ಮುಸ್ಲಿಮರ ಕಲ್ಯಾಣಕ್ಕೆ ಹಣ ಮೀಸಲು: ಸದನದಲ್ಲಿ ಕೋಲಾಹಲ

ಬೆಳಗಾವಿ, ಡಿ. ೬: ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಕಲ್ಯಾಣಕ್ಕಾಗಿ ೧೦ ಸಾವಿರ ಕೋಟಿ ಮೀಸಲಿಡುವುದಾಗಿ ಘೋಷಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಬುಧವಾರ ವಿಧಾನಸಭೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತು. ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಬಿಜೆಪಿ ಶಾಸಕ ಸುನೀಲ್ ಕುಮಾರ್, ಅಧಿವೇಶನ ನಡೆಯುವಾಗ ಸಿಎಂ ಈ ರೀತಿ ಅನುದಾನ ಘೋಷಣೆ ಮಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯರು, ಮುಸ್ಲಿಂ ಸಮಾವೇಶದಲ್ಲಿ ಅಲ್ಪಸಂಖ್ಯಾತರಿಗೆ ರೂ. ೧೦,೦೦೦ ಕೋಟಿ ಘೋಷಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದ ಪಾವಿತ್ರ‍್ಯತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆಯಿತು. ರೈತರಿಗೆ ಬರ ಪರಿಹಾರ ನೀಡಲು ಸಾಧ್ಯವಾಗದ ಸರ್ಕಾರ, ವಿಧಾನಸಭೆಯ ಗಮನಕ್ಕೆ ತರದೆ ಅಲ್ಪಸಂಖ್ಯಾತರಿಗೆ ರೂ. ೧೦ ಸಾವಿರ ಕೋಟಿ ಘೋಷಣೆ ಮಾಡುತ್ತಿದೆ ಎಂದ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು, ಮುಖ್ಯಮಂತ್ರಿಗಳು ತಮ್ಮ ಹೇಳಿಕೆಯನ್ನು ಹಿಂಪಡೆದು ಸದನದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ಸಿಎಂ ಪರವಾಗಿ ಮಾತನಾಡಿದ ಆಡಳಿತ ಪಕ್ಷದ ಸದಸ್ಯರು, ಸಿದ್ದರಾಮಯ್ಯನವರು ಅಲ್ಪಸಂಖ್ಯಾತರ ಇಲಾಖೆಗೆ ಪ್ರತಿ ವರ್ಷ ಬಜೆಟ್ ಹೆಚ್ಚಿಸುವ ಉದ್ದೇಶವಿದ್ದು, ಅಂತಿಮವಾಗಿ ಇಲಾಖೆ ಮೂಲಕ ೧೦ ಸಾವಿರ ಕೋಟಿ ಖರ್ಚು ಮಾಡುವ ಉದ್ದೇಶವಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಅಲ್ಪಸಂಖ್ಯಾತರಿಗೆ ಹಣ ನೀಡುವುದನ್ನು ಬಿಜೆಪಿ ವಿರೋಧಿಸುತ್ತಿದೆ ಎಂದರು. ಆಡಳಿತ ಪಕ್ಷದ ಉತ್ತರಕ್ಕೆ ತೃಪ್ತಿಯಾಗದ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು.

ಐಸಿಸ್ ನಂಟು ಇರುವ ವ್ಯಕ್ತಿಯೊಂದಿಗೆ ಸಿದ್ದರಾಮಯ್ಯ ವೇದಿಕೆ ಹಂಚಿಕೊAಡಿದ್ದಾರೆ : ಯತ್ನಾಳ್

ಬೆಳಗಾವಿ, ಡಿ. ೬: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐಸಿಸ್ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಯೊಂದಿಗೆ ವೇದಿಕೆ ಹಂಚಿಕೊAಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬುಧವಾರ ಗಂಭೀರ ಆರೋಪ ಮಾಡಿದ್ದಾರೆ. ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಡಿಸೆಂಬರ್ ೪ ರಂದು ಹುಬ್ಬಳ್ಳಿ ನಗರದ ಬಾಷಾ ಪೀರ್ ದರ್ಗಾ ಬಳಿ ನಡೆದ ದಕ್ಷಿಣ ಭಾರತ ಮುಸ್ಲಿಂ ಧಾರ್ಮಿಕ ಮುಖಂಡರ ಸಮಾವೇಶದಲ್ಲಿ ಐಸಿಸ್ ಸಂಪರ್ಕ ಹೊಂದಿರುವ ವ್ಯಕ್ತಿ ಭಾಗವಹಿಸಿದ್ದರು ಎಂದು ಆರೋಪಿ ಸಿದರು. ಆ ವ್ಯಕ್ತಿ ಸಿಎಂ ಸಿದ್ದರಾಮಯ್ಯ ಅವರ ಪಕ್ಕದಲ್ಲೇ ಕುಳಿತಿದ್ದರು. ವೇದಿಕೆ ಮೇಲಿರುವ ಐಸಿಸ್ ಸಂಪರ್ಕ ಹೊಂದಿರುವ ವ್ಯಕ್ತಿಯ ಬಗ್ಗೆ ಇವರಿಗೆ ಮಾಹಿತಿ ಇಲ್ಲವೇ? ಎಂದು ಪ್ರಶ್ನಿಸಿದರು. ಇದಕ್ಕೆ ಸಂಬAಧಿಸಿದAತೆ ನನಗೆ ಅಗತ್ಯವಿರುವ ಎಲ್ಲಾ ಮಾಹಿತಿಗಳು ಸಿಕ್ಕಿವೆ. ಭಯೋತ್ಪಾದಕ ಸಂಘಟನೆಯೊAದಿಗೆ ಸಂಪರ್ಕ ಹೊಂದಿರುವ ವ್ಯಕ್ತಿ ಸಿಎಂ ಜೊತೆ ವೇದಿಕೆ ಹಂಚಿಕೊAಡಿರುವುದು ಅತ್ಯಂತ ಖಂಡನೀಯ ಎಂದು ಯತ್ನಾಳ್ ಹೇಳಿದ್ದಾರೆ. ನಾನು ಹುಡುಗಾಟಿಕೆಗೆ ಈ ಹೇಳಿಕೆ ನೀಡುತ್ತಿಲ್ಲ. ನಾನೇ ಇನ್ನೊಂದು ವಾರದಲ್ಲೇ ಎಲ್ಲ ಮಾಹಿತಿ ನೀಡುತ್ತೇನೆ ಎಂದರು.

ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮಸೂದೆ ಅಂಗೀಕಾರ

ನವದೆಹಲಿ, ಡಿ. ೬: ಜಮ್ಮು ಮತ್ತು ಕಾಶ್ಮೀರ ಮೀಸಲಾತಿ ತಿದ್ದುಪಡಿ ಮಸೂದೆ -೨೦೨೩ ಹಾಗೂ ಜಮ್ಮು ಮತ್ತು ಕಾಶ್ಮೀರ ಮರು ಸಂಘಟನೆ ತಿದ್ದುಪಡಿ ಮಸೂದೆ ೨೦೨೩ ಅನ್ನು ಬುಧವಾರ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬAಧಿಸಿದ ಈ ಎರಡು ಮಸೂದೆಗಳನ್ನು ಮಂಡಿಸಿದರು. ಮಸೂದೆ ಮಂಡಿಸಿ ಮಾತನಾಡಿದ ಅಮಿತ್ ಶಾ, ಮೋದಿ ಸರ್ಕಾರದ ಗುರಿ ಪಿಒಕೆ ಎಂದು ಘೋಷಿಸಿದರು. ಯಾರಿಗೂ ಕಾಶ್ಮೀರಿಗಳ ಬಗ್ಗೆ ಕಾಳಜಿ ಇರಲಿಲ್ಲ. ಆದರೆ ಈಗ ಅವರಿಗೆ ನ್ಯಾಯ ಕೊಡಿಸುವ ಸಮಯ ಬಂದಿದೆ. ಈ ಕೆಲಸವನ್ನು ನರೇಂದ್ರ ಮೋದಿ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಮೋದಿ ಸರ್ಕಾರ ಕೇವಲ ಉಗ್ರರನ್ನು ನಿರ್ಮೂಲನೆ ಮಾಡಿಲ್ಲ. ಉಗ್ರರಿಗೆ ಹಣ ನೀಡುತ್ತಿದ್ದ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಕ್ರಮ ತೆಗೆದುಕೊಂಡಿದೆ ಎಂದು ಅಮಿತ್ ಶಾ ತಿಳಿಸಿದರು. ಕಾಶ್ಮೀರದ ಈ ಎರಡು ಮಸೂದೆಗಳಲ್ಲಿ ಒಂದು ಮಸೂದೆ ಮಹಿಳೆ ಸೇರಿದಂತೆ ಇಬ್ಬರು ಕಾಶ್ಮೀರಿ ವಲಸಿಗ ಸಮುದಾಯದ ಸದಸ್ಯರನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡಲು ಅವಕಾಶ ಕಲ್ಪಿಸುತ್ತದೆ ಎಂದು ಕೇಂದ್ರ ಗೃಹ ಸಚಿವರು ಲೋಕಸಭೆಗೆ ತಿಳಿಸಿದರು.

ಮಗುಚಿ ಬಿದ್ದ ಬಸ್: ಓರ್ವ ಸಾವು, ೨೨ ಮಂದಿಗೆ ಗಾಯ

ರಜೌರಿ/ಜಮ್ಮು, ಡಿ. ೬: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಬಸ್ ಮಗುಚಿ ಬಿದ್ದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿ, ೧೪ ವಿದ್ಯಾರ್ಥಿಗಳು ಸೇರಿ ೨೨ ಮಂದಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ. ಜಮ್ಮುವಿನ ರಾಷ್ಟಿçÃಯ ಹೆದ್ದಾರಿ ತಂಡಿಕಾಸ್ಸಿ ಗ್ರಾಮದ ರಾಧಾ ಸೋಮಿ ಆಶ್ರಮದ ಬಳಿ ಅಪಘಾತ ಸಂಭವಿಸಿದೆ. ಮಂಜಕೋಟೆಯಿAದ ರಜೌರಿಗೆ ತೆರಳುತ್ತಿದ್ದ ಬಸ್ ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಗಾಯಾಳುಗಳನ್ನು ರಜೌರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರನ ಹತ್ಯೆ

ಪಾಕಿಸ್ತಾನ, ಡಿ. ೬: ಪಾಕಿಸ್ತಾನದಲ್ಲಿ ಭಾರತಕ್ಕೆ ಬೇಕಾದ ಮತ್ತೊಬ್ಬ ಶತ್ರುವಿನ ಹತ್ಯೆಯಾಗಿದೆ. ಲಷ್ಕರ್-ಎ-ತೊಯ್ಬಾದ ಟಾಪ್ ಕಮಾಂಡರ್ ಅದ್ನಾನ್ ಅಹ್ಮದ್ ಅಲಿಯಾಸ್ ಹಂಜಾಲಾ ಅದ್ನಾನ್‌ನನ್ನು ಪಾಕಿಸ್ತಾನದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕರಾಚಿಯಲ್ಲಿ ಲಷ್ಕರ್ ಭಯೋತ್ಪಾದಕ ಹಂಜಲಾ ಅದ್ನಾನ್ ಮೇಲೆ ಅಪರಿಚಿತ ದಾಳಿಕೋರರು ದಾಳಿ ನಡೆಸಿದ್ದಾರೆ. ೨೦೧೫ರಲ್ಲಿ ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ ಮತ್ತು ೨೦೧೬ರಲ್ಲಿ ಪಾಂಪೋರ್‌ನಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆಯ ಮೇಲಿನ ದಾಳಿಯ ಮಾಸ್ಟರ್‌ಮೈಂಡ್ ಆಗಿದ್ದ. ಪಾಂಪೋರ್ ದಾಳಿಯಲ್ಲಿ ೮ ಯೋಧರು ಹುತಾತ್ಮರಾಗಿದ್ದರೆ, ೨೨ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದರು. ಡಿಸೆಂಬರ್ ೩ರ ರಾತ್ರಿ ಹಂಜಾಲಾ ಅದ್ನಾನ್ ಮೇಲೆ ಅಪರಿಚಿತ ಬಂದೂಕುಧಾರಿಗಳು ದಾಳಿ ಮಾಡಿದರು. ಅವನ ಮೇಲೆ ನಿರಂತರವಾಗಿ ಗುಂಡುಗಳನ್ನು ಹಾರಿಸಲಾಯಿತು. ಹಂಜಾಲಾಗೆ ನಾಲ್ಕು ಗುಂಡು ತಗುಲಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು Áತ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ.

ದೆಹಲಿಯಲ್ಲಿ ಹೈಅಲರ್ಟ್

ನವದೆಹಲಿ, ಡಿ. ೬: ೨೦೦೧ರ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಗುರುತಿಸುವ ದಿನವಾದ ತಾ. ೧೩ ರಂದು ಸಂಸತ್ತಿನ ಅಡಿಪಾಯವನ್ನು ಬುಡಮೇಲು ಮಾಡುವುದಾಗಿ ಬೆದರಿಕೆಯೊಡ್ಡುವ ವೀಡಿಯೋ ಸಂದೇಶವನ್ನು ಯುಎಸ್ ಮೂಲದ ಖಲಿಸ್ತಾನಿ ಬೆಂಬಲಿಗ ಗುರುಪತ್ವಂತ್ ಸಿಂಗ್ ಪನ್ನು ಬಿಡುಗಡೆ ಮಾಡಿದ್ದು, ದೆಹಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಸಂಸತ್ತಿನ ಸುತ್ತಮುತ್ತ ಸೇರಿದಂತೆ ಇಡೀ ದೆಹಲಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಗುರಿ ತಪ್ಪಿದ ಡ್ರೋನ್ ದಾಳಿ:೮೫ ಮಂದಿ ಸಾವು

ಅಬುಜಾ, ಡಿ. ೬: ವಾಯುವ್ಯ ನೈಜೀರಿಯಾದಲ್ಲಿ ಸೇನೆಯ ಡ್ರೋನ್ ದಾಳಿ ಗುರಿ ತಪ್ಪಿ, ೮೫ ಮಂದಿ ನಾಗರಿಕರು ದಾರುಣ ಸಾವಿಗೀಡಾಗಿದೆ. ನೈಜೀರಿಯಾದ ಕಡುನಾ ರಾಜ್ಯದ ತುಡುನ್ ಬಿರಿ ಗ್ರಾಮದ ಬಳಿ ಭಯೋತ್ಪಾದಕರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ಆದರೆ ಸೇನೆ ಹಾರಿಸಿದ್ದ ಡ್ರೋನ್ ಗುರಿ ತಪ್ಪಿದ್ದು, ನಾಗರಿಕರ ಮೇಲೆ ದಾಳಿ ಮಾಡಿದೆ. ನೈಜೀರಿಯಾದ ಸಂಘರ್ಷದ ವಲಯದಲ್ಲಿ ನಡೆದ ಮಾರಣಾಂತಿಕ ದಾಳಿ ಬಗ್ಗೆ ತನಿಖೆ ನಡೆಸಲು ದೇಶದ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ಮೂಲಗಳ ಪ್ರಕಾರ ದಾಳಿಯಲ್ಲಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸೇರಿದಂತೆ ೮೫ ಮಂದಿ ಮೃತಪಟ್ಟಿದ್ದರೆ, ಕನಿಷ್ಟ ೬೬ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ರಾಷ್ಟಿçÃಯ ತುರ್ತು ನಿರ್ವಹಣಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.