ವೀರಾಜಪೇಟೆ, ಡಿ. ೩ : ವೀರಾಜಪೇಟೆ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ವೀರಾಜಪೇಟೆಯ ರೋಟರಿ ಪ್ರಾಥಮಿಕ ಶಾಲೆಯ ೧ರಿಂದ ೪ನೇ ತರಗತಿ ವಿಭಾಗದ ಭಕ್ತಿಗೀತೆ ಸ್ಪರ್ಧೆಯಲ್ಲಿ ಲಿಶ್ಮಿತಾ ಪ್ರಥಮ ಹಾಗೂ ೫ ರಿಂದ ೭ನೇ ತರಗತಿ ವಿಭಾಗದಲ್ಲಿ ಪಾವನಿ ಲಘು ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾರೆ.