ಸುAಟಿಕೊಪ್ಪ, ನ. ೨೯: ಸುಂಟಿಕೊಪ್ಪ ಹೋಬಳಿ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘ ಹಾಗೂ ಬಿಲ್ಲವ ವಿದ್ಯಾರ್ಥಿ ಘಟಕದ ವತಿಯಿಂದ ಡಿಸೆಂಬರ್ ೩ ರಂದು ಸ್ಥಳೀಯ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ನಾರಾಯಣ ಗುರುಗಳ ಜಯಂತೋತ್ಸವ, ಗೌರವ ಸಮರ್ಪಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ ೭ ಗಂಟೆಗೆ ಗಣಹೋಮ, ೮ ಗಂಟೆಗೆ ಉಪ್ಪಿನಂಗಡಿಯ ವಿನಯ್ ಶಾಂತಿ ಮತ್ತು ತಂಡದವರಿAದ ನಾರಾಯಣ ಗುರುಗಳ ಮಂಡಲ ಕಲಾಕೃತಿಯೊಂದಿಗೆ ಗುರು ಪೂಜೋತ್ಸವ ನಡೆಯಲಿದೆ.

ನಂತರ ಕೋದಂಡ ರಾಮ ಮಂದಿರದಿAದ ಭವ್ಯ ಅಲಂಕೃತ ಮಂಟಪದಲ್ಲಿ ಶ್ರೀ ನಾರಾಯಣ ಗುರುಗಳ ಮತ್ತು ಕೋಟಿ ಚೆನ್ನಯ್ಯ ಅವರ ಭಾವಚಿತ್ರ ಮತ್ತು ಕುಂಭ ಕಲಶದೊಂದಿಗೆ ಮುಖ್ಯ ಬೀದಿಯಲ್ಲಿ ಭವ್ಯ ಶೋಭಾಯಾತ್ರೆ ನಡೆಯಲಿದೆ.

ನಾರಾಯಣ ಗುರುಗಳ ಜಯಂತೋತ್ಸವದ ಅಂಗವಾಗಿ ಅಂದು ಮಧ್ಯಾಹ್ನದ ನಂತರ ಬಿಲ್ಲವ ಜನಾಂಗದವರಿಗೆ ಮಾತ್ರ ‘ಬಲೆ ನಲಿಪುಗ' ಜಿಲ್ಲಾಮಟ್ಟದ ನೃತ್ಯ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಬಿ.ಎಂ. ಮಣಿ ಮುಖೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ೨೦೨೨-೨೩ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಶೇ. ೮೫ಕ್ಕಿಂತ ಮೇಲ್ಪಟ್ಟ ಬಿಲ್ಲವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ನೃತ್ಯ ಸ್ಪರ್ಧೆಗೆ ಹೆಸರು ನೋಂದಾಯಿಸುವವರು ೯೮೪೪೧೩೫೫೮೩, ೯೯೮೦೨೯೬೫೨೬ ಸಂಖ್ಯೆಗೆ ಮಾಹಿತಿ ನೀಡುವಂತೆ ಉಪಾಧ್ಯಕ್ಷ ನಾಗೇಶ್ ಪೂಜಾರಿ ತಿಳಿಸಿದ್ದಾರೆ.