ಮಡಿಕೇರಿ, ಡಿ. ೨: ಇತಿಹಾಸ ಪ್ರಸಿದ್ಧ ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ತಾ.೩ರಂದು (ಇಂದು) ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್‌ನಲ್ಲಿ ನಡೆಯಲಿದೆ.
ಬೊಟ್ಟಿಯತ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿ ನಾಡ್ ಈ ಮೂರು ನಾಡುಗಳು ಒಂದೆಡೆ ಸೇರಿ ನಡೆಸುವ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಬೆಳಿಗ್ಗೆ ೧೦ ಗಂಟೆಗೆ ಮೂರು ನಾಡಿನವರು ಮಂದ್ ಹಿಡಿಯುವ ಮೂಲಕ ಚಾಲನೆ ದೊರೆಯಲಿದೆ. ನಂತರ ಮೂರು ನಾಡಿನವರು ಸಾಮೂಹಿಕ ಪುತ್ತರಿ ಕೋಲಾಟ್ ಬಳಿಕ ಸಾರ್ವಜನಿಕರಿಗಾಗಿ ವಿವಿಧ ಪೈಪೋಟಿ ನಡೆಯಲಿದೆ.