ವೇದಿಕೆಗೆ ಪಿ.ಎಂ ಮುತ್ತಣ್ಣ ಆಯ್ಕೆ
ಮಡಿಕೇರಿ, ಡಿ. ೧ : ಸೆಸ್ಕ್ ಅಧೀನಕ್ಕೆ ಒಳಪಡುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ವಿದ್ಯುತ್ ಗ್ರಾಹಕರ ಕುಂದುಕೊರತೆ ನಿವಾರಣಾ ವೇದಿಕೆಯ ಸದಸ್ಯರಾಗಿ ಕೊಡಗು ಜಿಲ್ಲಾ ವ್ಯಾಪ್ತಿಗೆ ಪಾಂಡೀರ ಎಂ. ಮುತ್ತಣ್ಣ ಅವರನ್ನು ನೇಮಿಸಿದೆ. ಮೂಲತಃ ಮಡಿಕೇರಿಯವರಾದ ಮುತ್ತಣ್ಣ ಅವರು ಇದೀಗ ಕುಶಾಲನಗರದಲ್ಲಿ ನೆಲೆಸಿದ್ದು, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಇವರನ್ನು ೩ ವರ್ಷಗಳ ಕಾಲ ಸದಸ್ಯರಾಗಿ ನೇಮಕಗೊಳಿಸಿ ಆದೇಶಿಸಿದೆ.