ಮಡಿಕೇರಿ, ಡಿ. ೫: ನಾಡಿನಲ್ಲಿ ಬೀಡುಬಿಟ್ಟು ಆತಂಕ ಸೃಷ್ಟಿಸಿರುವ ಕಾಡಾನೆಗಳ ಸ್ಥಳಾಂತರ ಸಂಬAಧ ಉನ್ನತ ಮಟ್ಟದ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ಕೊಡಗು, ಚಿಕ್ಕಮಗಳೂರು, ಹಾಸನ ವನ್ಯಜೀವಿ ರಕ್ಷಣೆ ಮತ್ತು ಪೋಷಣೆಯ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ಬಗ್ಗೆ ಭರವಸೆ ನೀಡಿದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಆನೆ, ಹುಲಿ, ಕಾಡುಹಂದಿಗಳು ಸೇರಿದಂತೆ ಇನ್ನಿತರ ವನ್ಯಜೀವಿಗಳಿಂದ ಸಾರ್ವಜನಿಕರಿಗೆ ವಿಪರೀತ ಸಮಸ್ಯೆ ಎದುರಾಗಿದೆ. ಕಾಡಾನೆಗಳನ್ನು ಪ್ರತ್ಯೇಕವಾಗಿ ಸ್ಥಳಾಂತರಿಸುವ ಕಾರ್ಯಾಚರಣೆಗೆ ಮುಂದಾಗಬೇಕಾಗಿದೆ. ಕಾಡುಹಂದಿ ಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆಯೂ ಪೊನ್ನಣ್ಣ ಪ್ರಸ್ತಾಪಿಸಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿದರು. ಮಡಿಕೇರಿ ಶಾಸಕ ಮಂಥರ್ಗೌಡ ಕೂಡ ಪಾಲ್ಗೊಂಡು ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದರು. ಸಭೆಯಲ್ಲಿ ಇಂಧನ ಸಚಿವÀ ಕೆ.ಜೆ.ಜಾರ್ಜ್, ಸಣ್ಣ ನೀರಾವರಿ ಹಾಗೂ ಕೊಡಗು
(ಮೊದಲ ಪುಟದಿಂದ) ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು, ಸಹಕಾರ ಸಚಿವ ರಾಜಣ್ಣ ಹಾಗೂ ವಿಧಾನಸಭಾ ಉಪಸಭಾಪತಿ ಪ್ರಾಣೇಶ್, ಬೇಲೂರು ಶಾಸಕ ಸುರೇಶ್, ಸಕಲೇಶಪುರ ಶಾಸಕÀ ಮಂಜುನಾಥ, ಚಿಕ್ಕಮಗಳೂರು ಶಾಸಕÀ ತಿಮ್ಮಯ್ಯ, ಶೃಂಗೇರಿ ಶಾಸಕ ದೇವರಾಜೇಗೌಡ, ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಹಾಜರಿದ್ದರು.