ಕುಶಾಲನಗರ: ಕುಶಾಲನಗರ ಕೊಡವ ಸಮಾಜದ ಆಶ್ರಯದಲ್ಲಿ ಸಾಂಪ್ರದಾಯಿಕ ಪುತ್ತರಿ ನಮ್ಮೆ ನಡೆಯಿತು. ಸಮಾಜದ ಆವರಣದಲ್ಲಿ ಅಧ್ಯಕ್ಷ ಮಂಡೆಪAಡ ಬೋಸ್ ಮೊಣ್ಣಪ್ಪ ಅವರ ನೇತೃತ್ವದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಸೇರಿದ ಸಮುದಾಯ ಬಾಂಧವರು ಮತ್ತು ಸಾರ್ವಜನಿಕರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಬಲ್ಲಾರಂಡ ಜಾಲಿ ತಮ್ಮಯ್ಯ ಅವರು ಗುತ್ತಿಪೂಜೆ ನೆರವೇರಿಸಿ ಆವರಣದ ಗದ್ದೆಗೆ ತೆರಳಿ ಸಾಂಪ್ರದಾಯಿಕವಾಗಿ ಕದಿರು ತೆಗೆದರು.

ನಂತರ ಕದಿರು ವಿತರಣೆ ನಡೆಯಿತು. ಈ ಸಂದರ್ಭ ಸಮಾಜದ ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ, ಕಾರ್ಯದರ್ಶಿ ವಾಂಚೀರ ಮನು ನಂಜುAಡ, ಖಜಾಂಚಿ ಬಲ್ಯಾಟಂಡ ಚಿಂಗಪ್ಪ, ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ಸಾರ್ವಜನಿಕರು ಇದ್ದರು.ಚೆಟ್ಟಳ್ಳಿ: ಭತ್ತದ ತೆನೆಯನ್ನು ಹಿಡಿದ ಪುಟ್ಟ ಪುಟ್ಟ ಪುಟಾಣಿ ಶಾಲಾ ಮಕ್ಕಳು ಕೊಡಗಿನ ಸಂಪ್ರದಾಯದ ಪುತ್ತರಿ ಹಬ್ಬವನ್ನು ಸಂಭ್ರಮದಿAದ ಆಚರಿಸಿದ್ದಾರೆ.

ದಕ್ಷಿಣ ಕೊಡಗಿನ ಬಿಟ್ಟಂಗಾಲದ ದೇವಯ್ಯ ಮೆಮೋರಿಯಲ್ ಪ್ರಿಪ್ರೆಟರಿ ಸ್ಕೂಲ್‌ನಲ್ಲಿ ಮಕ್ಕಳಿಗೆ ಪಾಠ ಪ್ರವಚನಗಳ ಜೊತೆ ಮೂಲ ನೆಲೆಯಾದ ಕೊಡಗಿನ ಹಲವು ಸಾಂಪ್ರದಾಯಿಕ ಆಚರಣೆಯನ್ನು ಕಲಿಸಲಾಗುತ್ತಿದೆ. ಶಾಲೆಯ ಸಮೀಪವೇ ಕೃತಕವಾಗಿ ನಿರ್ಮಿಸಿದ ಪುಟ್ಟದಾದ ಗದ್ದೆಯನ್ನು ಹದಗೊಳಿಸಿ ಮಕ್ಕಳಿಂದಲೇ ನಾಟಿ ಕಾರ್ಯ ಮಾಡಲಾಗಿತ್ತು.

ಪುತ್ತರಿಯಂದು ಮಕ್ಕಳು, ಶಾಲಾ ಶಿಕ್ಷಕರು ಸೇರಿ ತಳಿಯತಕ್ಕಿ ದೀಪ, ಪುತ್ತರಿ ಕುತ್ತಿಯೊಂದಿಗೆ ಗದ್ದೆಗೆ ತೆರಳಿ ಪೂಜೆ ಸಲ್ಲಿಸಿ ಕದಿರು ತೆಗೆದರು.

ಭತ್ತದ ತೆನೆ ಹಿಡಿದ ಪುಟ್ಟ ಪುಟ್ಟ ಕೈಗಳು ಸಂಭ್ರಮಿಸುತ್ತಾ ಶಾಲೆಯತ್ತ ತೆರಳಿದವು. ಅಂದು ಮಕ್ಕಳೆಲ್ಲ ಹಬ್ಬದ ವಿಶೇಷ ಫಲಹಾರ ತಂಬಿಟ್ಟನ್ನು ಸವಿದು ಈ ಬಾರಿಯ ಹಬ್ಬಕ್ಕೆ ಶುಭ ಕೋರಿದರು.ಮಡಿಕೇರಿ: ನಿಟ್ಟೂರು-ಕಾರ್ಮಾಡು ಕಾಲಭೈರವ ದೇವಸ್ಥಾನದ ಭತ್ತದ ಗದ್ದೆಂiÀಲ್ಲಿ ಧಾನ್ಯ ಲಕ್ಷ್ಮಿಯನ್ನು ಸಂಭ್ರಮದಿAದ ಬರಮಾಡಿಕೊಳ್ಳಲಾಯಿತು. ‘ಪೊಲಿ ಪೊಲಿಯೇ ದೇವ’ ಎಂಬ ಉದ್ಘೋ ಷದೊಂದಿಗೆ ಪಟಾಕಿ ಶಬ್ದ ಮಾರ್ದನಿಸಿತು. ದೇವಸ್ಥಾನದಲ್ಲಿ ವಿಶೇಷ ಪೂಜೆಯ ನಂತರ ಗ್ರಾಮಸ್ಥರು ಮನೆಗಳಿಗೆ ತೆರಳಿ ತಮ್ಮ ತಮ್ಮ ಗದ್ದೆಗಳಲ್ಲಿ ಕದಿರನ್ನು ತೆಗೆದು ಹುತ್ತರಿ ಹಬ್ಬವನ್ನು ಆಚರಿಸಿದರು. ಕಾಲಭೈರವ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮೇಚಂಡ ಸೋಮಯ್ಯ, ಉಪಾಧ್ಯಕ್ಷ ಚೀರಂಡ ಸುಬ್ರಮಣಿ, ಕಾರ್ಯದರ್ಶಿ ಕೊಟ್ಟಂಗಡ ಮಧು ಮಂಜುನಾಥ್, ಅರ್ಚಕ ಸುರೇಶ್ ಭಟ್, ನಿರ್ದೇಶಕ ರಾದ ತಾಣಚ್ಚೀರ ಲೋಕೇಶ್, ಪಡಿಞರಂಡ ಪ್ರಭು ಕುಮಾರ್, ಪೊನ್ನಿಮಾಡ ಸಂತೋಷ್, ಹೊಟ್ಟೇಂಗಡ ಅಜಿತ್, ಲೋಹಿತ್, ಕಾಡೇಮಾಡ ಪ್ರವೀಣ್, ಪೊನ್ನಿಮಾಡ ತಿಮ್ಮಯ್ಯ, ಕಳ್ಳೇಂಗಡ ಉತ್ತಯ್ಯ, ಕಾಶಿ ವಿವೇಕಾನಂದ, ಪೊನ್ನಿಮಾಡ ಕುಶಾಲಪ್ಪ, ಮಲ್ಲೇಂಗಡ ಶಶಿಮಣಿ, ಕೊಲತಂಡ ಮುತ್ತಪ್ಪ, ಮತ್ತಿತರರು ಹಾಜರಿದ್ದರು.ಐಗೂರು: ಕೊಡಗಿನ ಸಾಂಪ್ರದಾಯಿಕ ಹುತ್ತರಿ ಹಬ್ಬವನ್ನು ಐಗೂರು ವ್ಯಾಪ್ತಿಯ ಕಿರುಗಂದೂರು, ಹೊಸತೋಟ, ಕಾಜೂರು, ಎಡವಾರೆ, ಐಗೂರು ವ್ಯಾಪ್ತಿಯಲ್ಲಿ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

ಸ್ಥಳೀಯ ಚೆನ್ನಿಗರಾಯ ದೇವಾಲಯದಲ್ಲಿ ಮಹಾವಿಷ್ಣುವಿಗೆ ಪೂಜಿ ಸಲ್ಲಿಸಿ, ನೆರೆಕಟ್ಟಿ ದೇವಾಲಯದ ಆವರಣದಲ್ಲಿರುವ ಗದ್ದೆಯಲ್ಲಿ ಕದಿರು ತೆಗೆದು, ಪೂಜೆ ಸಲ್ಲಿಸಿ, ಊರಿನವರಿಗೆ ಕದಿರು ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬಾರನ, ಮೂಲೆಮಜಲು, ಮಚ್ಚಂಡ, ಕೂಡಕಂಡಿ, ಕಾಳೇರಮ್ಮನ, ಕಾಸ್ಪಾಡಿ, ಮಿತ್ತಡ್ಕ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.