ಮಡಿಕೇರಿ, ಡಿ. ೯: ಬೆಸಗೂರು ಮಹಾದೇವರ ದೇವಸ್ಥಾನದ ವತಿಯಿಂದ ಕಾರ್ತಿಕ ಪೂಜೆಯನ್ನು ತಾ. ೧೧ರಂದು ಏರ್ಪಡಿಸಲಾಗಿದೆ. ಬೆಳಿಗ್ಗೆ ೯ ಗಂಟೆಗೆ ರುದ್ರಾಭಿಷೇಕ ಪೂಜೆ, ೧೧.೩೦ಕ್ಕೆ ಮಹಾಪೂಜೆ, ಮಧ್ಯಾಹ್ನ ೧ ಗಂಟೆಗೆ ಅನ್ನ ಸಂತರ್ಪಣೆ, ರಾತ್ರಿ ೭ ಗಂಟೆಗೆ ದೀಪಾರಾಧನೆ ಮತ್ತು ಕಾರ್ತಿಕ ಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮಡಿಕೇರಿ: ತಾ.೧೧ ರಂದು ಕೊನೆಯ ಕಾರ್ತಿಕ ಸೋಮವಾರ ಸಂಜೆ ೫ ಗಂಟೆಗೆ ಬಲಮುರಿಯ ಅಗಸ್ತೆö್ಯÃಶ್ವರ ದೇವಾಲಯದಲ್ಲಿ ಭಜನೆ, ನಾಟ್ಯ, ಸಾವಿರ ದೀಪೋತ್ಸವ, ಚೆಂಡೆ ವಾದ್ಯದೊಂದಿಗೆ ರುದ್ರ ಅಭಿಷೇಕ, ರಂಗ ಪೂಜೆ, ಅಷ್ಟಾವಧಾನ ಸೇವೆ ಪೂಜೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ.