ಮಡಿಕೇರಿ, ಡಿ. ೧: ಮಡಿಕೇರಿಯಲ್ಲಿ ತಾ.೨ ಮತ್ತು ೩ ರಂದು ಎರಡು ದಿನಗಳ ಕಾಲ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಶತಪರ್ವ ಹೆಸರಿನ ಜಿಲ್ಲಾ ಸಮ್ಮೇಳನ ಆಯೋಜಿತವಾಗಿದ್ದು, ೮ ಕಂದಾಯ ಜಿಲ್ಲೆಗಳಿಗೆ ಸೇರಿದ ಕ್ಲಬ್ ಗಳ ಅಂದಾಜು ೬೦೦ ಸದಸ್ಯೆಯರು ಪಾಲ್ಗೊಳ್ಳಲಿದ್ದಾರೆ ಎಂದು ಇನ್ನರ್ ವೀಲ್ ಜಿಲ್ಲಾಧ್ಯಕ್ಷೆ ಪೂರ್ಣಿಮಾ ರವಿ ತಿಳಿಸಿದ್ದಾರೆ.

ನಗರದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೂರ್ಣಿಮಾ ರವಿ, ತಾ.೨ ರಂದು ಸಂಜೆ ೪ ಗಂಟೆಗೆ ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಇಸ್ರೋ ಬಾಹ್ಯಾಕಾಶ ಸಂಸ್ಥೆಯ ಯೋಜನಾ ನಿರ್ದೇಶಕಿ ಅನುರಾಧ ಪ್ರಕಾಶ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಇನ್ನರ್ ವೀಲ್ ಸಂಸ್ಥೆಯ ಮಾಜಿ ಜಿಲ್ಲಾಧ್ಯಕ್ಷೆ ಡಾ.ವಿಮಲ ರಾಧಾಕೃಷ್ಣ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇನ್ನರ್ ವೀಲ್ ಜಿಲ್ಲೆ ಕೊಡಗು ಸೇರಿದಂತೆ ಮೈಸೂರು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡಿದ್ದು, ೫೧ ಕ್ಲಬ್‌ಗಳಿಂದ ಈ ಜಿಲ್ಲೆಯಲ್ಲಿ ೧೮೩೩ ಸದಸ್ಯೆಯರಿದ್ದಾರೆ ಎಂದು ತಿಳಿಸಿದರು.

ಎರಡನೇ ಜಿಲ್ಲಾ ಸಮ್ಮೇಳನದ ಯಶಸ್ವಿಗೆ ತಂಡದೊAದಿಗೆ ಕಾರ್ಯಪ್ರವೃತ್ತರಾಗಿರುವುದಾಗಿ ಪೂರ್ಣಿಮಾ ರವಿ ತಿಳಿಸಿದರು.

೫೦ ವರ್ಷಗಳನ್ನು ಪೂರೈಸುತ್ತಿರುವ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಜಿಲ್ಲಾ ಸಮ್ಮೇಳನದಲ್ಲಿ ಮಹಿಳೆಯರ ಉತ್ಪನ್ನಗಳು, ಮಹಿಳೆಯರಿಗಾಗಿನ ವಿವಿಧ ಮಳಿಗೆಗಳು ತೆರೆಯಲ್ಪಡುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿತವಾಗಿವೆ ಎಂದು ಮಾಹಿತಿ ನೀಡಿದ ಪೂರ್ಣಿಮಾ ರವಿ, ಸಮ್ಮೇಳನ ಸಂದರ್ಭ ಜಿಲ್ಲಾ ಇನ್ನರ್ ವೀಲ್ ವತಿಯಿಂದ ೧೦೦ ಸೈಕಲ್‌ಗಳನ್ನು ಬಾಲಕಿಯರಿಗೆ ವಿತರಿಸಲಾಗುವ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದರು.

ಬಾಲಕಿಯರಿಗೆ ಸೂಕ್ತ ಶಿಕ್ಷಣ, ಉದ್ಯೋಗ ನೀಡಿಕೆ, ಸ್ವಚ್ಛ ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಅನೇಕ ಸೌಕರ್ಯಗಳನ್ನು ಇನ್ನರ್ ವೀಲ್ ಸಂಸ್ಥೆಯು ನೀಡುತ್ತಾ ಬಂದಿದ್ದು, ತನ್ನ ಜಿಲ್ಲೆಯಲ್ಲಿ ಈ ವರ್ಷ ರೂ.೬೪.೮೦ ಲಕ್ಷ ಮೌಲ್ಯದ ೯೪೧ ಯೋಜನೆಗಳ ಮೂಲಕ ೩.೯೨ ಲಕ್ಷ ಮಹಿಳೆಯರಿಗೆ ಅನುಕೂಲ ನೀಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಕನ್ನು ದೇವರಾಜ್, ಕಾರ್ಯದರ್ಶಿ ದಿವ್ಯಾ ಮುತ್ತಣ್ಣ, ಸಮ್ಮೇಳನ ಸಮಿತಿ ಅಧ್ಯಕ್ಷೆ ಲತಾ ಚಂಗಪ್ಪ, ಸಹ ಅಧ್ಯಕ್ಷೆ ಶಫಾಲಿ ರೈ, ಖಜಾಂಜಿ ಲಕ್ಷಿö್ಮ ಈಶ್ವರ ಭಟ್ ಉಪಸ್ಥಿತರಿದ್ದರು.