ಪೊನ್ನAಪೇಟೆ, ಡಿ. ೨: ಕಳೆದ ೫ ದಿನಗಳಿಂದ ಬಿಟ್ಟಂಗಾಲ ಸಮೀಪದ ವಿ. ಬಾಡಗದಲ್ಲಿ ನಡೆಯುತ್ತಿದ್ದ ವೀರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ ೨ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈ ಫ್ಲೆöÊಯರ್ಸ್ ಕಪ್-೨೦೨೩ರಲ್ಲಿ ಬಲಿಷ್ಠ ಚೇಂದಿರ ತಂಡ ಸತತವಾಗಿ ೨ನೇ ಬಾರಿಗೆ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಚಾಂಪಿಯನ್ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡಿತು. ಇದರಿಂದ ವಿನ್ನರ್ಸ್ ಪ್ರಶಸ್ತಿ ಪಡೆಯುವ ಹಂಬಲದೊAದಿಗೆ ಫೈನಲ್ ಪ್ರವೇಶಿಸಿದ ಕೊಂಗAಡ ತಂಡ ಆಸೆ ಈಡೇರಿಸಿಕೊಳ್ಳಲು ಸಾಧ್ಯವಾಗದೆ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟು ಕೊಳ್ಳಬೇಕಾಯಿತು.

ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಫೈನಲ್‌ನಲ್ಲಿ ಚೇಂದಿರ ತಂಡವು ಕೊಂಗAಡ ತಂಡವನ್ನು ೨-೦ ಗೋಲುಗಳಿಂದ ಸೋಲಿಸಿ ವಿಜಯದ ಪತಾಕೆ ಹಾರಿಸಿತು.

ಪಂದ್ಯದ ಆರಂಭದಿAದಲೇ ಮತ್ತೊಮ್ಮೆ

(ಮೊದಲ ಪುಟದಿಂದ) ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಹುಮ್ಮಸ್ಸಿನಿಂದ ಆಟ ಆರಂಭಿಸಿದ ಚೇಂದಿರ ತಂಡದ ಆಟಗಾರರು ಗೋಲುಗಳಿಸುವ ಉದ್ದೇಶದಿಂದ ಆಗಿಂದ್ದಾಗೆ ಎದುರಾಳಿಗಳ ‘ಡಿ' ಆವರಣದೊಳಗೆ ದಾಳಿ ನಡೆಸುತ್ತಿತ್ತು. ಈ ವೇಳೆ ಚೇಂದಿರ ತಂಡಕ್ಕೆ ದೊರೆತ ಉತ್ತಮ ಪಾಸ್ ಅನ್ನು ಬಳಸಿಕೊಂಡ ತಂಡದ ಅತಿಥಿ ಆಟಗಾರ ಧನುಷ್ ೬ನೇ ನಿಮಿಷದಲ್ಲಿ ಮೊದಲನೇ ಫೀಲ್ಡ್ ಗೋಲು ದಾಖಲಿಸಿ ಭರವಸೆ ಮೂಡಿಸಿದರು. ಇದರಿಂದ ಆಟದ ವೇಗವನ್ನು ಇನ್ನಷ್ಟು ಹೆಚ್ಚಿಸಿದ ಚೇಂದಿರ ತಂಡದ ಆಟಗಾರರು ಹಲವಾರು ಬಾರಿ ಗೋಲು ಗಳಿಸುವ ಯತ್ನ ಮುಂದುವರೆಸಿದಾಗ ಕೊಂಗAಡ ತಂಡದ ರಕ್ಷಣಾತ್ಮಕವಾದ ಆಟ ಸಾಕಷ್ಟು ಗೋಲುಗಳಿಗೆ ತಡೆಯೊಡ್ಡಿತು.

೨ನೇ ಕ್ವಾರ್ಟರ್ ಅವಧಿಯಲ್ಲಿ ಚೇಂದಿರ ತಂಡದ ಅತಿಥಿ ಆಟಗಾರ ಮಂಜುನಾಥ್ ೩೭ನೇ ನಿಮಿಷದಲ್ಲಿ ಆಕರ್ಷಕ ಫೀಲ್ಡ್ ಗೋಲೊಂದನ್ನು ದಾಖಲಿಸಿ ತಂಡದ ಅಂತರವನ್ನು ಹೆಚ್ಚಿಸಿದರು. ಬಳಿಕ ಗೋಲು ಗಳಿಸುವ ಪ್ರಯತ್ನಗಳನ್ನು ಉಭಯ ತಂಡಗಳ ಆಟಗಾರರು ನಿರಂತರವಾಗಿ ಮಾಡುತ್ತಿದ್ದರೂ, ಎರಡೂ ತಂಡಗಳ ಆಟಗಾರರ ಸಂಘಟಿತವಾದ ಶ್ರಮದಿಂದಾಗಿ ಯಾವುದೇ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ಈ ವೇಳೆ ಕೊಂಗAಡ ತಂಡಕ್ಕೆ ೬ ಮತ್ತು ಚೇಂದಿರ ತಂಡಕ್ಕೆ ೪ ಪೆನಾಲ್ಟಿ ಕಾರ್ನರ್ ದೊರೆತರೂ ಯಾವುದೇ ಗೋಲುಗಳು ತಂಡಗಳ ಪಾಲಾಗಲಿಲ್ಲ. ಕಳೆದ ಬಾರಿಯಂತೆ ಫೈನಲ್ ಪ್ರವೇಶಿಸಿದ್ದ ಕೊಂಗAಡ ತಂಡ ಈ ಬಾರಿ ಚಾಂಪಿಯನ್ ಪಟ್ಟಕ್ಕಾಗಿ ನಡೆಸಿದ ಹೋರಾಟ ಕೊನೆಗೂ ಫಲ ನೀಡಲಿಲ್ಲ.

ಚಂದುರ ತಂಡಕ್ಕೆ ೩ನೇ ಸ್ಥಾನ: ಎರಡು ಸೆಮಿಫೈನಲ್ಸ್ಗಳಲ್ಲಿ ಪರಾಭವಗೊಂಡ ಚಂದುರ ಮತ್ತು ಕರ್ತಮಾಡ ಕುಟುಂಬ ತಂಡಗಳ ನಡುವೆ ಶನಿವಾರ ಬೆಳಿಗ್ಗೆ ನಡೆದ ಪಂದ್ಯದಲ್ಲಿ ಚಂದುರ ತಂಡವು ಕರ್ತಮಾಡ ತಂಡವನ್ನು ೭-೧ ಗೋಲುಗಳಿಂದ ಮಣಿಸಿ ಹೈಫ್ಲೈಯರ್ಸ್ ಕಪ್‌ನ ತೃತೀಯ ಸ್ಥಾನದ ಬಹುಮಾನವನ್ನು ಗೆದ್ದುಕೊಂಡಿತು. ಹ್ಯಾಟ್ರಿಕ್ ಸಾಧನೆಯೊಂದಿಗೆ ೬ ಗೋಲುಗಳನ್ನು ಬಾರಿಸಿದ ಚಂದುರ ತಂಡದ ಅತಿಥಿ ಆಟಗಾರ ಚಿರನ್ ಮೇದಪ್ಪ ಪಂದ್ಯದುದ್ದಕ್ಕೂ ಗಮನ ಸೆಳೆದರು. ೧೧ನೇ, ೨೧ನೇ, ೨೫ನೇ, ೨೮ನೇ, ೩೮ನೇ ಮತ್ತು ೪೨ನೇ ನಿಮಿಷದಲ್ಲಿ ಚಿರನ್ ಮೇದಪ್ಪ ಗೋಲು ದಾಖಲಿಸಿದರೆ ೩೮ನೇ ನಿಮಿಷದಲ್ಲಿ ಸೋಹನ್ ಗೋಲು ಬಾರಿಸಿದರು. ಪರಾಜಿತ ಕರ್ತಮಾಡ ತಂಡದ ಪರವಾಗಿ ಅತಿಥಿ ಆಟಗಾರ ಬೆಳ್ಯಪ್ಪ ೧೩ನೇ ನಿಮಿಷದಲ್ಲಿ ಗೋಲು ಹೊಡೆದರು. ಈ ಪಂದ್ಯವನ್ನು ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯ ಪ್ರಧಾನ ವ್ಯವಸ್ಥಾಪಕರಾದ ಸಂತು ಕುಮಾರ್, ಹಾಕಿ ಕೂರ್ಗ್ ಕಾರ್ಯದರ್ಶಿ ಚೇತನ್, ಗಾಯಕ ಕೊಟ್ರಂಡ ಶ್ರೀಕಾಂತ್ ಪೂವಣ್ಣ ಆಟಗಾರರನ್ನು ಪರಿಚಯಿಸುವುದರ ಮೂಲಕ ಉದ್ಘಾಟಿಸಿದರು. ವಿಜೇತ ಮೂರೂ ತಂಡಗಳಿಗೂ ನಗದು ಬಹುಮಾನದೊಂದಿಗೆ ಶುದ್ಧ ಬೆಳ್ಳಿಯ ಹಾಕಿ ಸ್ಟಿಕ್ ಮತ್ತು ಚೆಂಡನ್ನು ಒಳಗೊಂಡ ಪಾರಿತೋಷಕವನ್ನು ನೀಡಿ ಗೌರವಿಸಲಾಯಿತು.

ಫೈನಲ್ಸ್ನಲ್ಲಿ ಪಂದ್ಯಾವಳಿ ನಿರ್ದೇಶಕರಾದ ಕುಪ್ಪಂಡ ದಿಲನ್ ಬೋಪಣ್ಣ ಅವರ ನೇತೃತ್ವದಲ್ಲಿ ನೆಲ್ಲಮಕ್ಕಡ ಪವನ್ ಮತ್ತು ಮೂಕಚಂಡ ನಿರನ್ ನಾಚಪ್ಪ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರೆ, ಕರವಂಡ ಅಪ್ಪಣ್ಣ, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಸಣ್ಣುವಂಡ ಲೋಕೇಶ್ ನಂಜಪ್ಪ ಮೊದಲಾದವರು ತಾಂತ್ರಿಕ ಸಮಿತಿಯಲ್ಲಿ ಕಾರ್ಯನಿರ್ವಹಿಸಿದರು. ಹಿರಿಯ ವೀಕ್ಷಕ ವಿವರಣೆಗಾರರಾದ ಮಾಳೇಟಿರ ಶ್ರೀನಿವಾಸ್ ವೀಕ್ಷಕ ವಿವರಣೆ ನೀಡಿದರು.

ಚಿತ್ರ ವರದಿ-ರಫೀಕ್ ತೂಚಮಕೇರಿ