ಕಣಿವೆ, ಡಿ. ೯: ಕುಶಾಲನಗರ ತಾಲೂಕಿನ ಕಂಬಿಬಾಣೆಯಲ್ಲಿರುವ ಗಿರಿಜನ ಕಾಲೋನಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಕುಡಿಯುವ ನೀರಿಲ್ಲದ ಕಾರಣ ಮಕ್ಕಳು ಪರದಾಡುತ್ತಿರುವ ಪ್ರಸಂಗ ಎದುರಾಗಿದೆ.

ಏಳು ಮಕ್ಕಳು ದಾಖಲಾಗಿರುವ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ಸಿದ್ಧಪಡಿಸಲು ಬೇಕಾದ ಶುದ್ಧ ಕುಡಿಯುವ ನೀರೇ ಇಲ್ಲ.

ಈ ಬಗ್ಗೆ ಸ್ಥಳೀಯ ಕಂಬಿಬಾಣೆ ಗ್ರಾಮ ಪಂಚಾಯಿತಿ ಹಾಗೂ ಸಂಬAಧಿಸಿದ ಶಿಶು ಅಭಿವೃದ್ದಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳಕ್ಕೆ ತೆರಳಿದ್ದ ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡ ಅಂಗನವಾಡಿ ಶಿಕ್ಷಕಿ, ಪಕ್ಕದ ತೋಟ ಮಾಲೀಕರನ್ನು ಕೋರಿಕೊಂಡು ಸ್ವತಃ ಹಣ ಕೊಟ್ಟು ನೀರಿನ ಪೈಪ್ ತಂದು ಅಲ್ಲಿಂದ ಅಂಗನವಾಡಿ ಕೇಂದ್ರಕ್ಕೆ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದು ಪ್ರತೀ ತಿಂಗಳ ನೀರಿನ ಬಿಲ್ಲನ್ನು ನಾನೇ ಪಾವತಿಸುತ್ತಿದ್ದೇನೆ ಎಂಬ ಮಾಹಿತಿ ನೀಡಿದರು. ಇನ್ನಾದರೂ ಅಂಗನವಾಡಿ ಮಕ್ಕಳಿಗೆ ಅಗತ್ಯವಾಗಿ ಬೇಕಾದ ಸೌಲಭ್ಯಗಳನ್ನು ಸಂಬAಧಿಸಿದ ಇಲಾಖೆ ಪೂರೈಸಬೇಕಿದೆ ಎಂದು ಗ್ರಾಮಸ್ಥರು ಕೋರಿಕೊಂಡಿದ್ದಾರೆ.