ಮಡಿಕೇರಿ, ಡಿ. ೨: ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶಗಳಿವೆ. ಇಂಥಹ ಅವಕಾಶಗಳನ್ನು ಸದುಪಯೋಗಪಡಿಸಿ ಕೊಳ್ಳುವಂತೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಯೋಜನಾ ನಿರ್ದೇಶಕಿ ಅನುರಾಧ ಎಸ್. ಪ್ರಕಾಶ್ ಕರೆ ನೀಡಿದರು.ನಗರದ ಕ್ರಿಸ್ಟಲ್ ಕೋರ್ಟ್ನಲ್ಲಿ ಇನ್ನರ್ ವೀಲ್ ಜಿಲ್ಲೆ ೩೧೮ ನ ೫೪ ನೇ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ ನೀಡಿದ ಬಳಿಕ ಜಿಲ್ಲಾ ಯೋಜನೆಯಾದ ಬಾಲಕಿಯರಿಗೆ ೧೦೦ ಸೈಕಲ್ ವಿತರಿಸುವ ಯೋಜನೆ ಮಡಿಕೇರಿ, ಡಿ. ೨: ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶಗಳಿವೆ. ಇಂಥಹ ಅವಕಾಶಗಳನ್ನು ಸದುಪಯೋಗಪಡಿಸಿ ಕೊಳ್ಳುವಂತೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಯೋಜನಾ ನಿರ್ದೇಶಕಿ ಅನುರಾಧ ಎಸ್. ಪ್ರಕಾಶ್ ಕರೆ ನೀಡಿದರು.
ನಗರದ ಕ್ರಿಸ್ಟಲ್ ಕೋರ್ಟ್ನಲ್ಲಿ ಇನ್ನರ್ ವೀಲ್ ಜಿಲ್ಲೆ ೩೧೮ ನ ೫೪ ನೇ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ ನೀಡಿದ ಬಳಿಕ ಜಿಲ್ಲಾ ಯೋಜನೆಯಾದ ಬಾಲಕಿಯರಿಗೆ ೧೦೦ ಸೈಕಲ್ ವಿತರಿಸುವ ಯೋಜನೆ ಮಹಿಳೆಯರೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ಈ ರಂಗಕ್ಕೆ ಪದಾರ್ಪಣೆ ಮಾಡಬೇಕು. ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಕಷ್ಟು ಲೆಕ್ಕಾಚಾರದ ಸವಾಲುಗಳಿವೆ. ತಂಡಸ್ಪೂರ್ತಿಯಿದೆ, ಹೊಸ ಚಿಂತನೆಗಳಿಗೆ ಸಾಕಷ್ಟು ಅವಕಾಶಗಳಿದೆ. ಭೂಮಿಯಲ್ಲಿಯೇ ಅನೇಕ ಪ್ರಯೋಗಗಳನ್ನು ಮಾಡಿದ ಬಳಿಕವೇ ಗಗನಕ್ಕೆ ರಾಕೆಟ್‌ಗಳನ್ನು ಉಡಾಯಿಸಲಾಗುತ್ತದೆ. ಒಮ್ಮೆ ಗಗನಕ್ಕೆ ಚಿಮ್ಮಿದ ಬಳಿಕ ಯಾವುದೇ ಸಮಸ್ಯೆ ಎದುರಾದರೂ ಅವುಗಳನ್ನು ಪರಿಹರಿಸುವುದು ಕಷ್ಟಸಾಧ್ಯ. ಹೀಗಾಗಿ ಭೂಮಿಯಲ್ಲಿ ಉಡಾವಣೆಗೆ ಮುಂಚಿನ ಸವಾಲುಗಳೇ ಬಾಹ್ಯಾಕಾಶ ರಂಗದಲ್ಲಿ ಕಾರ್ಯನಿರ್ವಹಿಸುವವರಿಗೆ ಮುಖ್ಯವಾಗಿರುತ್ತದೆ ಎಂದೂ ಇಸ್ರೋ ಸ್ಪೇಸ್ ಗರ್ಲ್ ಎಂದೇ ಖ್ಯಾತ ರಾಗಿರುವ ಅನುರಾಧ ಎಸ್. ಪ್ರಕಾಶ್ ಹೇಳಿದರು.
ನಾಲ್ಕು ವರ್ಷಗಳ ಕಾಲ ಚಂದ್ರಯಾನ ೩ರ ಬಗ್ಗೆಯೂ ಬಾಹ್ಯಾಕಾಶ ಕೇಂದ್ರದಲ್ಲಿ ವಿಜ್ಞಾನಿಗಳು, ಸಂಶೋಧಕರು ಊಟ, ತಿಂಡಿ, ನಿದ್ದೆಯ ಚಿಂತೆಯಿಲ್ಲದೇ ಯೋಚನೆ ಮಾಡಿದ್ದರ ಫಲವೇ ಚಂದ್ರಯಾನದ ಯಶಸ್ಸಿಗೆ ಕಾರಣ ಎಂದು ಅನುರಾಧ ಹೆಮ್ಮೆ ವ್ಯಕ್ತಪಡಿಸಿದರು.ಇನ್ನರ್ ವೀಲ್ ಜಿಲ್ಲೆ ೩೧೮ನ ಅಧ್ಯಕ್ಷೆ ಪೂರ್ಣಿಮಾ ರವಿ ಮಾತನಾಡಿ, ಮ್ಯಾಂಚೆಸ್ಟರ್‌ನಲ್ಲಿ ೧೦೦ ವರ್ಷಗಳ ಹಿಂದೆ ಪ್ರಾರಂಭವಾದ ಇನ್ನರ್ ವೀಲ್ ಇದೀಗ ಶತಮಾನೋತ್ಸವ ಸಂಭ್ರಮದಲ್ಲಿದೆ. ಮಹಿಳೆಯರ ಪುಟ್ಟ ಸಂಘವಾಗಿ ಪ್ರಾರಂಭವಾದದ್ದು ಇದೀಗ ಜಗತ್ತಿನ ಅತೀ ದೊಡ್ಡ ಮಹಿಳಾ ಸಂಘವಾಗಿ ಹೊರಹೊಮ್ಮಿದೆ. ಇನ್ನರ್ ವೀಲ್ ೧೦೦ ದೇಶಗಳಲ್ಲಿ ೪ ಸಾವಿರ ಕ್ಲಬ್‌ಗಳಿಂದ ೧.೪೦ ಲಕ್ಷ ಸದಸ್ಯೆ ಯರು ಇದ್ದಾರೆ ಎಂದು ಮಾಹಿತಿ ನೀಡಿದರು.(ಮೊದಲ ಪುಟದಿಂದ) ೯೪೪ ಯೋಜನೆಗಳು ತಮ್ಮ ಜಿಲ್ಲೆಯಲ್ಲಿ ಜಾರಿಗೆ ಬಂದಿರುವುದು ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.
ಬಾಲಕಿಯರಿಗೆ ೧೦೦ ಸೈಕಲ್‌ಗಳನ್ನು ಇಂದಿನಿAದ ೮ ಕಂದಾಯ ಜಿಲ್ಲಾ ವ್ಯಾಪ್ತಿಯಲ್ಲಿ ವಿತರಿಸಲಾಗುತ್ತದೆ. ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯಿAದ ಪ್ರಾರಂಭಿಕ ಹಂತವಾಗಿ ೫ ಸೈಕಲ್‌ಗಳನ್ನು ವಿತರಿಸಲಾಗುತ್ತದೆ. ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ಪ್ರಯಾಣಿಕರ ತಂಗುದಾಣ ಸೇರಿದಂತೆ ವಿವಿಧ ಯೋಜನೆಗಳನ್ನು ಸಾಮಾಜಿಕ ಚಟುವಟಿಕೆಗಳಿಗಾಗಿ ಜಾರಿಗೊಳಿಸಲಾಗಿದೆ ಎಂದೂ ಪೂರ್ಣಿಮಾ ರವಿ ತಿಳಿಸಿದರು.
ಸಮ್ಮೇಳನದಲ್ಲಿ ಕೊಡಗೂ ಸೇರಿದಂತೆ ಮೈಸೂರು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ೬೦೦ ಕ್ಕೂ ಅಧಿಕ ಸದಸ್ಯೆಯರು ಪಾಲ್ಗೊಂಡಿದ್ದಾರೆ. ವಿಶ್ವದಲ್ಲಿ ಇನ್ನರ್ ವೀಲ್ ಸಂಸ್ಥೆಯು ಇದೀಗ ಶತಮಾನೋತ್ಸವ ಸಂಭ್ರಮದಲ್ಲಿದೆ.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲೆಯ ಇನ್ನರ್ ವೀಲ್‌ನ ೫೧ ಸಂಸ್ಥೆಗಳ (ಮೊದಲ ಪುಟದಿಂದ) ೯೪೪ ಯೋಜನೆಗಳು ತಮ್ಮ ಜಿಲ್ಲೆಯಲ್ಲಿ ಜಾರಿಗೆ ಬಂದಿರುವುದು ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.
ಬಾಲಕಿಯರಿಗೆ ೧೦೦ ಸೈಕಲ್‌ಗಳನ್ನು ಇಂದಿನಿAದ ೮ ಕಂದಾಯ ಜಿಲ್ಲಾ ವ್ಯಾಪ್ತಿಯಲ್ಲಿ ವಿತರಿಸಲಾಗುತ್ತದೆ. ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯಿAದ ಪ್ರಾರಂಭಿಕ ಹಂತವಾಗಿ ೫ ಸೈಕಲ್‌ಗಳನ್ನು ವಿತರಿಸಲಾಗುತ್ತದೆ. ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ಪ್ರಯಾಣಿಕರ ತಂಗುದಾಣ ಸೇರಿದಂತೆ ವಿವಿಧ ಯೋಜನೆಗಳನ್ನು ಸಾಮಾಜಿಕ ಚಟುವಟಿಕೆಗಳಿಗಾಗಿ ಜಾರಿಗೊಳಿಸಲಾಗಿದೆ ಎಂದೂ ಪೂರ್ಣಿಮಾ ರವಿ ತಿಳಿಸಿದರು.
ಸಮ್ಮೇಳನದಲ್ಲಿ ಕೊಡಗೂ ಸೇರಿದಂತೆ ಮೈಸೂರು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ೬೦೦ ಕ್ಕೂ ಅಧಿಕ ಸದಸ್ಯೆಯರು ಪಾಲ್ಗೊಂಡಿದ್ದಾರೆ. ವಿಶ್ವದಲ್ಲಿ ಇನ್ನರ್ ವೀಲ್ ಸಂಸ್ಥೆಯು ಇದೀಗ ಶತಮಾನೋತ್ಸವ ಸಂಭ್ರಮದಲ್ಲಿದೆ.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲೆಯ ಇನ್ನರ್ ವೀಲ್‌ನ ೫೧ ಸಂಸ್ಥೆಗಳ ಅಧ್ಯಕ್ಷರು ತಮ್ಮ ಸಂಸ್ಥೆಯ ಧ್ವಜ ಹಿಡಿದು ಮೆರವಣಿಗೆ ಸಾಗಿಬಂದರು. ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ಸದಸ್ಯೆಯರು ಆರತಿಯೊಂದಿಗೆ ಸಮ್ಮೇಳನಕ್ಕೆ ಬಂದವರನ್ನು ಸ್ವಾಗತಿಸಿ ಗಮನ ಸೆಳೆದರು. ಅಂತೆಯೇ ಸ್ವಾಗತ ನೃತ್ಯವೂ ಆಕರ್ಷಕವಾಗಿತ್ತು.
ಜಿಲ್ಲಾ ಸಮ್ಮೇಳನ ಸಮಿತಿ ಅಧ್ಯಕ್ಷೆ ಡಾ.ವಿಮಲ ರಾಧಾಕೃಷ್ಣ, ಸಂಚಾಲಕಿ ಲತಾ ಚಂಗಪ್ಪ, ಮಡಿಕೇರಿ ಇನ್ನರ್ ವೀಲ್ ಅಧ್ಯಕ್ಷೆ ಕನ್ನು ದೇವರಾಜ್, ಜಿಲ್ಲಾ ಕಾರ್ಯದರ್ಶಿ ಶಬರಿ ಕಡಿದಾಳ್, ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷೆ ನೈನಾ ಅಚ್ಚಪ್ಪ ಸೇರಿದಂತೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. ಲಕ್ಷಿö್ಮ ಈಶ್ವರಭಟ್, ವಿಜಯಲಕ್ಷಿö್ಮ ಚೇತನ್ ಪ್ರಾರ್ಥಿಸಿದರು. ಡಾ.ವರ್ಷ ರವಿ, ಚಿತ್ರ ನಿರೂಪಿಸಿದರು. ಮಡಿಕೇರಿ ಇನ್ನರ್ ವೀಲ್ ಕಾರ್ಯದರ್ಶಿ ದಿವ್ಯಮುತ್ತಣ್ಣ ವಂದಿಸಿದರು.
ಕಾರ್ಯಕ್ರಮದಲ್ಲಿ ಇನ್ನರ್ ವೀಲ್‌ನ ಶತಮಾನೋತ್ಸವದ ಹಾದಿಯ ಸಾಕ್ಷö್ಯಚಿತ್ರ ಮತ್ತು ಚಂದ್ರಯಾನಕ್ಕೆ ಸಂಬAಧಿಸಿದ ಚಿತ್ರಗಳು ಪ್ರದರ್ಶಿಸಲ್ಪಟ್ಟಿತು.