ಮಡಿಕೇರಿ, ಡಿ. ೬: ಚೆಟ್ಟಿಮಾನಿ ಸಾಂದೀಪನಿ ವಿದ್ಯಾಪೀಠದ ೨೦೨೩-೨೪ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ೩ ದಿನಗಳ ಕಾಲ ವಿಜೃಂಭಣೆಯಿAದ ಹಮ್ಮಿಕೊಳ್ಳಲಾಯಿತು.

ವಿದ್ಯಾರ್ಥಿಗಳಿಗೆ ವಿವಿಧ ವೈಯಕ್ತಿಕ ಹಾಗೂ ಶಾಲಾ ವಿದ್ಯಾರ್ಥಿ ತಂಡಗಳಾದ ಕಾವೇರಿ, ಯಮುನ, ಗಂಗಾ, ತುಂಗಾ ತಂಡಗಳಿಗೆ ಕಬಡ್ಡಿ, ಲಗೋರಿ, ಹಗ್ಗಜಗ್ಗಾಟ ಹಾಗೂ ಕ್ರಿಕೆಟ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಇದರಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ವಿತರಣೆ ಮಾಡಲಾಯಿತು. ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡ ಯಮುನಾ ತಂಡವು ವಿನ್ರ‍್ಸ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡರೆ, ತುಂಗಾ ತಂಡವು ರನ್ರ‍್ಸ್ ಟ್ರೋಫಿಯನ್ನು ಪಡೆದುಕೊಂಡಿತು.

ಟ್ರೋಫಿಯನ್ನು ಶಾಲಾ ಕಾರ್ಯದರ್ಶಿ ಕೆ.ಆರ್. ಯೋಗೇಶ್ ಅವರು ನೀಡಿದರು. ಕ್ರೀಡಾ ಸಂಯೋಜಕಿಯಾಗಿ ಅರ್ಪಿತ ಕಾರ್ಯ ನಿರ್ವಹಿಸಿದರು.