ಹೆಚ್.ಕೆ. ಜಗದೀಶ್
ಗೋಣಿಕೊಪ್ಪಲು, ಡಿ. ೧: ಸೊಪ್ಪಿನ ಉಡುಗೆಯಲ್ಲಿ ಹೆಜ್ಜೆಹಾಕುತ್ತಿರುವ ಬುಡಕಟ್ಟು ಜನರು, ಹಾಡಿನ ಮೂಲಕವೇ ಪದ್ಧತಿ, ಪರಂಪರೆ, ಜೀವನ ಶೈಲಿಯ ಪರಿಚಯ, ಕಾಡುಮಕ್ಕಳ ನೃತ್ಯ ವೈವಿಧ್ಯ, ಶ್ರಮಿಕ ವರ್ಗದ ಸಂಸ್ಕೃತಿಯ ಅನಾವರಣ..
ಕಾಡು-ಮೇಡು ಅಲೆದುಕೊಂಡು, ತೋಟಗಳಲ್ಲಿ ಕೆಲಸ ಮಾಡುತ್ತ, ಇಂದಿಗೂ ಸಮಸ್ಯೆಗಳ ಸುಳಿಯಲ್ಲಿಯೇ ಜೀವನ ಕಟ್ಟಿಕೊಂಡಿರುವ ಗಿರಿಜನರ ಸಾಂಸ್ಕೃತಿಕ ಚಟುವಟಿಕೆಗಳು ಬಲು ಆಕರ್ಷಣೀಯ. ಅವರ ನೃತ್ಯ, ಹಾಡು ಎಂತವರನ್ನು ಸೂಜಿಗಲ್ಲಿನಂತೆ ಸೆಳೆದು ಮಂತ್ರಮುಗ್ದಗೊಳಿಸುತ್ತದೆ. ತಿತಿಮತಿ ಯಲ್ಲಿ ಆಯೋಜನೆಗೊಂಡಿದ್ದ ಗಿರಿಜನೋತ್ಸವ ಕಾಡುಮಕ್ಕಳ ಸಾಂಸ್ಕೃತಿಕ ವೈಭವಕ್ಕೆ ಬೆಳಕು ಚೆಲ್ಲಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಗ್ರ ಗಿರಿಜನ ಯೋಜನಾ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ವತಿಯಿಂದ ಪರಿಶಿಷ್ಟ ಪಂಗಡ ಉಪಯೋಜನೆಯಡಿ ತಿತಿಮತಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಗಿರಿಜನೋತ್ಸವ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಆಕರ್ಷಿಸಿದ ಸಾಂಸ್ಕೃತಿಕ ಕಾರ್ಯಕ್ರಮ
ಜೆ.ಪಿ.ರಮೇಶ್ ಅವರ ಗಿರಿಜನ ಆದಿವಾಸಿ ಹಾಡು ಎಲ್ಲರನ್ನು ರಂಗೇರಿಸಿತು. ಚೊಟ್ಟೆಪಾರೆ ಹಾಡಿಯ ಜೆ.ಕೆ.ರಾಮು ಮತ್ತು ತಂಡದವರು ಜೇನುಕುರುಬ ನೃತ್ಯ ಕಲಾ ಪ್ರದರ್ಶನ ಮಾಡಿ ಗಮನ ಸೆಳೆದರು.
ನಂಗ ಇರುದು ಹುಲ್ಲು ಮನೆ... ಹಿಂದೆ ಇದ್ದದ್ದು ಕಟ್ಟೆ ಬುಡಲಿನಲ್ಲಿ... ಈಗಲೂ ಇರುವುದು ಹುಲ್ಲು ಮನೆ...ಅಜ್ಜ ಅಜ್ಜಿ ಇದ್ದದ್ದು ಕಟ್ಟೆಬುಡಲೆ (ನಮಗೆ ಈಗಲೂ ಇರುವುದು ಹುಲ್ಲು ಮನೆ, ಹಿಂದೆ ಇದ್ದಿದ್ದು ಬಿದಿರು ಮನೆ, ಈಗಲೂ ಇರುವುದು ಹುಲ್ಲು ಮನೆ, ತಾತಂದಿರೂ ಇದ್ದಿದ್ದೂ ಸಹ ಹುಲ್ಲು ಮನೆ) ಜೇನು ಕುರುಬ ಭಾಷೆಯಲ್ಲಿ ಹಾಡು ಹಾಡಿ ನೃತ್ಯ ಪ್ರದರ್ಶನ ಮಾಡಿದ್ದು, ಎಲ್ಲರನ್ನು ಮುದಗೊಳಿಸಿತು.
ನಾಲಡಿ ಗ್ರಾಮದ ಬೋಜಕ್ಕಿ ಮತ್ತು ತಂಡದವರು ಕುಡಿಯರ ದುಡಿ ನೃತ್ಯ ಪ್ರದರ್ಶನ ಮಾಡಿದರು. ತೋರ ಗ್ರಾಮದ ಕುಡಿಯರ ಗೋಪಮ್ಮ ಮತ್ತು ತಂಡದವರು ಉರುಟ್ಟಿಕೋಟ್ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.
ಕುಡಿಯರ ಶಾರದ ಮತ್ತು ತಂಡದವರು ನೃತ್ಯ ಪ್ರದರ್ಶನದ ಜೊತೆ ಹಾಡು ಹಾಡಿ ಮನ ಸೆಳೆದರು. ನಾಣಚ್ಚಿ ಕುಮಾರ ತಂಡದವರು ಜೇನುಕುರುಬ ನೃತ್ಯ ಪ್ರದರ್ಶನ ಮಾಡಿದರು. ವಿವಿಧ ಆದಿವಾಸಿ ತಂಡಗಳ ಕಲಾವಿದರ ಕಲಾಪ್ರದರ್ಶನ ಮಾಡಿ ರಂಜಿಸಿದರು.
ಕುಶಾಲನಗರದ ರಾಜು ಮತ್ತು ತಂಡದವರು ಸರ್ಕಾರದ ನೂತನ ಕಾರ್ಯಕ್ರಮಗಳಾದ ಗ್ಯಾರಂಟಿ ಯೋಜನೆಗಳ ಬಗ್ಗೆ ಹಾಡು ಹಾಡಿದರು.
ಜೇನುಕುರುಬ ಕಲಾವಿದ ಜೆ.ಬಿ.ರಮೇಶ್ ಮಾತನಾಡಿ ಜೇನುಕುರುಬ ಸಂಸ್ಕೃತಿ ಮತ್ತು ಪದ್ಧತಿ, ಗೆಡ್ಡೆಗೆಣಸು ತಿಂದು ಬದುಕುತ್ತಿದ್ದು, ದೇವರ ಆರಾಧನೆ ಕುರಿತು ಹಾಡುವುದು, ಮರದ ಬುಡದಲ್ಲಿ ಕಲ್ಲು ಪೂಜಿ ಸುವುದು, ಹೀಗೆ ಹಲವು ಪದ್ಧತಿಯ ಬಗ್ಗೆ ಹಾಡು ಹಾಗೂ ಕಲಾ ಪ್ರದರ್ಶನ ಮೂಲಕ ಬೆಳಕು ಚೆಲ್ಲಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ೧೧ ಗಿರಿಜನರ ತಂಡ ತಮ್ಮ ಸಂಸ್ಕೃತಿಗಳನ್ನು ಬಿಂಬಿಸುವ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು.
ಆದಿವಾಸಿಗಳ ಸಮಸ್ಯೆ ಪರಿಹಾರಕ್ಕೆ ಸಭೆ - ಪೊನ್ನಣ್ಣ
ಶಾಸಕ ಎ.ಎಸ್. ಪೊನ್ನಣ್ಣ ಸೇರಿದಂತೆ ಆಗಮಿಸಿದ್ದ ಗಣ್ಯರನ್ನು ಸಾಂಸ್ಕೃತಿಕವಾಗಿ ಸ್ವಾಗತಿಸಿಕೊಳ್ಳಲಾ ಯಿತು. ಡೊಳ್ಳು ಬಾರಿಸಿಕೊಂಡು ಕಾಡು ಹೂಗಳನ್ನು ನೀಡಿ ಅತಿಥಿಗಳನ್ನು ಬರಮಾಡಿಕೊಳ್ಳಲಾಯಿತು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆದಿವಾಸಿ ಜನರ ಸಂಖ್ಯೆ ಹೆಚ್ಚಿದ್ದು, ಆದಿವಾಸಿ ಜನರ ಕುಂದು ಕೊರತೆ ಪರಿಹರಿಸುವ ನಿಟ್ಟಿನಲ್ಲಿ ಸದ್ಯದಲ್ಲೇ ಸಭೆ ಆಹ್ವಾನಿಸಲಾಗುವುದು ಎಂದು
(ಮೊದಲ ಪುಟದಿಂದ) ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ತಿಳಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗಿರಿಜನರ ಕುಂದುಕೊರತೆ ಆಲಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಆ ನಿಟ್ಟಿನಲ್ಲಿ ಸ್ಥಳೀಯವಾಗಿ ಸಹ ಹಲವು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಭೆ ಆಯೋಜಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೀರಾಜಪೇಟೆ ತಾಲೂಕಿನಲ್ಲಿ ಶೋಷಿತರು, ಬಡವರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ ಇವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದರ ಜೊತೆಗೆ ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಚಿಂತನೆ ಹೊಂದಲಾಗಿದೆ. ಈ ವ್ಯವಸ್ಥೆಯಲ್ಲಿ ಎಲ್ಲಾ ಪ್ರಯತ್ನಗಳು ನಡೆಯುತ್ತಿದ್ದು, ವಸತಿ ಯೋಜನೆ ವಿದ್ಯುತ್ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಈ ಭಾಗದ ಬುಡಕಟ್ಟು ಸಮುದಾಯ, ಬಡವರ ಒದಗಿಸಿಕೊಡಲು ಪ್ರಯತ್ನಿಸಲಾಗುತ್ತದೆ ಎಂದರು.
ಸಮಗ್ರ ಗಿರಿಜನ ಯೋಜನಾ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಎಸ್.ಹೊನ್ನೇಗೌಡ ಜಿಲ್ಲೆಯಲ್ಲಿ ಸುಮಾರು ೨೫೦ ಹಾಡಿಗಳಿವೆ. ಜಿಲ್ಲೆಯಲ್ಲಿ ೨೧ ಸಾವಿರ ಯರವ, ೧೨ ಸಾವಿರ ಜೇನುಕುರುಬ ಸೇರಿದಂತೆ ಸುಮಾರು ೫೦ ಸಾವಿರಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ. ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಲು ಪ್ರಯತ್ನಿಸಲಾಗಿದೆ. ಆದಿವಾಸಿ ಜನರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸ ಲಾಗಿದೆ ಎಂದರು. ಜಿಲ್ಲೆಯ ೧೧ ಆಶ್ರಮ ಶಾಲೆಗಳಲ್ಲಿ ಗಿರಿಜನ ಸಮುದಾಯದ ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಮಾತನಾಡಿ ನಾಡಿನ ಸ್ಥಳೀಯ ಕಲೆ, ಸಂಸ್ಕೃತಿಗೆ ಪ್ರೋತ್ಸಾಹಿಸುವಲ್ಲಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಜನಪರ ಉತ್ಸವ ಹಾಗೂ ಗಿರಿಜನ ಉತ್ಸವ ಸಮಗ್ರ ಗಿರಿಜನ ಯೋಜನಾ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಎಸ್.ಹೊನ್ನೇಗೌಡ ಜಿಲ್ಲೆಯಲ್ಲಿ ಸುಮಾರು ೨೫೦ ಹಾಡಿಗಳಿವೆ. ಜಿಲ್ಲೆಯಲ್ಲಿ ೨೧ ಸಾವಿರ ಯರವ, ೧೨ ಸಾವಿರ ಜೇನುಕುರುಬ ಸೇರಿದಂತೆ ಸುಮಾರು ೫೦ ಸಾವಿರಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ. ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಲು ಪ್ರಯತ್ನಿಸಲಾಗಿದೆ. ಆದಿವಾಸಿ ಜನರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸ ಲಾಗಿದೆ ಎಂದರು. ಜಿಲ್ಲೆಯ ೧೧ ಆಶ್ರಮ ಶಾಲೆಗಳಲ್ಲಿ ಗಿರಿಜನ ಸಮುದಾಯದ ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಮಾತನಾಡಿ ನಾಡಿನ ಸ್ಥಳೀಯ ಕಲೆ, ಸಂಸ್ಕೃತಿಗೆ ಪ್ರೋತ್ಸಾಹಿಸುವಲ್ಲಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಜನಪರ ಉತ್ಸವ ಹಾಗೂ ಗಿರಿಜನ ಉತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ಎಲ್ಲಾ ಸ್ಥಳೀಯ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರಾಯೋಜನೆ ಕಾರ್ಯಕ್ರಮ ನೀಡುವ ಮೂಲಕ ಕಲೆ, ಸಂಸ್ಕೃತಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಎಂ.ಚAದ್ರಕಾAತ್, ಜಿ.ಪಂ. ಮಾಜಿ ಸದಸ್ಯೆ ಪಂಕಜ ಮಾತನಾಡಿದರು.
ತಿತಿಮತಿ ಗ್ರಾ.ಪಂ. ಅಧ್ಯಕ್ಷೆ ಪಿ.ಎಸ್. ಪೊನ್ನು, ಪೊನ್ನಂಪೇಟೆ ತಹಶೀಲ್ದಾರ್ ಪ್ರಶಾಂತ್, ವೀರಾಜಪೇಟೆ ತಹಶೀಲ್ದಾರ್ ರಾಮಚಂದ್ರ, ತಾಲೂಕು ಪರಿಶಿಷ್ಟ ಕಲ್ಯಾಣ ಇಲಾಖೆ ಅಧಿಕಾರಿ ನವೀನ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಬಿ.ಆರ್ಸಿ ವನಜಾಕ್ಷಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗುರುಶ್ರೀ, ಲ್ಯಾಂಪ್ ಸೊಸೈಟಿ ಅಧ್ಯಕ್ಷÀ ಮಣಿ, ತಿತಿಮತಿ ಮರೂರು ಗಿರಿಜನ ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ಸಿದ್ಧಲಿಂಗ ಶೆಟ್ಟಿ, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪಾರ್ವತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಪ್ರೋಜ್, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾದ ಮಂಗಳ, ಜಾನ್, ಇತರರು ಇದ್ದರು. ಸಂಪಾಜೆ ಶಾಲೆಯ ಶಿಕ್ಷಕ ಎಚ್.ಜಿ.ಕುಮಾರ ನಿರೂಪಿಸಿದರು, ಬಿ.ಸಿ.ಶಂಕರಯ್ಯ ನಾಡಗೀತೆ ಹಾಡಿದರು, ಮಣಜೂರು ಮಂಜುನಾಥ್ ವಂದಿಸಿದರು.