ಮಡಿಕೇರಿ, ಡಿ. ೫: ಮಂಗಳೂರಿನ ಗುರುಗೋಜು ರಾಯು ಕರಾಟೆ ಅಕಾಡೆಮಿ ಇಂಡಿಯಾ ವತಿಯಿಂದ ನಡೆದ ರಾಷ್ಟçಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

೧೦ ವರ್ಷದೊಳಗಿನ ಕರಾಟೆ ವಿಭಾಗದಲ್ಲಿ ದಿಗಂತ್ (ದ್ವಿತೀಯ) ಹಾಗೂ ಕುಮಿತೆ ವಿಭಾಗದಲ್ಲಿ (ತೃತೀಯ), ೯ ವರ್ಷದೊಳಗಿನ ಕರಾಟೆ ವಿಭಾಗದಲ್ಲಿ ಪೊನ್ನಮ್ಮ (ತೃತೀಯ), ಕಟಾವಿಭಾಗದಲ್ಲಿ ಜಿ.ವಿ. ಲಿಖಿತ್ (ದ್ವಿತೀಯ), ೧೧ ವರ್ಷದೊಳ ಗಿನವರಲ್ಲಿ ಕರಾಟೆ ವಿಭಾಗದಲ್ಲಿ ಜನಿತ್ (ದ್ವಿತೀಯ), ೧೨ ವರ್ಷದವರಲ್ಲಿ ಕಟಾವಿಭಾಗದಲ್ಲಿ ಕಾವೇರಿಮನೋಜ್ (ಪ್ರಥಮ), ಶೋಭಿತ್ (ದ್ವಿತೀಯ), ಕಟಾ ವಿಭಾಗದಲ್ಲಿ ೧೩ ವರ್ಷದವರಲ್ಲಿ ಮೋಹಿತ್ (ಪ್ರಥಮ) ಹಾಗೂ ಕುಮಿತೆ ವಿಭಾಗದಲ್ಲಿ (ತೃತೀಯ), ಶಶಿರಾ (ದ್ವಿತೀಯ) ಹಾಗೂ ಕುಮಿತೆ ವಿಭಾಗದಲ್ಲಿ ೧೪ ವರ್ಷದ ವರುಣ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಕರಾಟೆಪಟುಗಳು ತರಬೇತುದಾರ ಮುಖೇಶ್ ಅವರಿಂದ ತರಬೇತಿ ಪಡೆದಿದ್ದಾರೆ.