ಮಡಿಕೇರಿ, ಡಿ. ೧: ಸೋಮವಾರಪೇಟೆ ತಾಲೂಕು ಹಾನಗಲ್ಲು ಗ್ರಾಮದಲ್ಲಿ ಡಿಂಪಲ್ ಎಂಬಾತ ನೇಣುಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದ ಘಟನೆಗೆ ಸಂಬAಧಿಸಿದAತೆ ಸೋಮವಾರಪೇಟೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಈ ಪ್ರಕರಣವನ್ನು ಸಿಓಡಿ ತನಿಖೆಗೆ ವಹಿಸಬೇಕೆಂದು ಕಾಂಗ್ರೆಸ್ ವಕ್ತಾರ ಸುರೇಶ್ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾನಗಲ್ಲು ಗ್ರಾಮದ ವಿವಾಹಿತ ಮಹಿಳೆ ಭಾರತಿ ಹಾಗೂ ಆಕೆಯ ಇಬ್ಬರು ಮಕ್ಕಳೊಂದಿಗೆ ವಾಸವಿದ್ದ ಡಿಂಪಲ್, ತಾ. ೧೯.೦೯.೨೦೨೩ರಂದು ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದ. ಈ ಸಾವಿನ ಬಗ್ಗೆ ಆತನ ಸಂಬAಧಿಕರು ಸಂಶಯ ವ್ಯಕ್ತಪಡಿಸಿದ್ದರಿಂದ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿತ್ತು ಎಂದರು.
ಬಳಿಕ ಡಿಂಪಲ್ ತನ್ನ ಸಾವಿಗೆ ಭಾರತಿ ಮತ್ತು ಅವಳ ಪ್ರೇಮಿ ಕಾರಣ ಎಂದು ಬರೆದಿದ್ದ ಡೆತ್‌ನೋಟ್ ಸಿಕ್ಕಿದ್ದರಿಂದ ಹಾಗೂ ಕತ್ತು ಹಿಸುಕಿರುವುದರಿಂದ ಆಗಿರುವ ಸಾವು ಎಂದು ಶವ ಪರೀಕ್ಷೆ ನಡೆಸಿದ ವೈದ್ಯರು ನೀಡಿದ ವರದಿಯ ಆಧಾರದಲ್ಲಿ ಕೊಲೆ ಪ್ರಕರಣ ದಾಖಲಾಯಿತು. ಈ ಪ್ರಕರಣದಲ್ಲಿ ಭಾರತಿಯನ್ನು ಮಾತ್ರ ಬಂಧಿಸಲಾಗಿದೆ ಎಂದ ಸುರೇಶ್, ಇದರಲ್ಲಿ ಇನ್ನೂ ಕೆಲವರ ಕೈವಾಡ ಇದ್ದು, ಅವರುಗಳ ಬಂಧನವಾಗಿಲ್ಲ ಎಂದು ಆಪಾದಿಸಿದರು. ಈ ಸಂಬAಧ ಇದುವರೆಗೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆಯನ್ನು ಸಿಓಡಿಗೆ ವಹಿಸುವಂತೆ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ದ.ಸಂ.ಸ. ಸಂಚಾಲಕ ಡಿ.ಜೆ. ಈರಪ್ಪ, ಮುಖಂಡರಾದ ಪಿ.ವಿ. ಹರೀಶ್, ಕುಮಾರ್, ಮೃತನ ಸಂಬAಧಿಕರಾದ ನಯನ್, ದರ್ಶನ್ ಉಪಸ್ಥಿತರಿದ್ದರು.