ಮಡಿಕೇರಿ, ಡಿ. ೮: ಬಿಸ್ಕೆಟ್ ಪೊಟ್ಟಣದಲ್ಲಿ ನಮೂದಿಸಿದ್ದ ತೂಕಕ್ಕಿಂತ ಕಡಿಮೆ ತೂಕದ ಉತ್ಪನ್ನವಿದ್ದ ಹಿನ್ನೆಲೆ ಜಿಲ್ಲಾ ಗ್ರಾಹಕರ ಆಯೋಗ ಬಿಸ್ಕೆಟ್ ಕಂಪೆನಿಗೆ ದಂಡ ವಿಧಿಸಿ ಆದೇಶಿಸಿದೆ. ಗೋಣಿಕೊಪ್ಪದ ನಿವಾಸಿ ಎಂ.ಇ. ಆಲಿ ಮಾರಿಗೋಲ್ಡ್ ಬಿಸ್ಕೆಟ್ ಖರೀದಿಸಿದ್ದು, ತೂಕ ಕಡಿಮೆಯ ಬಗ್ಗೆ ಗಮನಿಸಿ ಅದನ್ನು ತೂಕ ಮಾಡಿದಾಗ ನಮೂದಾಗಿರುವ ೧೦೦ ಗ್ರಾಂ ಬದಲು ೮೨ ಗ್ರಾಂ ಇರುವುದು ಗೊತ್ತಾಗಿದೆ.
ಈ ಸಂಬAಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಆಲಿ ದೂರು ಸಲ್ಲಿಸಿದ್ದರು. ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ ಬ್ರಿಟಾನಿಯ ಇಂಡಸ್ಟಿçÃಸ್ ಅನುಚಿತ ವ್ಯಾಪಾರ ಪದ್ಧತಿಯನ್ನು ಅನುಸರಿಸುವುದು ಸಾಬೀತು ಆಗಿರುವ ಕಾರಣ ದೂರುದಾರರಿಗೆ ಬ್ರಿಟಾನಿಯ ಇಂಡಸ್ಟಿçÃಸ್ನಿAದ ಪರಿಹಾರ ಮೊತ್ತವಾಗಿ ರೂ. ೧೦ ಸಾವಿರ ಹಾಗೂ ಮಾನಸಿಕ ವೇದನೆಗಾಗಿ, ಖರ್ಚು ವೆಚ್ಚಗಳಿಗಾಗಿ ರೂ. ೨೦ ಸಾವಿರ ಪಾವತಿಸಲು ಆದೇಶ ನೀಡಿದೆ.