ಮಡಿಕೇರಿ, ಡಿ. ೭: ಸೋಮವಾರ ಪೇಟೆ ತಾಲೂಕು ಮಸಗೋಡು -ಯಲಕನೂರು-ಕಣಿವೆ ರಸ್ತೆಯ ೨ ಕಿ.ಮೀ. ನಿಂದ ೧೩ ಕಿ.ಮೀ. ರವರೆಗೆ ಡಾಂಬರೀಕರಣ ಮತ್ತು ಆಯ್ದ ಭಾಗಗಳಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಯನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೊಂಡು ಕಾಂಕ್ರೀಟ್ ರಸ್ತೆ ನಿರ್ಮಿಸುವ ನಿಟ್ಟಿನಲ್ಲಿ ಪ್ರಯಾಣಿಕರ ಮತ್ತು ಸಾರ್ವಜನಿಕರ ಸಂಚಾರದ ಹಿತದೃಷ್ಟಿಯಿಂದ ಮಸಗೋಡು -ಯಲಕನೂರು-ಕಣಿವೆ ರಸ್ತೆಯ ೨ ಕಿ.ಮೀ. ನಿಂದ ೧೩ ಕಿ.ಮೀ. ರವರೆಗಿನ ರಸ್ತೆಯಲ್ಲಿ ನವೆಂಬರ್ ೩೦ ರವರೆಗೆ ಜಾರಿಯಲ್ಲಿದ್ದ ವಾಹನ ಸಂಚಾರ ನಿರ್ಬಂಧ ಆದೇಶವನ್ನು ಜನವರಿ ೧ ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರು ಬದಲಿ ರಸ್ತೆಯಾದ ನೇಗಳ್ಳಿ-ಕರ್ಕಳ್ಳಿ-ಕಾರೇಕೊಪ್ಪ-ಕೂಡಿಗೆ ರಸ್ತೆ ಮಾರ್ಗವನ್ನು ಬಳಸಬೇಕು. ಈ ಬಗ್ಗೆ ಅವಶ್ಯವಿರುವ ಸಂಜ್ಞೆ / ಸೂಚನಾ ಫಲಕವನ್ನು ಅಳವಡಿಸಲು ಪೊಲೀಸ್ ಅಧೀಕ್ಷಕರು ಹಾಗೂ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕೊಡಗು ವಿಭಾಗ ಇವರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ರಾಜಾ ತಿಳಿಸಿದ್ದಾರೆ.