ಪೊನ್ನಂಪೇಟೆ, ಡಿ. ೨: ಕೊಡಗು ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ಕೊಡ್ಲಿಪೇಟೆ ಸಮೀಪದ ದೊಡ್ಡಕೊಡ್ಲಿ ಗ್ರಾಮದಲ್ಲಿ ಅನಾರೋಗ್ಯದಿಂದ ನಡೆಯಲಾಗದ ಸ್ಥಿತಿಯಲ್ಲಿದ್ದ ಲಲಿತಾ ಎಂಬ ಮಹಿಳೆಗೆ ಗಾಲಿ ಕುರ್ಚಿಯನ್ನು ನೀಡಲಾಯಿತು. ಒಕ್ಕೂಟದ ಮುಖ್ಯಸ್ಥ ಡೇವಿಡ್ ವೇಗಸ್ ಅವರು ಗಾಲಿ ಕುರ್ಚಿಯನ್ನು ಹಸ್ತಾಂತರಿಸಿದರು.

ಈ ಸಂದರ್ಭ ಒಕ್ಕೂಟದ ಎಂ.ಇ. ಮಹಮ್ಮದ್, ಅನಿಲ್ ರೈ, ಹನೀಫ್ ಸೋನ, ನಾಸಿರ್ ಬೇಡಗೊಟ್ಟ, ಕೆ.ಎ. ನಾಗೇಶ್, ಪಾವನಾ ಗಗನ್, ಬ್ಯಾಡÀಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನೀಫ್ ಇನ್ನಿತರರು ಹಾಜರಿದ್ದರು. ಅನಿಲ್ ರೈ ಅವರು ಫಲಾನುಭವಿಯು ಪಾಲಿಸಬೇಕಾದ ನಿಯಮಾವಳಿ ಪತ್ರ ವಿತರಿಸಿದರು. ಪಾವನಾ ಗಗನ್ ಕಾರ್ಯಕ್ರಮ ನಿರೂಪಿಸಿ, ಸ್ಥಳೀಯ ಕಾರ್ಮಿಕ ಸಂಘಟನೆಯ ಕಾರ್ಯದರ್ಶಿ ಇಫ್ತಿಕಾರ್ ವಂದಿಸಿದರು.