ಮಡಿಕೇರಿ, ಡಿ. ೨: ಯಾವುದೇ ಒಂದು ಜನಾಂಗದ ಏಳಿಗೆಗೆ ಆಡಳಿತ ನಡೆಸುವ ಸರ್ಕಾರದ ಸಹಕಾರ ಅವಶ್ಯವಾಗಿದ್ದು, ಜನಪ್ರತಿನಿಧಿಗಳಾಗಿ ನಾವು ಸರ್ಕಾರದ ಸಂಪೂರ್ಣ ಸವಲತ್ತಿಗೆ ಪ್ರಯತ್ನಿಸುವುದಾಗಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಮತ್ತು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಅವರು ಭರವಸೆಯಿತ್ತರು.

ಕೊಡವಾಮೆರ ಕೊಂಡಾಟ ಸಂಘಟನೆ ನಡೆಸಿದ ಎರಡನೇ ವರ್ಷದ ಕೊಡವ ಅಂತರಕುಟುAಬ ಬಾಳೋಪಾಟ್‌ರ ಬಂಬAಗ ಸ್ಪರ್ದೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ್ದ ಅವರುಗಳು, ಜನಾಂಗೀಯ ಅಭಿವೃದ್ಧಿಯಲ್ಲಿ ಜನ ಪ್ರತಿನಿಧಿಗಳಾಗಿ ನಮ್ಮ ಪಾತ್ರವೂ ಮುಖ್ಯವಾಗಿದೆ. ಇದನ್ನು ನಾವು ಮನಗಂಡಿದ್ದು ಜಿಲ್ಲೆ ಮತ್ತು ಜನರ ಶ್ರೇಯೋಭಿವೃದ್ಧಿಗೆ ಪಕ್ಷ ರಾಜಕೀಯ ಬದಿಗಿಟ್ಟು ಒಮ್ಮತದಿಂದ ಶ್ರಮಿಸುತ್ತೇವೆ ಎಂದರು.

ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಪ್ರಪಂಚದ ವಿಶೇಷ ಜನಾಂಗವಾಗಿರುವ ಕೊಡವರ ಬುಡಕಟ್ಟು ಸ್ಥಾನಮಾನಕ್ಕೆ ಅಗತ್ಯವಾದ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಇದನ್ನು ನಾವು ಮನಗಂಡಿದ್ದು ಜಿಲ್ಲೆ ಮತ್ತು ಜನರ ಶ್ರೇಯೋಭಿವೃದ್ಧಿಗೆ ಪಕ್ಷ ರಾಜಕೀಯ ಬದಿಗಿಟ್ಟು ಒಮ್ಮತದಿಂದ ಶ್ರಮಿಸುತ್ತೇವೆ ಎಂದರು.

ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಪ್ರಪಂಚದ ವಿಶೇಷ ಜನಾಂಗವಾಗಿರುವ ಕೊಡವರ ಬುಡಕಟ್ಟು ಸ್ಥಾನಮಾನಕ್ಕೆ ಅಗತ್ಯವಾದ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಒಂದಾಗಿದ್ದು, ಯಾವುದೇ ರಾಜಕಾರಣ ಮಾಡದೆ ಒಮ್ಮತದಿಂದ ದುಡಿಯುತ್ತೇವೆ ಎಂದರು.

ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಅವರು ಮಾತನಾಡಿ ಜನಾಂಗದ ಏಳಿಗೆಯ ದೃಷ್ಟಿಯಿಂದ ಕೊಡವಾಮೆರ ಕೊಂಡಾಟ ಸಂಘಟನೆ ಶತ ಪ್ರಯತ್ನ ಮಾಡುತ್ತಾ ಜಾಗೃತಿ ಮೂಡಿಸುತ್ತಿದ್ದು, ಇವರಂತೇ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಪಟ್ಟರೆ

ಒಂದಾಗಿದ್ದು, ಯಾವುದೇ ರಾಜಕಾರಣ ಮಾಡದೆ ಒಮ್ಮತದಿಂದ ದುಡಿಯುತ್ತೇವೆ ಎಂದರು.

ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಅವರು ಮಾತನಾಡಿ ಜನಾಂಗದ ಏಳಿಗೆಯ ದೃಷ್ಟಿಯಿಂದ ಕೊಡವಾಮೆರ ಕೊಂಡಾಟ ಸಂಘಟನೆ ಶತ ಪ್ರಯತ್ನ ಮಾಡುತ್ತಾ ಜಾಗೃತಿ ಮೂಡಿಸುತ್ತಿದ್ದು, ಇವರಂತೇ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಪಟ್ಟರೆ

(ಮೊದಲ ಪುಟದಿಂದ) ಮತ್ತಷ್ಟು ಏಳಿಗೆ ಸಾಧ್ಯ ಎಂದರಲ್ಲದೆ, ಜನಾಂಗದ ಎಲ್ಲಾ ಸಮಾಜ ಮತ್ತು ಸಂಘಟನೆಗಳು ಒಂದೇ ವೇದಿಕೆಯಡಿ ಬರುವಂತಾಗಬೇಕು ಹಾಗಾದಾಗ ಒಗ್ಗಟ್ಟು ಮತ್ತು ಒಮ್ಮತದ ನಿರ್ಣಯಗಳಿಗೆ ಅನುವಾಗಲಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡವಾಮೆರ ಕೊಂಡಾಟ ಸಂಘಟನೆ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು ಕೊಡವ ಸಾಹಿತ್ಯದ ಮೇರು ವ್ಯಕ್ತಿಗಳಾದ ಹರಿದಾಸ ಅಪ್ಪನೆರವಂಡ ಅಪ್ಪಚ್ಚ ಕವಿ, ನಡಿಕೇರಿಯಂಡ ಚಿಣ್ಣಪ್ಪ, ಐ.ಮಾ.ಮುತ್ತಣ್ಣ ಅವರ ಸಾಹಿತ್ಯ ಸೇವೆಗೆ ಸೂಕ್ತ ಸ್ಥಾನಮಾನ ದೊರಕಲಿಲ್ಲ ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು ಎಂದರಲ್ಲದೆ, ಕಳೆದ ನಾಲ್ಕೂವರೆ ವರ್ಷಗಳಿಂದ ಕೊಡವಾಮೆರ ಕೊಂಡಾಟ ಸಂಘಟನೆಯು ಜನಾಂಗದ ಶ್ರೇಯಕ್ಕೆ ದುಡಿದಿದ್ದು ಮುಂದೆಯೂ ಪ್ರಯತ್ನ ನಡೆಯಲಿದೆ ಎಂದರು.

ವೇದಿಕೆಯಲ್ಲಿ ದಾನಿಗಳಾದ ಸರ್ಕಂಡ ಸೋಮಯ್ಯ, ಹಂಚೆಟ್ಟಿರ ಮನುಮುದ್ದಪ್ಪ, ಅಂಜಪರವAಡ ರಂಜು ಮುತ್ತಪ್ಪ ಹಾಜರಿದ್ದರು. ಎರಡನೇ ವರ್ಷದ ಬಾಳೋಪಾಟ್ ವಿಜೇತರಾದ ಚೇನಂಡ, ಕನ್ನಿಕಂಡ, ಓಡಿಯಂಡ ಹಾಗೂ ಮಾತಂಡ ಮೊಣ್ಣಪ್ಪ ನೆನಪಿನ ಪ್ರಬಂಧ ಸ್ಪರ್ಧೆ ವಿಜೇತರಾದ ಅಮ್ಮಣಿಚಂಡ ಗಂಗಮ್ಮ ಬೆಳ್ಯಪ್ಪ, ಬಾಚಮಾಡ ಭೀಮಯ್ಯ, ಸಣ್ಣುವಂಡ ಅಕ್ಕಮ್ಮ ಸನ್ನಿ ಅವರಿಗೆ ಬಹುಮಾನ ವಿತರಿಸಲಾಯಿತು.

ಮಿನ್ನಂಡ ಚಿಣ್ಣಮ್ಮ ಮತ್ತು ಮಿನ್ನಂಡ ಚೋಂದಮ್ಮ ಅವರು ತಳಿಯತಕ್ಕಿ ಬೊಳಕ್ ಮತ್ತು ಕುಂಬಡಿ ಗ್ರಾಮದ ಬಾಳೋಪಾಟ್ ತಂಡವು ಅತಿಥಿಗಳನ್ನು ಬಟ್ಟೆಪಾಟ್‌ನೊಂದಿಗೆ ನೆಲ್ಲಕ್ಕಿಗೆ ತರೆತಂದರೆ, ವೇದಿಕೆಯಲ್ಲಿ ಕೊಡವ ಮೂಲ ಪದ್ಧತಿಯಂತೆ ಚೆನಿಯಪಂಡ ಮನುಮಂದಣ್ಣ ಅವರು ಒಕ್ಕಣೆ ಕಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಸಂಘಟನೆಯ ಕಾರ್ಯಕಾರ ಕೆ. ಗಿರೀಶ್ ಭೀಮಯ್ಯ ಸ್ವಾಗತಿಸಿ, ಕೂಡ್ ಕಾರ್ಯಕಾರ ತೀತಮಾಡ ಸೋಮಣ್ಣ ವಂದಿಸಿದರೆ, ಸದಸ್ಯೆ ಕುಲ್ಲಚಂಡ ದೇಚಮ್ಮ ಕೇಸರಿ ನಿರೂಪಿಸಿದರು.