರಾಥಮಿಕ ಶಾಲಾ ಶಿಕ್ಷಕಿ ದಮಯಂತಿ ಮತ್ತು ಐತಿಚಂಡ ಪ್ರಕಾಶ್ ಕಾರ್ಯಪ್ಪ ಅವರು ಚಾಲನೆ ನೀಡಿದರು. ಫೈನಲ್ ಪಂದ್ಯದಲ್ಲಿ ಕಡಂಗ ಫ್ರೆಂಡ್ಸ್ ತಂಡ ಕುಂಜಿಲ ತಂಡವನ್ನು ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.