ಕೊಡ್ಲಿಪೇಟೆ, ಡಿ. ೧: ಸಂಬಾರ ಮಂಡಳಿ ಹಾಗೂ ಹೇಮಾವತಿ ರೋಟರಿ ಕ್ಲಬ್ ಮತ್ತು ಪ್ಲಾಂಟರ್ಸ್ ರಿಕ್ರಿಯೇಷನ್ ಕ್ಲಬ್ ಕೊಡ್ಲಿಪೇಟೆ ವತಿಯಿಂದ ಕಾಳುಮೆಣಸು ಬೆಳೆಯ ಗುಣಮಟ್ಟ ಸುಧಾರಣಾ ತರಬೇತಿ ಕಾರ್ಯಾಗಾರ ಸ್ಥಳೀಯ ಪ್ಲಾಂಟರ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.

ಮೆಣಸು ಬಳ್ಳಿಗೆ ನೀರೆರೆಯುವ ಮೂಲಕ ಹೇಮಾವತಿ ರೋಟರಿ ಕ್ಲಬ್ ಅಧ್ಯಕ್ಷ ಅಮೃತ್ ಕುಮಾರ್ ಕಾರ್ಯಾಗಾರ ಉದ್ಘಾಟಿಸಿದರು. ದೋಣಿಗಾಲ್ ಐ.ಸಿ.ಆರ್.ಐ. ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಡಾ. ಕೆ.ಎನ್. ಹರ್ಷ ರವರು ಮೆಣಸು ಬೆಳೆಯ ಕುರಿತು ಪ್ರಾತ್ಯಕ್ಷಿಕೆ ಮೂಲಕ ಸವಿಸ್ತಾರವಾಗಿ ಮಾಹಿತಿ ನೀಡಿದರು.

ಪ್ರತಿ ಮೂರು ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ನಡೆಸಿ ಅದರ ಆಧಾರದಲ್ಲಿ ಗೊಬ್ಬರ ಹಾಕಬೇಕು. ಈ ಭಾಗದಲ್ಲಿ ಬೆಳೆಯಬಹುದಾದ ತಳಿಗಳು ಹಾಗೂ ತಿಂಗಳವಾರು ಸಿಂಪಡಿಸ ಬೇಕಾದ ಔಷಧಿಗಳು ಮತ್ತು ಗೊಬ್ಬರ, ಮಳೆಯಾಧಾರಿತ ಮತ್ತು ನೀರಾವರಿ ಆಧಾರಿತ ಮೆಣಸು ಬೆಳೆಯುವ ಕುರಿತು ವಿವರಣೆ ನೀಡಿದರು. ಫಲವತ್ತಾದ ಭೂಮಿ ಮತ್ತು ಗುಣ ಮಟ್ಟದ ಮಣ್ಣಿನಿಂದ ಉತ್ತಮವಾದ ಕಾಳುಮೆಣ ಸನ್ನು ಬೆಳೆಯಬಹುದು. ಈ ನಿಟ್ಟಿನಲ್ಲಿ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳ ಬೇಕೆಂದರು. ಸಂಬಾರ ಮಂಡಳಿಯ ಸೋಮವಾರ ಪೇಟೆ ಕ್ಷೇತ್ರಾಧಿಕಾರಿ ಎನ್.ಬಿ. ಲೋಕೇಶ್ ಅವರು ಪ್ರಾಸ್ತಾವಿಕ ಮಾತನಾಡಿ, ಕಾಳುಮೆಣಸು ಬಳ್ಳಿಗಳ ಪೋಷಣೆ, ಕೀಟನಾಶಕ, ಫಸಲು ಪೋಷಣೆ ಸೇರಿದಂತೆ ಗುಣಮಟ್ಟವನ್ನು ಕಾಯ್ದು ಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಕ್ಷೇತ್ರಾಧಿಕಾರಿ ಗಳಾದ ಕುಮಾರ್, ಸಂಬಾರ ಮಂಡಳಿ ಯಸಳೂರು ಸಸ್ಯಪಾಲನ ಕೇಂದ್ರದ ವ್ಯವಸ್ಥಾಪಕ ರಮೇಶ್ ನಾಯಕ್ ಮಾಹಿತಿ ನೀಡಿದರು. ಕೊಡ್ಲಿಪೇಟೆ ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್ ಅವರು ಕಾರ್ಯಾ ಗಾರದ ಅಧ್ಯಕ್ಷತೆ ವಹಿಸಿದ್ದರು. ಸಕಲೇಶ ಪುರ ಸಂಬಾರ ಮಂಡಳಿ ಪ್ರಾದೇಶಿಕ ಕೇಂದ್ರದ ಉಪ ನಿರ್ದೆಶಕರಾದ ಎಂ.ವೈ. ಹೊನ್ನೂರು, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಹನೀಫ್, ಬೆಸೂರು ಗ್ರಾ.ಪಂ. ಅಧ್ಯಕ್ಷೆ ಕಮಲಮ್ಮ, ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಡಿ.ಭಗವಾನ್, ಹೇಮಾವತಿ ರೋಟರಿ ಲೆಫ್ಟಿನೆಂಟ್ ಹೆಚ್.ಎಂ. ದಿವಾಕರ್, ರೋಟರಿ ಕಾರ್ಯದರ್ಶಿ ಭಾನುಪ್ರಕಾಶ್, ಕಾಮಧೇನು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ರೇಣುಕಾ, ಬೆಳೆಗಾರರಾದ ಊರುಗುತ್ತಿ ಮಹೇಶ್, ವಿಶ್ವನಾಥ್ ಡಿ.ಎಸ್. ಸೋಮಶೇಖರ್, ಯು.ಹೆಚ್. ಲೋಕೇಶ್, ಉಮೇಶ್, ಸಿದ್ದೇಶ್, ಸಿರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.