ಮಡಿಕೇರಿ, ಡಿ. ೯: ಮಡಿಕೇರಿ ನಗರಸಭೆಯ ಎಸ್.ಎಫ್.ಸಿ. ಮುಕ್ತ ನಿಧಿ ಅನುದಾನದಡಿ ೨೦೨೩-೨೪ನೇ ಸಾಲಿನ ಅನುಮೋದಿತ ಕ್ರಿಯಾ ಯೋಜನೆಯಂತೆ ಶೇ. ೨೪.೧೦ ರ ಪರಿಶಿಷ್ಟ ಜಾತಿ/ ಪಂಗಡದ, ಶೇ. ೭.೨೫ ರ ನಗರ ಬಡ ಜನರ ಕಲ್ಯಾಣ ಕಾರ್ಯಕ್ರಮ ಹಾಗೂ ಶೇ. ೫ ರ ಅಂಗವಿಕಲರ ಅಭಿವೃದ್ಧಿ ಯೋಜನೆಯಡಿ ವೈಯಕ್ತಿಕ ಕಾರ್ಯಕ್ರಮದಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಫಲಾನುಭವಿಗಳು ಅಗತ್ಯ ದಾಖಲಾತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಹಾಗೂ ಮುಂದೆ ಅಗತ್ಯ ಪಡಿಸಬಹುದಾದ ಇತರೆ ದಾಖಲಾತಿಗಳನ್ನು ನೀಡುವ ಷರತ್ತಿಗೆ ಒಳಪಡಿಸಿದೆ. ಅರ್ಜಿ ಸಲ್ಲಸಲು ತಾ. ೨೬ ಕೊನೆಯ ದಿನವಾಗಿದೆ. ನಂತರ ಬಂದ ಅರ್ಜಿ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಯನ್ನು ಕಚೇರಿ ವೇಳೆಯಲ್ಲಿ ನಗರಸಭೆ ಕಚೇರಿಯಲ್ಲಿ ಪಡೆಯಬಹುದಾಗಿದೆ.

ಶೇ. ೨೪.೧೦ (ಪರಿಶಿಷ್ಟ ಜಾತಿ ಕಲ್ಯಾಣ ಕಾರ್ಯಕ್ರಮ): ನಿವೇಶನ ಹೊಂದಿರುವ ಫಲಾನುಭವಿಗಳ ಮನೆಯ ಮೇಲ್ಚಾವಣಿ ದುರಸ್ತಿಗಾಗಿ ಸಹಾಯಧನ ನೀಡುವುದು. ರೂ. ೪.೧೬ ಲಕ್ಷ ಕಾಯ್ದಿರಿಸಲಾಗಿದೆ.

ಜಾತಿ/ ಆದಾಯ ಪ್ರಮಾಣ, ಗುರುತಿನ ಚೀಟಿ, ಆಧಾರ್, ಮನೆಯ ಕಂದಾಯ ರಶೀದಿ, ನಮೂನೆ-೩ ಕಡ್ಡಾಯವಾಗಿ ಫಲಾನುಭವಿಯ ಹೆಸರಿನಲ್ಲಿರ ತಕ್ಕದು, ಮನೆಯ ಫೋಟೊ, ಬ್ಯಾಂಕ್ ಪಾಸ್ ಪುಸ್ತಕ ಸಲ್ಲಿಸಬೇಕು.

ಶಸ್ತç ಚಿಕಿತ್ಸೆಗೆ ಒಳಪಟ್ಟವರಿಗೆ ಸಹಾಯಧನ ೦.೪೧ ಲಕ್ಷ (೨೦೨೧-೨೨ನೇ ಸಾಲಿನ) ರೂ. ಕಾಯ್ದಿರಿಸಲಾಗಿದೆ. ಜಾತಿ/ ಆದಾಯ ಪ್ರಮಾಣ, ಗುರುತಿನ ಚೀಟಿ, ಆಧಾರ್, ಶಸ್ತç ಚಿಕಿತ್ಸಗೆ ಸಂಬAಧಪಟ್ಟAತೆ ದಾಖಲಾತಿಗಳು, ಬ್ಯಾಂಕ್ ಪಾಸ್ ಪುಸ್ತಕ ಸಲ್ಲಿಸಬೇಕು.

ಶೇ.೨೪.೧೦ (ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮ): ನಿವೇಶನ ಹೊಂದಿರುವ ಫಲಾನುಭವಿಗಳ ಮನೆಯ ಮೇಲ್ಚಾವಣಿ ದುರಸ್ತಿಗಾಗಿ ಸಹಾಯಧನ ನೀಡುವುದು. ರೂ. ೧.೬೦ ಲಕ್ಷ ಕಾಯ್ದಿರಿಸಲಾಗಿದೆ. ಜಾತಿ/ ಆದಾಯ ಪ್ರಮಾಣ, ಗುರುತಿನ ಚೀಟಿ, ಆಧಾರ್, ಮನೆಯ ಕಂದಾಯ ರಶೀದಿ, ನಮೂನೆ-೩ ಕಡ್ಡಾಯವಾಗಿ ಫಲಾನುಭವಿಯ ಹೆಸರಿನಲ್ಲಿರಬೇಕು, ಮನೆಯ ಫೋಟೊ, ಬ್ಯಾಂಕ್ ಪಾಸ್ ಪುಸ್ತಕ ಸಲ್ಲಿಸಬೇಕು.

ಶಸ್ತç ಚಿಕಿತ್ಸೆಗೆ ಒಳಪಟ್ಟವರಿಗೆ ಸಹಾಯಧನ ೦.೯೦ ಲಕ್ಷ (೨೦೨೦-೨೧ನೇ ಸಾಲಿನ) ರೂ. ಕಾಯ್ದಿರಿಸಲಾಗಿದೆ. ಜಾತಿ/ ಆದಾಯ ಪ್ರಮಾಣ, ಗುರುತಿನ ಚೀಟಿ, ಆಧಾರ್, ಶಸ್ತç ಚಿಕಿತ್ಸೆಗೆ ಸಂಬAಧಪಟ್ಟAತೆ ದಾಖಲಾತಿಗಳು, ಬ್ಯಾಂಕ್ ಪಾಸ್ ಪುಸ್ತಕ ಸಲ್ಲಿಸಬೇಕು.

ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಧನ ಸಹಾಯ ೦.೭೫ ಲಕ್ಷ (೨೦೨೧-೨೨ ನೇ ಸಾಲಿನ) ರೂ. ಕಾಯ್ದಿರಿಸಲಾಗಿದೆ. ಜಾತಿ/ ಆದಾಯ ಪ್ರಮಾಣ, ಗುರುತಿನ ಚೀಟಿ, ಆಧಾರ್, ಮನೆಯ ಕಂದಾಯ ರಶೀದಿ, ನಮೂನೆ-೩ ಕಡ್ಡಾಯವಾಗಿ ಫಲಾನುಭವಿಯ ಹೆಸರಿನಲ್ಲಿರಬೇಕು. ಮನೆಯ ಫೋಟೊ, ಬ್ಯಾಂಕ್ ಪಾಸ್ ಪುಸ್ತಕ ಸಲ್ಲಿಸಬೇಕು.

ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ೦.೬೯ ರೂ. ಕಾಯ್ದಿರಿಸಲಾಗಿದೆ. ಜಾತಿ/ಆದಾಯ ಪ್ರಮಾಣ, ಗುರುತಿನ ಚೀಟಿ, ಆಧಾರ್, ಬ್ಯಾಂಕ್ ಪಾಸ್ ಪುಸ್ತಕ, ವ್ಯಾಸಾಂಗ ದೃಢೀಕರಣ ಪತ್ರ ಸಲ್ಲಿಸಬೇಕು.

ಶೇ. ೭.೨೫ (ನಗರ ಬಡಜನರ ಕಲ್ಯಾಣ ಕಾರ್ಯಕ್ರಮ): ನಿವೇಶನ ಹೊಂದಿರುವ ಫಲಾನುಭವಿಗಳ ಮನೆಯ ಮೇಲ್ಚಾವಣಿ ದುರಸ್ತಿಗಾಗಿ ಸಹಾಯಧನ ನೀಡುವುದು. ೨.೧೮ ಲಕ್ಷ ರೂ. ಕಾಯ್ದಿರಿಸಲಾಗಿದೆ.

ಜಾತಿ/ ಆದಾಯ ಪ್ರಮಾಣ, ಗುರುತಿನ ಚೀಟಿ, ಆಧಾರ್, ಮನೆಯ ಕಂದಾಯ ರಶೀದಿ, ನಮೂನೆ-೩ ಕಡ್ಡಾಯವಾಗಿ ಫಲಾನುಭವಿಯ ಹೆಸರಿನಲ್ಲಿರ ತಕ್ಕದು, ಮನೆಯ ಫೋಟೋ, ಪಾಸ್ ಪುಸ್ತಕ.

ಶೇ.೫ ರಷ್ಟು (ಅಂಗವಿಕಲರ ಕಲ್ಯಾಣ ಕಾರ್ಯಕ್ರಮ): ರಾಜ್ಯ/ ರಾಷ್ಟç ಮಟ್ಟದ ಕಲೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸುವ ಅಂಗವಿಕಲ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ೧.೮೭ ಲಕ್ಷ ರೂ. ಕಾಯ್ದಿರಿಸಲಾಗಿದೆ.

ಜಾತಿ/ ಆದಾಯ ಪ್ರಮಾಣ, ಗುರುತಿನ ಚೀಟಿ, ಆಧಾರ್, ಪಾಸ್ ಪುಸ್ತಕ, ಅಂಗವಿಕಲರ ದೃಢೀಕರಣ ಪತ್ರ. ಕಲೆ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿರುವ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನಗರಸಭೆ ಪೌರಾಯುಕ್ತ ವಿಜಯ್ ಅವರು ತಿಳಿಸಿದ್ದಾರೆ.