ಮಡಿಕೇರಿ, ಡಿ. ೧: ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮೂರನೇ ವರ್ಷದ ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆ ತಾ. ೩ ರಂದು ಬೆಳಿಗ್ಗೆ ೯ ಗಂಟೆಯಿAದ ನಡೆಯಲಿದೆ. ಗ್ಯಾಲೆಂಟ್ ಶೂರ್ಸ್ ತಂಡದ ಆಯೋಜನೆಯಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯೊಂದಿಗೆ ‘ಕ್ಲೇ’ ಶೂಟಿಂಗ್ ಹಾಗೂ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಪಾಯಿಂಟ್ ೨೨, ೧೨ ಬೋರ್ ಹಾಗೂ ಏರ್ರೈಫಲ್ ವಿಭಾಗಗಳಿದ್ದು, ಸರ್ವರಿಗೂ ಭಾಗವಹಿಸಲು ಮುಕ್ತ ಅವಕಾಶವಿದೆ ಎಂದು ಆಯೋಜಕರು ‘ಶಕ್ತಿ’ಗೆ ತಿಳಿಸಿದ್ದಾರೆ.