ಪೊನ್ನAಪೇಟೆ, ಡಿ.೧: ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈಫ್ಲೆöÊಯರ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕಳೆದ ೪ ದಿನಗಳಿಂದ ನಡೆಯುತ್ತಿರುವ ವೀರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ ೨ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಶುಕ್ರವಾರದಂದು ಸೆಮಿಫೈನಲ್‌ನಲ್ಲಿ ಸೆಣೆಸಾಡಿದ ಚೇಂದಿರ ಮತ್ತು ಕೊಂಗAಡ ತಂಡಗಳು ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿವೆ. ಕಳೆದ ಬಾರಿಯ ಚಾಂಪಿಯನ್ ಚೇಂದಿರ ಒಳಗೊಂಡ ಬಲಿಷ್ಠ ಈ ಎರಡು ತಂಡಗಳು ತಾ. ೨ ರಂದು (ಇಂದು) ಜರುಗಲಿರುವ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಮತ್ತೆ ಹೋರಾಟ ನಡೆಸಲಿದೆ.

ಪ್ರಥಮ ಸೆಮಿಫೈನಲ್ ಪಂದ್ಯದಲ್ಲಿ ಚೇಂದಿರ ತಂಡವು ಚಂದೂರ ತಂಡವನ್ನು ತಂಡವನ್ನು ೩-೦ ಗೋಲುಗಳಿಂದ ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆಯಿತು. ಪ್ರಥಮಾರ್ಧ ಆರಂಭಗೊAಡ ೪ನೇ ನಿಮಿಷದಲ್ಲೇ ಚೇಂದಿರ ತಂಡದ ಅತಿಥಿ ಆಟಗಾರ ಮಂಜುನಾಥ್ ಮಿಂಚಿನ ಗೋಲೊಂದನ್ನು ಬಾರಿಸಿ ತಂಡದ ಖಾತೆ ತೆರೆದರು.

ಇದರಿಂದ ಮತ್ತಷ್ಟು ಉತ್ಸುಕರಾದ ತಂಡದ ಆಟಗಾರರು ಉತ್ತಮ ಪಾಸ್‌ಗಳ ಮೂಲಕ ಆಟದ ವೇಗವನ್ನು ಹೆಚ್ಚಿಸಿದರು. ಪಂದ್ಯದ ೨ನೇ ಕ್ವಾರ್ಟರ್ ಅವಧಿಯಲ್ಲಿ ಚೇಂದಿರ ತಂಡದ ಅತಿಥಿ ಆಟಗಾರ ಧನುಷ್ ೨೧ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಪುನೀತ್ ೫೧ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡದ ಗೋಲಿನ ಅಂತರವನ್ನು ಹೆಚ್ಚಿಸಿದರು.

೨ನೇ ಸೆಮಿಫೈನಲ್ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ಸ್ ಕೊಂಗAಡ ತಂಡ ಕರ್ತಮಾಡ ತಂಡವನ್ನು ೪-೨ ಗೋಲುಗಳಿಂದ ಮಣಿಸಿತು. ಕರ್ತಮಾಡ ತಂಡದ ಅತಿಥಿ ಆಟಗಾರ ಬೆಳ್ಳಿಯಪ್ಪ ಪಂದ್ಯ ಆರಂಭಗೊAಡ ಮೊದಲನೇ ನಿಮಿಷದಲ್ಲೇ ಉತ್ತಮ ಪಾಸ್ ಅನ್ನು ಸಮರ್ಥವಾಗಿ ಬಳಸಿಕೊಂಡು ಮಿಂಚಿನ ಫೀಲ್ಡ್ ಗೋಲೊಂದನ್ನು ದಾಖಲಿಸಿ ತಂಡದ ಖಾತೆ ತೆರೆದರು. ಇದರಿಂದ ಆರಂಭದಿAದಲೇ ಸಮಬಲದ ಹೋರಾಟ ನಡೆಸಿದ ಉಭಯ ತಂಡಗಳು ಗೋಲುಗಳಿಸುವ ಪ್ರಯತ್ನ ಮಾಡುತ್ತಿದ್ದಂತೆ ೨ನೇ ಕ್ವಾರ್ಟರ್ ಅವಧಿಯಲ್ಲಿ ಕೊಂಗAಡ ತಂಡಕ್ಕೆ ದೊರೆತ ಪೆನಾಲ್ಟಿ ಕಾರ್ನರನ್ನು ತಂಡದ ಅತಿಥಿ ಆಟಗಾರ ಅದ್ವೆöÊತ್ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರಲ್ಲದೆ, ಗೋಲಿನ ಅಂತರವನ್ನು ಸಮನಾಗಿಸಿದರು.

ಸಂಘಟಿತ ಪ್ರಯತ್ನಗಳಿಗೆ ಒತ್ತು ನೀಡಿ ಆಟ ಬಿರುಸುಗೊಳಿಸಿದ ಕೊಂಗAಡ ತಂಡದ ಅತಿಥಿ ಆಟಗಾರ ನಾಚಪ್ಪ ೨೮ನೇ ಮತ್ತು ೪೩ನೇ ಮತ್ತು ಕೊನೆಯ ೫೯ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಪರಾಜಿತ ತಂಡದ ಅತಿಥಿ ಆಟಗಾರ ಬೆಳ್ಳಿಯಪ್ಪ ೪೪ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡದ ಗೋಲಿನ ಅಂತರವನ್ನು ೨ಕ್ಕೇರಿಸಿದರು.

ವಿ. ಬಾಡಗ ಹೈಫ್ಲೆöÊಯರ್ಸ್ ಸಂಸ್ಥೆಯ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ, ಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷ ಮಳವಂಡ ಗಿರೀಶ್ ಮುದ್ದಯ್ಯ, ಪದಾಧಿಕಾರಿಗಳಾದ ಕೊಂಗAಡ ಕಾಶಿ ಕಾವೇರಪ್ಪ, ಚೇಮಿರ ಪ್ರಕಾಶ್, ಕೋಲತಂಡ ಸುಬ್ರಮಣಿ, ಕಂಜಿತAಡ ಪೂವಣ್ಣ, ತೀತಿಮಾಡ ಬೋಪಣ್ಣ, ಕಂಜಿತAಡ ವಿಕ್ರಾಂತ್ ಮೊದಲಾದವರು ಪಂದ್ಯಾವಳಿಯ ಉಸ್ತುವಾರಿ ವಹಿಸಿಕೊಂಡಿದ್ದರು. ಹಿರಿಯ ವೀಕ್ಷಕ ವಿವರಣೆಗಾರರಾದ ಮಾಳೇಟಿರ ಶ್ರೀನಿವಾಸ್ ವೀಕ್ಷಕ ವಿವರಣೆ ನೀಡಿದರು.

ಪಂದ್ಯಾವಳಿ ನಿರ್ದೇಶಕರಾದ ಕುಪ್ಪಂಡ ದಿಲನ್ ಬೋಪಣ್ಣ ಅವರ ನೇತೃತ್ವದಲ್ಲಿ ತೀರ್ಪುಗಾರರಾದ ಚಂದಪ್ಪAಡ ಆಕಾಶ್, ಕೋಡಿಮಣಿಯಂಡ ಗಣಪತಿ, ಚೈಯಂಡ ಅಪ್ಪಚ್ಚು, ಕರವಂಡ ಅಪ್ಪಣ್ಣ, ಚೋಯಮಾಡಂಡ ಚಂಗಪ್ಪ, ನೆಲ್ಲಮಕ್ಕಡ ಪವನ್, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಸಣ್ಣುವಂಡ ಲೋಕೇಶ್ ನಂಜಪ್ಪ, ಪಟ್ರಪಂಡ ಮ್ಯಾಂಡಿ ಮಂದಣ್ಣ ಮೊದಲಾದವರು ತಾಂತ್ರಿಕ ಸಮಿತಿಯಲ್ಲಿ ಕಾರ್ಯನಿರ್ವಹಿಸಿದರು.

ಪಂದ್ಯಾವಳಿಗೆ ಇಂದು ತೆರೆ

ಕಳೆದ ಮಂಗಳವಾರದಿAದ ಆರಂಭಗೊAಡ ವಿ.ಬಾಡಗ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಶನಿವಾರ (ಇಂದು) ತೆರೆ ಬೀಳಲಿದೆ. ಮಧ್ಯಾಹ್ನ ೨:೩೦ ಗಂಟೆಗೆ ಫೈನಲ್ ಪಂದ್ಯ ನಡೆಯಲಿದ್ದು, ಇದಕ್ಕೂ ಮೊದಲು ಪಂದ್ಯಾವಳಿಯ ತೃತೀಯ ಸ್ಥಾನದ ಬಹುಮಾನಕ್ಕಾಗಿ ಸೆಮಿಫೈನಲ್ಸ್ಗಳಲ್ಲಿ ಪರಾಭವಗೊಂಡ ಚಂದೂರ ಮತ್ತು ಕರ್ತಮಾಡ ಕುಟುಂಬ ತಂಡಗಳ ನಡುವೆ ಪಂದ್ಯ ಜರುಗಲಿದೆ.

ವಿ.ಬಾಡಗ ಹೈಫ್ಲೆöÊಯರ್ಸ್ ಸಂಸ್ಥೆಯ ಸಲಹಾ ಮಂಡಳಿ ಅಧ್ಯಕ್ಷ ಮಳವಂಡ ಗಿರೀಶ್ ಮುದ್ದಯ್ಯ ಅಧ್ಯಕ್ಷತೆಯಲ್ಲಿ ಶನಿವಾರ ಮಧ್ಯಾಹ್ನದ ನಂತರ ನಡೆಯಲಿರುವ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಫೈರ್ ಪ್ರೊ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಂಬುಡುಮಾಡ ಎಸ್. ನರೇಂದ್ರ, ಬೆಂಗಳೂರಿನ ಕೈಗಾರಿಕೋದ್ಯಮಿ ಪಿ.ವಿ. ಮಂಜುನಾಥ್ ಬಾಬು, ವಿ. ಬಾಡಗ ಹೈಫ್ಲೆöÊಯರ್ಸ್ ಸಂಸ್ಥೆಯ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ, ಕಾಫಿ ಬೆಳೆಗಾರರಾದ ಚೇಮಿರ ಸದಾ ರಾಮಚ್ಚ, ಮಳವಂಡ ಬೋಜಮ್ಮ ಅಚ್ಚಪ್ಪ, ಚೇಮಿರ ಜಿ. ಪೂವಯ್ಯ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪಂದ್ಯಾವಳಿಯ ಸಮಾರೋಪ ಕಾರ್ಯಕ್ರಮದ ಅಂಗವಾಗಿ ಅಂತರರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ಪಿ.ತಿಮಯ್ಯ, ಅಂತರರಾಷ್ಟಿçÃಯ ಹಾಕಿ ಆಟಗಾರ ಒಲಂಪಿಯನ್ ಚೇಂದAಡ ನಿಕ್ಕಿನ್ ತಿಮ್ಮಯ್ಯ ಮತ್ತು ಉದಯೋನ್ಮುಖ ಅಥ್ಲೆಟಿಕ್ ತಾರೆ ಬೊಳ್ಳಂಡ ಉನ್ನತಿ ಅಯ್ಯಪ್ಪ

ಅವರನ್ನು ಹೈಫ್ಲೆöÊಯರ್ಸ್ ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೈಫ್ಲೆöÊಯರ್ಸ್ ಸಂಸ್ಥೆಯ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ ತಿಳಿಸಿದ್ದಾರೆ.

ವಿಶೇಷವಾಗಿ ಪಂದ್ಯಾವಳಿಯ ವಿನ್ನರ್ಸ್, ರನ್ನರ್ಸ್ ಮತ್ತು ತೃತೀಯ ಸ್ಥಾನ ವಿಜೇತ ತಂಡಗಳಿಗೆ ನಗದು ಬಹುಮಾನದೊಂದಿಗೆ ಕಳೆದ ಬಾರಿಯಂತೆ ಶುದ್ಧ ಬೆಳ್ಳಿಯ ಹಾಕಿ ಸ್ಟಿಕ್ ಮತ್ತು ಚೆಂಡನ್ನು ಒಳಗೊಂಡ ಟ್ರೋಫಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ಮಾಹಿತಿ ನೀಡಿದ್ದಾರೆ. - ರಫೀಕ್ ತೂಚಮಕೇರಿ